ನಿಮ್ಮಲ್ಲಿ ದೈವ ಶಕ್ತಿ ಇದೆ ಅನ್ನೋ ಸೂಚನೆಗಳಿವು

ಕೆಲವರಿಗೆ ಮುಂದೆ ಏನಾಗುತ್ತದೆ ಎಂದು ಮೊದಲೇ ಗೊತ್ತಾಗತ್ತೆ, ಹಾಗೆ ಕೆಲವರಿಗೆ ಕೆಲವು ದೈವೀ ಶಕ್ತಿಗಳು ಕೂಡ ಇರುತ್ತವೆ. ಇದರಿಂದಲೇ ಅಲ್ಲವೇ ಮಾನವರಾಗಿ ಹುಟ್ಟಿದ ಸಾಯಿ ಬಾಬಾ ಜನರ ಕಷ್ಟಗಳನ್ನ ಹೇಳುವ ಮೊದಲೇ ಅರಿತು ಸಮಸ್ಯೆಗಳನ್ನ ಬಾಗೆ ಹರಿಸಿ ದೇವ ಮಾನವರಾಗಿದ್ದು. ನಮ್ಮಲ್ಲಿಯೂ ಸಹ ಅಂತಹುದೇ ಶಕ್ತಿಗಳನ್ನು ಹೊಂದಿದ ಜನರು ಇರಬಹುದು ಆದರೆ ಅವರಷ್ಟು ಶಕ್ತಿ ಇಲ್ಲದಿದ್ದರೂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಕೆಲವು ಶಕ್ತಿಗಳು ಇರಬಹುದು. ಇಂದು ನಾವು ನಿಮಗೆ ದೈವೀ ಶಕ್ತಿ ಇದೆ ಅಂತ ತಿಳಿಯೋದು ಹೇಗೆ ಅನ್ನೋದರ ಬಗ್ಗೆ ಕೆಲವು ಅಂಶಗಳನ್ನು ತಿಳಿಸಿಕೊಡುತ್ತೀವಿ ಓದಿ ತಿಳಿದುಕೊಳ್ಳಿ.

ನೀವು ಕೆಲಸ ಮಾಡುವಾಗ ಈ ಕೆಲಸವನ್ನು ನಾವು ಈಗಾಗಲೇ ಮಾಡಿದ್ದೇವೆ ಅನಿಸುತ್ತದೆ. ಅಷ್ಟೇ ಅಲ್ಲ ಈ ಕೆಲಸವನ್ನು ಮಾಡಿದರೆ ಮುಂದೆ ಏನಾಗುತ್ತದೆ ಎಂಬುದು ಸಹ ತಿಳಿದಿರುತ್ತದೆ. ಆ ಸಮಯದಲ್ಲಿ ನಿಮ್ಮ ಬಗ್ಗೆ ನಿಮಗೆ ಆಶ್ಚರ್ಯ ಎನಿಸುತ್ತದೆ. ಯಾರಿಗೆ ದೈವೀ ಶಕ್ತಿ ಇರುತ್ತದೆಯೋ ಅವರಿಗೆ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಸರಿಯಾಗಿ ನಿದ್ರೆ ಬರಲ್ಲ. ಜನಗಳ ಮಧ್ಯೆ ಇರುವಾಗ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂಬುದು ಕೆಲವರಿಗೆ ಸುಲಭವಾಗಿ ಬೇಗ ತಿಳಿಯುತ್ತದೆ. ಹಾಗೆ ಬೇರೆಯವರು ಮನದಲ್ಲಿ ಏನು ಆಲೋಚನೆ ಮಾಡುತ್ತಾ ಇದ್ದಾರೆ ಎಂಬುದು ಸಹ ತಿಳಿಯುತ್ತದೆ.

