Bank Of Baroda: ಬ್ಯಾಂಕ್ ಆಫ್ ಬರೋಡಾದಲ್ಲಿ ನಿಮ್ಮ ಖಾತೆ ಇದ್ಯಾ? ಹಾಗಿದ್ರೆ ಈ ಸುದ್ದಿಯನ್ನು ತಪ್ಪದೇ ಓದಿ.

Banking Rules ಸ್ನೇಹಿತರೇ ಒಂದು ವೇಳೆ ನೀವು ಬ್ಯಾಂಕ್ ಆಫ್ ಬರೋಡದ(Bank Of Baroda) ಗ್ರಾಹಕರಾಗಿದ್ದಾರೆ ಖಂಡಿತವಾಗಿ ಇಂದು ನಾವು ಈ ಲೇಖನಿಯಲ್ಲಿ ಹೇಳಲು ಹೊರಟಿರುವಂತಹ ಪ್ರಕ್ರಿಯೆಗಳನ್ನು ನೀವು ಪೂರ್ಣಗೊಳಿಸಬೇಕು. ಬ್ಯಾಂಕ್ ಆಫ್ ಬರೋಡದ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ ಎನ್ನುವ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸದಿದ್ದರೆ ಖಾತೆಯನ್ನು ಕೂಡ ನಿಷ್ಕ್ರಿಯಗೊಳಿಸಬಹುದಾದ ಸಾಧ್ಯತೆ ಇದೆ ಎಂಬುದಾಗಿ ಬ್ಯಾಂಕಿನಿಂದಲೇ ವರದಿ ಬಂದಿದ್ದು ಭಾರತದ ರಿಸರ್ವ್ ಬ್ಯಾಂಕ್(Reserve Bank) ಕೂಡ ತನ್ನ ಬ್ಯಾಂಕುಗಳಿಗೆ ಕೆವೈಸಿಯನ್ನು ಪೂರ್ಣಗೊಳಿಸುವಂತೆ ಆದೇಶ ನೀಡಿದೆ.

ಈಗಾಗಲೇ ಬ್ಯಾಂಕ್ ಆಫ್ ಬರೋಡ(Bank Of Baroda) ತನ್ನ ಗ್ರಾಹಕರಿಗೆ ಎಸ್ಎಮ್ಎಸ್ ಹಾಗೂ ಇನ್ನಿತರ ಸಂಪನ್ಮೂಲಗಳ ಮುಖಾಂತರ ಕೆ ವೈ ಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಆದೇಶವನ್ನು ನೀಡಿದ್ದು ಇದನ್ನು ಮಾಡದಂತಹ ಖಾತೆಗಳನ್ನು ನಿಷ್ಕ್ರಿಯಗೊಳಿಸಬಹುದಾದ ಸಾಧ್ಯತೆ ಕೂಡ ಇದ್ದು ಮಾರ್ಚ್ 24 ಇದಕ್ಕೆ ಕೊನೆಯ ದಿನಾಂಕವಾಗಿತ್ತು. ಒಂದು ವೇಳೆ ಬ್ಯಾಂಕ್ ನಿಮಗೆ ಕರೆ ಮಾಡಿ ಕೇಳಿದಂತಹ ದಾಖಲೆಗಳನ್ನು ನೀವು ಸಲ್ಲಿಸಿ, ಕೆವೈಸಿ(KYC) ಅನ್ನು ಪೂರ್ತಿ ಗೊಳಿಸಿದರೆ ಮಾತ್ರ ನೀವು ಈ ಪ್ರಕ್ರಿಯೆಯಲ್ಲಿ ಭಾಗಿಯಾದಂತೆ ಆಗುತ್ತದೆ.

ಈಗಾಗಲೇ ಹಲವಾರು ಪ್ರಕ್ರಿಯೆಗಳ ಕಾರಣದಿಂದಾಗಿ ಪ್ರತಿಬಾರಿ ಕೆವೈಸಿಯನ್ನು ಗ್ರಾಹಕರು ಬ್ಯಾಂಕಿಗೆ ಹೋಗಿ ಮಾಡಿಸಿಕೊಳ್ಳಬೇಕಾಗಿತ್ತು, ಆದರೆ ಈಗ ಬಂದಿರುವಂತಹ ಸೆಂಟ್ರಲ್ ಕೆವೈಸಿ ಪ್ರಕ್ರಿಯೆ ಮೂಲಕ ನೀವು ಈ ರೀತಿ ಪದೇಪದೇ ಕೆವೈಸಿಯನ್ನು ದಾಖಲಿಸುವ ಅಗತ್ಯವಿರುವುದಿಲ್ಲ. ಸೆಂಟ್ರಲ್ ಕೆ ವೈ ಸಿ(Central KYC) ಎನ್ನುವುದು ಬ್ಯಾಂಕಿನ ಮೂಲಕ ನೀವು ನಡೆಸಬಹುದಾದ ಎಲ್ಲಾ ವ್ಯವಹಾರಗಳಿಗೂ ಕೂಡ ಒಂದು ಸಂಪೂರ್ಣ ಪರಿಹಾರ ಎಂದು ಹೇಳಬಹುದು.

ಅಡ್ರೆಸ್ ಪ್ರೂಫ್(Address Proof) ಪಾನ್ ಕಾರ್ಡ್ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಸೇರಿದಂತೆ ಬ್ಯಾಂಕಿನವರು ಕೇಳುವಂಥ ಕೆಲವೊಂದು ಅಧಿಕೃತ ದಾಖಲೆಗಳನ್ನು ನೀಡಬೇಕು. ನೀವು ಕೊಟ್ಟಿರುವ ದಾಖಲೆಗಳು ಹಾಗೂ ಬ್ಯಾಂಕ್ ಖಾತೆಯ ದಾಖಲೆಗಳು ಒಂದೇ ಆಗಿದ್ದರೆ ಎರಡು ಸಮವಾಗಿದೆ ಎಂದು ಅರ್ಥ. ಹೀಗಾಗಿ ಒಂದು ವೇಳೆ ದಿನಾಂಕ ಮೀರಿದ್ದರೂ ಕೂಡ ನಿಮ್ಮ ಹತ್ತಿರದ ಬ್ರಾಂಚ್ ಗೆ ಹೋಗಿ ಈ ಕುರಿತಂತೆ ಮಾಹಿತಿ ಪಡೆಯುವುದು ಉತ್ತಮ.

Leave a Comment