Ramcharan ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ಆಗಿರುವಂತಹ ರಾಮ್ ಚರಣ್ ಅವರು ಉಪಾಸನ(Upasana) ಅವರನ್ನು ಮದುವೆಯಾಗಿ ಭರ್ಜರಿ ಹತ್ತು ವರ್ಷಗಳೇ ಕಳೆದಿದೆ. ಹೇಗಿದ್ದರೂ ಕೂಡ ಇವರಿಬ್ಬರು ಯಾವುದೇ ಮಕ್ಕಳನ್ನು ಹೊಂದಿರಲಿಲ್ಲ. ದಂಪತಿಗಳಿಬ್ಬರಲ್ಲಿ ಕೂಡ ಸಾಕಷ್ಟು ಬೇಸರದ ವಿಚಾರವಾಗಿತ್ತು ಎನ್ನಬಹುದಾಗಿತ್ತು.
RRR ಸಿನಿಮಾದ ಯಶಸ್ಸಿನ ನಂತರ ಉಪಾಸನಾ ಅವರು ಗರ್ಭಿಣಿಯಾಗಿರುವ ಶುಭ ಸುದ್ದಿ ಪ್ರತಿಯೊಬ್ಬರಿಗೂ ಕೂಡ ತಿಳಿದುಬಂದಿತ್ತು. ಕೊನೆಗೂ ರಾಮಚರಣ್ ಅವರು ತಂದೆಯಾಗಲಿದ್ದಾರೆ ಎನ್ನುವಂತಹ ಶುಭ ಸುದ್ದಿ ಮೆಗಾ ಫ್ಯಾಮಿಲಿ ಸೇರಿದಂತೆ ಪ್ರತಿಯೊಬ್ಬ ಸಿನಿಮಾ ಅಭಿಮಾನಿಗಳನ್ನು ಕೂಡ ಕುಣಿದು ಕುಪ್ಪಳಿಸುವಂತೆ ಮಾಡಿತ್ತು.
ಈಗ RRR ಸಿನಿಮಾ ದೊಡ್ಡ ಮಟ್ಟದ ಗೆಲುವನ್ನು ಸಾಧಿಸಿದ ಬೆನ್ನೆಲೆ ರಾಮಚರಣ್ ಹಾಗೂ ಮೆಗಾಸ್ಟಾರ್ ಕುಟುಂಬಕ್ಕೆ ಕೂಡ ಒಂದು ದೊಡ್ಡ ಮಟ್ಟದ ಸಂತೋಷದ ಸುದ್ದಿ ಈಗ ಕೇಳಿ ಬಂದಿದ್ದು ಪ್ರತಿಯೊಬ್ಬರು ಕೂಡ ಇದನ್ನು ನೋಡಿ ಸಂತೋಷ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ ಅಷ್ಟಕ್ಕೂ ನಡೆದಿರುವುದಾದರೂ ಏನೆಂದು ತಿಳಿದುಕೊಳ್ಳೋಣ ಬನ್ನಿ.
ಹೌದು ಉಪಾಸನ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮೆಗಾಸ್ಟಾರ್ ಫ್ಯಾಮಿಲಿ(Megastar Family) ಈಗ ಮಹಾಲಕ್ಷ್ಮಿಯ ಆಗಮನವಾಗಿದೆ ಎಂಬುದಾಗಿ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ನೀವು ಕೂಡ ರಾಮಚರಣ್ ದಂಪತಿಗಳಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಶುಭಾಶಯಗಳನ್ನು ಕೋರಬಹುದಾಗಿದೆ.