ರಾತ್ರಿ ಕಂಡ ಕನಸು ಕೆಲವರಿಗೆ ಮರೆತು ಹೋಗಿರುತ್ತದೆ. ಆದರೆ ದೈವೀ ಶಕ್ತಿ ಇರುವವರು ರಾತ್ರಿ ಏನು ಕನಸು ಕಂಡೆ ಎಂಬುದನ್ನ ಬೆಳಿಗ್ಗೆ ಹೇಳುತ್ತಾರೆ. ಯಾರು ಕನಸನ್ನ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ ಅವರಿಗೆ ದೈವೀ ಶಕ್ತಿ ಇದೆ ಎಂದು ಅರ್ಥ. ಬೆಳಗಿನ ಜಾವ ೩-೫ ಗಂಟೆಯವರೆಗೂ ಈ ಅವಧಿಯಲ್ಲಿ ಸರಿಯಾಗಿ ನಿದ್ದೆ ಬಾರದೆ ಇದ್ದರೆ ಅವರಿಗೆ ದೈವೀ ಶಕ್ತಿ ಇದೆ ಎಂದು ಅರ್ಥ. ಕಾರಣ ಈ ಸಮಯ ಬ್ರಹ್ಮ ಮುಹೂರ್ತ ಆಗಿದ್ದು ದೇವರಿಗೆ ಇಷ್ಟವಾದ ಸಮಯ ಆಗಿರುತ್ತದೆ.

ನಾವು ಎಲ್ಲಿಯಾದರೂ ಪ್ರಯಾಣ ಮಾಡುವಾಗ ಅಥವಾ ಒಬ್ಬರೇ ಇದ್ದಾಗ ಯಾರೋ ಒಬ್ಬರು ಬಂದು ಅವರ ಕಷ್ಟಗಳನ್ನ ಹೇಳಿಕೊಳ್ಳುತ್ತಾರೆ. ಕಾರಣ ದೈವೀ ಶಕ್ತಿ ಇರುವವರ ಕಡೆ ಕಷ್ಟ ಇರುವ ಜನರು ಆಕರ್ಷಿತರಾಗುತ್ತಾರೆ. ದೈವೀ ಶಕ್ತಿ ಇರುವವರ ಜೊತೆ ನಾಯಿ, ಬೆಕ್ಕು ಮತ್ತು ಇತರೆ ಪ್ರಾಣಿಗಳು ಬಹಳ ಅನ್ಯೋನ್ಯ ಸಂಬಂಧ ಹೊಂದಿರುತ್ತವೆ ಹಾಗೂ ಪ್ರಾಣಿಗಳು ಅಂತಹ ವ್ಯಕ್ತಿಯನ್ನು ನೋಡಿ ಕೂಗುತ್ತವೆ. ಕಾರಣ ದೈವೀ ಶಕ್ತಿ ಇರುವವರನ ಅವು ಬೇಗ ಗುರುತು ಹಿಡಿಯುತ್ತವೆ.

ಯಾರೇ ಕಷ್ಟದಲ್ಲಿ ಇದ್ದಾಗ ಅದು ನಿಮ್ಮ ಶತ್ರುಗಳು ಆಗಿರಬಹುದು ಕಷ್ಟದಲ್ಲಿ ಇದ್ದಾಗ ಅವರಿಗೆ ಸಹಾಯ ಮಾಡಬೇಕೆಂಬ ಮನಸ್ಸು ನಿಮ್ಮ ಹೃದಯದಲ್ಲಿ ಹುಟ್ಟಿದರೆ ನಿಮಗೆ ದೈವೀ ಶಕ್ತಿ ಇದೆ ಎಂದು ಅರ್ಥ. ದೈವೀ ಶಕ್ತಿ ಇರುವವರು ಎಂದರೆ ದೇವರೇ ಎಂದು ಅರ್ಥ ಅಲ್ಲ. ಪ್ರಪಂಚದಲ್ಲಿ ಒಳ್ಳೆಯ ರೀತಿ ನೀತಿಯಲ್ಲಿ ನಡೆಯುವವರು ಎಂದು ಅರ್ಥ.

Leave a Comment