Dr Bro: ಯೂಟ್ಯೂಬ್ ನಿಂದ ಡಾ. ಬ್ರೋಗೆ ಮೋಸ ಆಯ್ತಾ? ಎಲ್ಲರೆದುರು ಅನಾವರಣ ಆಯ್ತು ನೋಡಿ ಅಸಲಿ ಸತ್ಯ!

Dr Bro ಕನ್ನಡದಲ್ಲಿ ಯೂಟ್ಯೂಬ್ ಚಾನೆಲ್(YouTube Channel) ಇತ್ತೀಚಿನ ವರ್ಷಗಳಲ್ಲಿ ಪ್ರಚಲಿತಕ್ಕೆ ಬಂದಿದ್ದು ಅದರಲ್ಲಿಯೂ ಬೇರೆ ಬೇರೆ ಸ್ಥಳಕ್ಕೆ ಹೋಗಿ ಆ ಸ್ಥಳಗಳ ಪರಿಚಯ ಮಾಡುವಂತಹ ವ್ಲಾಗರ್ಗಳು ಕನ್ನಡ ಯೂಟ್ಯೂಬ್ ನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದ್ದರು. ಅವರಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡದ ಯೂಟ್ಯೂಬರ್(Kannada YouTubers) ಅಂದರೆ ಡಾ. ಬ್ರೋ.

ಜಾಗತಕ ಮಟ್ಟದಲ್ಲಿ ಬೇರೆ ಬೇರೆ ದೇಶಗಳಿಗೆ ಅದರಲ್ಲೂ ವಿಶೇಷವಾಗಿ ಗೊತ್ತು ಗುರಿ ಇಲ್ಲದ ದೇಶಗಳಿಗೆ ಭಾಷೆ ತಿಳಿಯದಿದ್ದರೂ ಕೂಡ ಅವರು ಒಬ್ಬಂಟಿಯಾಗಿ ಹೋಗುವಂತಹ ಧೈರ್ಯವನ್ನು ನೋಡಿಯೇ ಎಲ್ಲರೂ ಅವರ ಅಭಿಮಾನಿಗಳಾಗಿದ್ದಾರೆ. ಜಾಗದ ಕುರಿತಂತೆ ವಿಡಿಯೋದಲ್ಲಿ ಅವರು ಪರಿಚಯಿಸುವ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬರ ಗಮನವನ್ನು ಸೆಳೆಯುತ್ತದೆ.

ಇನ್ನು ಸದ್ಯಕ್ಕೆ ಡಾ. ಬ್ರೋ(Dr Bro) ಅವರ ಯುಟ್ಯೂಬ್ ಚಾನೆಲ್ ಒಂದು ಮಿಲಿಯನ್ ಸಬ್ಸ್ಕ್ರೈಬ್ರ್ಸ್ ಅನ್ನು ಪೂರೈಸಿದ್ದು ಇದೇ ಹಿನ್ನೆಲೆಯಲ್ಲಿ ಯೂಟ್ಯೂಬ್ ಇಂದ ಅಧಿಕೃತವಾಗಿ ಗೋಲ್ಡನ್ ಪ್ಲೇ ಬಟನ್ ಡಾ. ಬ್ರೋ ಅವರಿಗೆ ಸಿಕ್ಕಿದೆ. ಗೋಲ್ಡನ್ ಪ್ಲೇ ಬಟನ್ ಬಂದ ತಕ್ಷಣ ಡಾಕ್ಟರ್ ಬ್ರೋ ಕೂಡ ಅದು ಚಿನ್ನದ್ದ ಅಲ್ವಾ ಎನ್ನುವುದನ್ನು ಪರೀಕ್ಷಿಸಿದ್ದಾರೆ. ಗೋಲ್ಡನ್ ಪ್ಲೇ ಬಟನ್(Golden Play Button) ಅನ್ನು ಪರೀಕ್ಷಿಸಿದಾಗ ಡಾ. ಬ್ರೋಗೆ ಮಾತ್ರ ಶಾ’ ಕ್ ಕಾದಿತ್ತು.

ಹೌದು ಮಿತ್ರರೇ, ಅದನ್ನು ಸ್ಯಾಂಡ್ ಪೇಪರ್ ನಲ್ಲಿ ಉಜ್ಜಿದಾಗ ಒಳಗೆ ಕಬ್ಬಿಣದ ವಸ್ತು ಇರುವುದು ಕಂಡುಬಂದಿದ್ದು ಹೆಸರಿಗೆ ಮಾತ್ರ ಇದು ಗೋಲ್ಡನ್ ಪ್ಲೇ ಬಟನ್ ಎಂಬುದಾಗಿ ತಿಳಿದು ಬಂದಿದೆ. ಅದೇನೇ ಇರಲಿ ಗೋಲ್ಡನ್ ಪ್ಲೇ ಬಟನ್ ಕೇವಲ ಒಂದು ಮಿಲಿಯನ್ ಚಂದಾದಾರರನ್ನು ಹೊಂದಿರುವಂತಹ ಯುಟುಬರುಗಳಿಗೆ ಮಾತ್ರ ಸಿಕ್ಕೋದು ಹೀಗಾಗಿ ಇಂತಹ ಸಾಧನೆಯನ್ನು ಮಾಡಿರುವ ಡಾ ಬ್ರೋ(Dr Bro) ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ.

Leave a Comment