ಈಗ ಮನೋರಂಜನೆಗಾಗಿ ಸಿನಿಮಾವನ್ನೋ, ಸೀರಿಯಲ್ ಗಳನ್ನೋ ಅವಲಂಬಿಸಬೇಕಾಗಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅತ್ಯಂತ ಮನೋರಂಜನೆಯನ್ನು ನೀಡುವುದಕ್ಕಾಗಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ. ಹಾಗಾಗಿ ವಾರಾಂತ್ಯದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಿಗೆ ಜನ ಕಾದು ಕುಳಿತಿರುತ್ತಾರೆ.
ಹೌದು, ಕನ್ನಡದ ಬಹುತೇಕ ಎಲ್ಲಾ ವಾಹಿನಿಗಳಲ್ಲಿಯೂ ವಾರಾಂತ್ಯದಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಪ್ರಸಾರವಾಗುತ್ತವೆ ಅದರಲ್ಲೂ ಕಲರ್ಸ್ ಕನ್ನಡ ಪ್ರಸಾರ ಮಾಡುವ ಎಲ್ಲಾ ರಿಯಾಲಿಟಿ ಶೋಗಳು ಒಂದಕ್ಕಿಂತ ಒಂದು ಹಿಟ್ ಆಗಿವೆ. ಇತ್ತೀಚಿಗೆ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಕೊನೆಗೊಂಡಿದೆ. ಅದರ ಬೆನ್ನಲ್ಲೇ ಗಿಚ್ಚಿ ಗಿಲಿ ಗಿಲಿ ಎನ್ನುವ ಕಾಮಿಡಿ ಶೋ ಒಂದು ಆರಂಭವಾಯಿತು. ಆರಂಭದಲ್ಲಿ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಬಂದಿತ್ತು. ಅಲ್ಲದೆ ಟಿ ಆರ್ ಪಿ ರೇಟ್ ಕೂಡ ಎಲ್ಲಾ ಶೋಗಳಿಗಿಂತಲೂ ದುಪ್ಪಟ್ಟು ಹೆಚ್ಚಾಗಿತ್ತು. ಇದಕ್ಕೆ ಮುಖ್ಯ ಕಾರಣವೇನೆಂದರೆ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ವಂಶಿಕ ಎನ್ನುವ ಪುಟ್ಟ ಪೋರಿಯ ಪೋಕರಿ.
ನಮ್ಮಮ್ಮ ಸೂಪರ್ ಸ್ಟಾರ್ ಪಟ್ಟವನ ಗೆದ್ದುಕೊಂಡ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಹಾಗೂ ಅವರ ಮಗಳು ವಂಶಿಕ ಕರುನಾಡಿನಲ್ಲಿ ತುಂಬಾನೇ ಫೇಮಸ್ ಆಗಿದ್ದಾರೆ ಅದರಲ್ಲೂ ವಂಶಿಕ ಅವಳ ಚಟಪಟ ಅನ್ನುವ ಮಾತು ಜನರಿಗೆ ಅದೆಷ್ಟು ಇಷ್ಟವಾಗಿಬಿಟ್ಟಿದೆ ಅಂದ್ರೆ ತಮ್ಮ ಮನೆಯ ಪುಟ್ಟ ಪೋರಿ ಅಂತಲೇ ಆಕೆಯನ್ನ ಕರೆಯುತ್ತಾರೆ. ವಂಶಿಕ ಎಕ್ಸ್ಟ್ರಾ ಆರ್ಡಿನರಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾಳೆ. ಥೇಟ್ ಅಪ್ಪನಂತೆ ಇವಳಿಗೂ ಸಾಕಷ್ಟು ಟ್ಯಾಲೆಂಟ್ ಇದೆ ಅಂತ ಜನ ಮಾತನಾಡಿಕೊಳ್ಳುತ್ತಾರೆ.ಮೊದಲಿಗೆ ಸುದ್ದಿ ಮಾಡಿದ್ದು ಬಂದಿದ್ದು, ಹಾಸ್ಯಗಾರ ಹಾಗೂ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಸ್ಪೊಟ್ಸ್ ನಿರೂಪಕಿ ರೀನಾ ಡಿಸೋಜಾ ಅವರ ನಿರೂಪಣೆ.
