Ashika Ranganath ಕನ್ನಡ ಸಿನಿಮಾದಲ್ಲಿ ಸಾಕಷ್ಟು ವರ್ಷಗಳಿಂದಲೂ ಕೂಡ ನಾಯಕನಟಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಆಶಿಕ ರಂಗನಾಥ್(Ashika Ranganath) ರವರು ಮೊದಲ ದರ್ಜೆಯ ನಾಯಕ ನಟರ ಜೊತೆಗೆ ಕಾಣಿಸಿಕೊಳ್ಳುವ ಅವಕಾಶವನ್ನು ಹೊಂದಿಲ್ಲವಾದರೂ ಕೂಡ ಅತ್ಯಂತ ಬಹು ಬೇಡಿಕೆ ನಾಯಕ ನಟಿಯರಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಇನ್ನು ಇತ್ತೀಚಿಗಷ್ಟೇ ತೆಲುಗು(Tollywood) ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿರುವ ಆಶಿಕರಂಗನ ತೆಲುಗು ಚಿತ್ರರಂಗದಲ್ಲಿ ಮೊದಲ ಸಿನಿಮಾದ ಮೂಲಕವೇ ಈಗ ಅತ್ಯಂತ ಬಹು ಬೇಡಿಕೆಯ ನಟಿಯರ ಲಿಸ್ಟಿನಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಇತ್ತೀಚಿಗಷ್ಟೇ ಅವಾರ್ಡ್ ಕಾರ್ಯಕ್ರಮ ಒಂದರಲ್ಲಿ ಯೂಥ್ ಐಕಾನ್ ಪ್ರಶಸ್ತಿಯನ್ನು ಪಡೆದುಕೊಂಡಿರುವಂತಹ ಆಶಿಕ ರಂಗನಾಥ್ ರವರ ಬಳಿ ನಿಮ್ಮನ್ನು ಮದುವೆಯಾಗುವ ಹುಡುಗ ಯಾವ ರೀತಿ ಇರಬೇಕು ಎಂಬುದಾಗಿ ಕೇಳಿದಾಗ ನನ್ನನ್ನು ಅತ್ಯಂತ ಪ್ರೀತಿಸುವ ಹಾಗೂ ಕೇರ್ ಮಾಡುವಂತಹ ಹುಡುಗ ಆಗಿರಬೇಕು ಎಂಬುದಾಗಿ ಹೇಳಿದ್ದಾರೆ.
ಕೇವಲ ಎಷ್ಟು ಮಾತ್ರವಲ್ಲದೆ ನಟರನ್ನು ತೋರಿಸಿ ನಿಮ್ಮ ಗಂಡ ಯಾವ ರೀತಿ ಇರಬೇಕು ಎಂಬುದಾಗಿ ಕೇಳಿದಾಗ ಆಶಿಕ ರಂಗನಾಥ್ ರವರು ರಾಕಿಂಗ್ ಸ್ಟಾರ್ ಯಶ್(Rocking Star Yash) ರವರ ರೀತಿಯಲ್ಲಿ ಇರಬೇಕು ಎಂಬುದಾಗಿ ಹೇಳುವ ಮೂಲಕ ದೊಡ್ಡ ಸುದ್ದಿಯಲ್ಲಿದ್ದಾರೆ.