ಮೂಲತಃ ನಮ್ಮ ಕರ್ನಾಟಕದ ಉಡುಪಿ ಜಿಲ್ಲೆಯವರಾದ ಪೂಜಾ ಹೆಗ್ಡೆಯವರು(Pooja Hegde) ಟಾಲಿವುಡ್ನಲ್ಲಿ ತಮ್ಮ ಅಪ್ರತಿಮಾ ಅಭಿನಯ ಹಾಗೂ ಸೌಂದರ್ಯದ ಮೂಲಕ ಮನೆ ಮಾತಾಗಿದ್ದಾರೆ. ಒಂದರ ಒಂದಾದ ನಂತರ ಮತ್ತೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಂತಹ ಪೂಜಾ ಹೆಗ್ಡೆ ಕಳೆದ ಕೆಲ ದಿನಗಳಿಂದ ಸತತ ಸೋಲನ್ನು ಅನುಭವಿಸುತ್ತಿದ್ದು,
ಡಾರ್ಲಿಂಗ್ ಪ್ರಭಾಸ್(Darling Prabhas) ಅವರ ರಾಧೇಶ್ಯಾಮ್ ದಿಂದ ಹಿಡಿದು ಬೆಸ್ಟ್ ಮತ್ತು ಆಚಾರ್ಯ ಸಿನಿಮಾದ ಬಳಿಕ ಪೂಜಾ ಹೆಗ್ಡೆ ಅಭಿನಯಿಸಿರುವಂತಹ ಯಾವ ಸಿನಿಮಾಗೂ ಕೂಡ ಹೇಳಿ ಕೊಳ್ಳುವಂತಹ ಸಕ್ಸಸ್ ಕಾಣುತ್ತಿಲ್ಲ. ಮಾಡುವಂತಹ ಎಲ್ಲಾ ಸಿನಿಮಾಗಳು ಕೂಡ ನೆಲಕಚ್ಚಿದ್ದು ಇದರಿಂದ ಪೂಜಾ ಹೆಗ್ಡೆ ಅವರಿಗೆ ಆಫರ್ಗಳು ಕೂಡ ಕೈತಪ್ಪಿ ಹೋಗುತ್ತಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ತುಂಬೆಲ್ಲ ನಟಿ ಪೂಜಾ ಕ್ರಿಕೆಟಿಗನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ
ಎಂಬ ವೈರಲ್ ಸುದ್ದಿ ಒಂದು ನೆಟ್ಟಿಗರ ಉಬ್ಬೇರುವಂತೆ ಮಾಡಿದೆ. ಹೌದು ಸ್ನೇಹಿತರೆ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನಟಿಯರ ಮ್ಯಾರೇಜ್ ಸುದ್ದಿಗಳು ಬಹುದೊಡ್ಡ ಮಟ್ಟದಲ್ಲಿ ಚರ್ಚೆಗೊಳಾಗುತ್ತಿದ್ದು, ಕೀರ್ತಿ ಸುರೇಶ್(Keerthi Suresh) ಗಾಯಕ ಅನಿರುದ್ಧ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ವೈರಲ್ ಮಾಹಿತಿ ಹಬ್ಬಿದ, ಬೆನ್ನಲ್ಲೇ ನಟಿ ತ್ರಿಶ(Trisha) ಕೂಡ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕೂಡ ಬಾರಿ ಸದ್ದು ಮಾಡಿತ್ತು ಇದೀಗ ನಟಿ ಪೂಜಾ ಹೆಗ್ಡೆ ಅವರ ಸರದಿ ಎಂದರೆ ತಪ್ಪಾಗಲಿಕ್ಕಿಲ್ಲ.
ಹೌದು ಗೆಳೆಯರೇ ಪೂಜಾ ಹೆಗ್ಡೆ ಕ್ರಿಕೆಟಿಗರೊಬ್ಬರನ್ನು ವರಿಸಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಟಾಲಿವುಡ್ ನ ಗಲ್ಲಿ ಗಲ್ಲಿಯಲ್ಲಿ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಆದರೆ ಆ ಕ್ರಿಕೆಟಿಗ ಯಾರಿರಬಹುದು ಎಂಬುದು ಎಲ್ಲಿಯೂ ಬಹಿರಂಗವಾಗಿಲ್ಲ. ನಟಿ ಪೂಜಾ ಹೆಗ್ಡೆ(Pooja Hegde) ಗೆ ಸೂಕ್ತವಾಗುವಂತಹ ಕ್ರಿಕೆಟರ್(cricketer) ಯಾರಿರಬಹುದು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದು ಇದಕ್ಕೆ ಸ್ವತಹ ಪೂಜಾ ಹೆಗ್ಡೆಯವರೇ ಉತ್ತರ ನೀಡಬೇಕಿದೆ.