ರೀನಾ ಡಿಸೋಜಾ ಅವರಿಗೆ ಯಾಕೋ ಈ ಕಾರ್ಯಕ್ರಮದಲ್ಲಿ ಅಷ್ಟು ಗ್ರಿಪ್ ಸಿಗಲೆ ಇಲ್ಲ ಹಾಗಾಗಿ ವೇದಿಕೆ ಹೆಚ್ಚಾಗಿ ಆವರಿಸಿಕೊಂಡು ಮಂಜು ಪಾವಗಡ ಅವರು ಕಾಮಿಡಿ ಅನ್ನ ಏನು ಮಾಡುತ್ತಿದ್ದರು. ಆದರೆ ಅವರಿಗೆ ಭಾಷೆಯ ಮೇಲೆ ಅಷ್ಟು ಹಿಡಿತ ಇರ್ಲಿಲ್ಲ ಅವರು ಉತ್ತಮ ಹಾಸ್ಯಗಾರ ಎನ್ನುವುದು ನಿಜ ಆದರೆ ಒಬ್ಬ ನಿರೂಪಕನಾಗಿ ಅವರಿಗೆ ಅಷ್ಟು ಸಕ್ಸಸ್ ಆಗೋದಕ್ಕೆ ಆಗಲಿಲ್ಲ ಹಾಗಾಗಿ ಈ ಇಬ್ಬರು ನಿರೂಪಕರನ್ನು ಬದಲಾಯಿಸಲಾಯಿತು. ಕೊನೆಗೆ ನಿರೂಪಣೆಯಲ್ಲಿ ಸಾಕಷ್ಟು ಅನುಭವವಿದ್ದ ನಿರಂಜನ್ ದೇಶಪಾಂಡೆ ಈ ಕಾರ್ಯಕ್ರಮವನ್ನು ಸುಲಭವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಏನು ತೀರ್ಪುಗಾರರಾಗಿ ಸೃಜನ್ ಲೋಕೇಶ್ ಹಾಗೂ ನಟಿ ಶ್ರುತಿ ಕಾರ್ಯಕ್ರಮದ ಮೆರೆಗನ ಇನ್ನಷ್ಟು ಹೆಚ್ಚಿಸಲು ಕಾರಣರಾದರು. ಆದರೆ ಇವೆಲ್ಲವೂ ಕೆಲವು ಸಮಯ ಚೆನ್ನಾಗಿತ್ತು ಅಷ್ಟೇ ಆದರೆ ಇತ್ತೀಚಿಗೆ ಜನ ಈ ಶೋಗೆ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ ಇದಕ್ಕೆ ಕಾರಣ ಏನು ಗೊತ್ತಾ!
ಗೀಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗುವ ಪ್ರತಿಯೊಂದು ಸ್ಕಿಟ್ಟಗಳು ಕೂಡ ಡಬಲ್ ಮೀನಿಂಗ್ ನಿಂದಲೇ ಕೂಡಿರುತ್ತವೆ. ಕಾಮಿಡಿ ಅಂದ್ರೆ ಡಬಲ್ ಮೀನಿಂಗ್ ಡಬಲ್ ಮೀನಿಂಗ್ ಅಂದ್ರೆ ಕಾಮಿಡಿ ಅನ್ನೋವಷ್ಟರ ಮಟ್ಟಿಗೆ ಎಲ್ಲಾ ಸ್ಕಿಟ್ ನಲ್ಲಿಯೂ ಡಬಲ್ ಮೀನಿಂಗ್ ಡೈಲಾಗ್ ಅನ್ನು ತುಂಬಿಸಲಾಗುತ್ತೆ. ಹೋಗ್ಲಿ ದೊಡ್ಡವರು ಇಂತಹ ಕಿಟ್ ಗಳನ್ನ ಮಾಡಿ ಡಬಲ್ ಮೀನಿಂಗ್ ಮಾತನಾಡೋದು ಓಕೆ ಅನ್ನೋಣ ಆದರೆ ಆ ಪುಟ್ಟ ವಂಶಿಕ ಬಾಯಲ್ಲಿಯೂ ಕೂಡ ಇಂತಹ ಕೆಲವು ಡೈಲಾಗ್ಗಳನ್ನು ಹೇಳಿಸುತ್ತಾರೆ ಮೆಂಟರ್ ಗಳು. ಆ ಡೈಲಾಗ್ಗಳ ಅರ್ಥವೇನು? ಜನ ಅದಕ್ಕೆ ಯಾಕೆ ನಗುತ್ತಿದ್ದಾರೆ ಅನ್ನೋದು ಕೂಡ ಗೊತ್ತಾಗದ ವಯಸ್ಸು ಅವಳದ್ದು. ನಾನು ಮಾತನಾಡಿದರೆ ನಗ್ತಾರಲ್ಲ ಅಂತ ಮಾತುಗಳನ್ನ ಆಕೆ ಆಡುತ್ತಾಳೆ. ಆದರೆ ನಿಜವಾಗಿಯೂ ವಂಶಿಕ ಬಳಿ ಇಂಥದೆಲ್ಲ ಮಾಡಿಸಬೇಕಾ ಅಂತ ಜನ ಸಿಟ್ಟಿಗೆದ್ದಿದ್ದಾರೆ. ಈ ಕಾರ್ಯಕ್ರಮವನ್ನು ನಿಲ್ಲಿಸಿ ಬಿಡಬೇಕು ಅಂತ ಜನ ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮವನ್ನು ಸೃಜನ್ ಲೋಕೇಶ್ ಈಗಾಗಲೇ ಬಿಟ್ಟಿದ್ದಾರೆ ಅವರು ಈ ಮೊದಲು ರಾಜರಾಣಿ ಶೋ ದಲ್ಲಿ ತಾರಮ್ಮನ ಜೊತೆ ಜಡ್ಜ್ ಆಗಿದ್ದವರು. ಇದೀಗ ರಾಜ ರಾಣಿ 2 ಆರಂಭವಾಗಿದೆ. ಹಾಗಾಗಿ ಈಗಾಗಲೇ ಬಿಟ್ಟು ರಾಜಾರಾಣಿ ಶೋಗೆ ಮತ್ತೆ ಮರಳಿದ್ದಾರೆ ಸೃಜನ್ ಲೋಕೇಶ್. ಗಿಚ್ಚಿ ಗಿಲಿ ಗಿಲಿ ವಿಷಯವನ್ನು ಸ್ವಲ್ಪಮಟ್ಟಿಗೆ ಹಿಟ್ ಮಾಡುವುದಕ್ಕಾಗಿ ಸೃಜನ್ ಇಲ್ಲಿಗೆ ಬಂದಿದ್ದವರು ಹಾಗಾಗಿ ಅವರು ಇಲ್ಲ ಇದನ್ನ ಬಿಟ್ಟು ಈಗ ರಾಜ ರಾಣಿ ಶೋಗೆ ಹೋಗಿದ್ದಾರೆ. ಸೃಜನ್ ಲೋಕೇಶ್ ಅವರ ಜಾಗವನ್ನು ಈಗಾಗಲೇ ಸಾಧು ಕೋಕಿಲ ಭರ್ತಿ ಮಾಡಿದ್ದಾರೆ.
ಒಟ್ಟಿನಲ್ಲಿ ಕೇವಲ ಮನರಂಜನೆ ಚಾನಲ್ ಇದೇ ಉದ್ದೇಶವನ್ನು ಇಟ್ಟುಕೊಂಡು ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಮನೆಯವರೆಲ್ಲರೂ ಕುಳಿತು ಆರಾಮಾಗಿ ನೋಡುವಂತಹ ಇದಾಗಿಲ್ಲ. ಹಾಗಾಗಿ ಗಿಚ್ಚಿ ಗಿಲಿ ಗಿಲಿಯಲಿ ಡಬ್ಬಲ್ ಮೀನಿಂಗ್ ಹೊರತಾಗಿಯೂ ಕೂಡ ಹಾಸ್ಯ ಮಾಡಬಹುದು ಅನ್ನೋದನ್ನ ಅರಿತುಕೊಳ್ಳುವ ಅಗತ್ಯವಿದೆ.