Prabhas ಸಿನಿಮಾದಿಂದ ಸಿನಿಮಾ ಗೆ ಪ್ರಭಾಸ್ ರವರು ಸಾಕಷ್ಟು ಸೋಲುಗಳನ್ನು ಕಾಣುತ್ತಿದ್ದಾರೆ ನಿಜ ಆದರೆ ಮತ್ತೊಂದು ಸಮಸ್ಯೆಯನ್ನು ಕೂಡ ಎದುರಿಸುತ್ತಿರುವುದು ಅವರ ಅಭಿಮಾನಿಗಳಿಗೆ ಈಗ ಚಿಂತಿಸುವಂತಹ ವಿಚಾರವಾಗಿದೆ. ಆದಿಪುರುಷ್(Adipurush) ಮೊದಲ ವಾರದ ಅಂತ್ಯಕ್ಕೆ ಖಂಡಿತವಾಗಿ ಉತ್ತಮ ಕಲೆಕ್ಷನ್ ಮಾಡಬಹುದು ಆದರೆ ನಂತರದ ದಿನಗಳಲ್ಲಿ ಸಿನಿಮಾ ಮತ್ತೆ ಮಖಾಡೆ ಮಲಗಿಕೊಳ್ಳಲಿದೆ.
ಯಾಕೆಂದರೆ ಸಿನಿಮಾ ಎಲ್ಲಾ ಕಡೆಯಿಂದಲೂ ಕೂಡ ನೆಗೆಟಿವ್ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದು ಸಿನಿಮಾಗೆ ಮುಂದಿನ ದಿನಗಳಲ್ಲಿ ಇದು ಸಾಕಷ್ಟು ನಷ್ಟವನ್ನು ತರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿನಿಮಾದಲ್ಲಿ ಸಾಕಷ್ಟು ತಪ್ಪುಗಳು ಸಿನಿಮಾದ ನಿರೀಕ್ಷೆಯನ್ನೇ ಪ್ರೇಕ್ಷಕರಲ್ಲಿ ಮರೆಮಾಡಿಸಿದೆ. ಇನ್ನು ಇದು ಪ್ರಭಾಸ್ ರವರ ಸಿನಿಮಾ ಬೇಡಿಕೆಗೆ ಕೂಡ ಬ್ರೇಕ್ ಹಾಕಿದೆ ಎಂದು ಹೇಳಬಹುದು.
ಈಗಾಗಲೇ ಸಾಹೋ ಹಾಗೂ ರಾಧೇಶ್ಯಾಮ್ ಸಿನಿಮಾಗಳ ಸೋಲಿನಿಂದಾಗಿ ಕಂಗಟ್ಟಿದ್ದ ಪ್ರಭಾಸ್(Prabhas) ರವರಿಗೆ ಈಗ ಆದಿಪುರುಷ್ ಸಿನಿಮಾ ಅವೆರಡನ್ನು ಒಟ್ಟಿಗೆ ಸೇರಿಸಿ ಅದಕ್ಕಿಂತಲೂ ಹೆಚ್ಚಿನ ನಷ್ಟವನ್ನು ಉಂಟು ಮಾಡಿದೆ ಎಂದರೆ ತಪ್ಪಾಗಲಾರದು. ಇದು ಕೇವಲ ಸಿನಿಮಾದ ಸೋಲು ಮಾತ್ರವಲ್ಲದೆ ಪ್ರಭಾಸ್ ರವರ ಬ್ರಾಂಡ್ ವ್ಯಾಲ್ಯೂ ಕಡಿಮೆಯಾಗುವುದಕ್ಕೆ ಕೂಡ ಕಾರಣವಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಪ್ರಮುಖವಾಗಿ ಅವರ ಮುಖದ ಚಹರೆ ಕೂಡ ಪ್ರತಿ ಸಿನಿಮಾಗಳಿಂದ ಸಿನಿಮಾಗಳಿಗೆ ಬದಲಾಗುತ್ತಿರುವುದು ಕೂಡ ಮುಂದಿನ ದಿನಗಳಲ್ಲಿ ಸಾಕಷ್ಟು ಕಷ್ಟವನ್ನು ಅವರಿಗೆ ತಂದೊಡಬಹುದು ಒಬ್ಬ ಸೂಪರ್ ಸ್ಟಾರ್ ಆಗಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಆನಂದಿಸಿದ್ದ ಅವರು ಮುಂದಿನ ದಿನಗಳಲ್ಲಿ ಬಾಹುಬಲಿಗೂ ಹಿಂದೆ ಇದ್ದಂತಹ ರೀತಿಯಲ್ಲಿ ಚಿಕ್ಕಮಟ್ಟದ ಸ್ಟಾರ್ ಗಿರಿಯನ್ನು ಕಾಣಬಹುದಾದಂತಹ ದಿನ ಕೂಡ ಸಾಕಷ್ಟು ದೂರವಿಲ್ಲ ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.