ಅಂಬಾನಿ ಕುಟುಂಬದ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರು ಇಲ್ಲ. ಅದರಲ್ಲೂ ಮುಖೇಶ್ ಅಂಬಾನಿ ಪ್ರಪಂಚದಲ್ಲಿ ಅತಿ ಶ್ರೀಮಂತ ಜನರ ಪಟ್ಟಿಯಲ್ಲಿ ಸೇರುತ್ತಾರೆ. ಇನ್ನು ಮುಖೇಶ್ ಅಂಬಾನಿ ಬಳಿ ಎಷ್ಟು ದುಡ್ಡಿರಬಹುದು ಅಂತ ಸಾಮಾನ್ಯವಾಗಿ ಗೆಸ್ ಮಾಡುವುದು ಕಷ್ಟ. ಮುಕೇಶ್ ಅಂಬಾನಿಯಂತೆಯೇ 200 ಕುಬೇರ ಅಂದ್ರೆ ದುಬೈ ಶೇಖ್ ಹಮ್ದನ್. ಇವರಿಬ್ಬರಲ್ಲಿ ಯಾರು ಅತಿ ದೊಡ್ಡ ಶ್ರೀಮಂತರು ಅಂತ ನಿಜಕ್ಕೂ ಹೇಳೋದು ಕಷ್ಟ ಆದರೂ ಇವರಿಬ್ಬರ ಲೈಫ್ ಸ್ಟೈಲ್ ಹಾಗೂ ಇವರ ಬಳಿ ಇರುವ ಹಣದ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ.
ಮುಖೇಶ್ ಅಂಬಾನಿಯವರು ಗಂಟೆಗೆ ಸುಮಾರು 90 ಕೋಟಿಯಷ್ಟು ಹಣವನ್ನು ಗಳಿಸುತ್ತಾರೆ. ಫೋರ್ಬ್ಸ್ ಪ್ರಕಟಿಸಿರುವ 2021ರ ವರದಿಯ ಪ್ರಕಾರ, ಮುಕೇಶ್ ಅಂಬಾನಿ ಅವರ ಬಳಿ 85 ಬಿಲಿಯನ್ ಡಾಲರ್ ಅಂದರೆ ಸುಮಾರು 6 ಲಕ್ಷ ಕೋಟಿಯಷ್ಟು ಹಣವಿದೆ. ಅದೇ ರೀತಿ ದುಬೈ ಶೇಖ್ ಹತ್ರ 18 ಮಿಲಿಯನ್ ಡಾಲರ್ ಇದೆ ಅಂತ ಫೋಭ್ಸ್ ಪ್ರಕಟಿಸಿತ್ತು. ಆದರೆ ಈ ಮಾಹಿತಿ ತಪ್ಪು ನನ್ನ ಬಳಿ ಇದಕ್ಕಿಂತ ಹೆಚ್ಚು ಹಣ ಇದೆ ಅಂತ ಶೇಕ್ ಹೇಳಿಕೊಂಡಿದ್ದರು. ಶೇಕ್ ಹಣವನ್ನು ನೀರು ಖರ್ಚು ಮಾಡಿದಂತೆ ಖರ್ಚು ಮಾಡುತ್ತಾರೆ ಅವರ ಐಷಾರಾಮಿ ಜೀವನವನ್ನು ನೋಡಿದರೆ ದಂಗಾಗಿ ಬಿಡುತ್ತೀರಿ.
ಮುಕೇಶ್ ಅಂಬಾನಿ ಅವರು ತಮ್ಮ ಫ್ಯಾಮಿಲಿ ಗೋಸ್ಕರ ಕುಟುಂಬದ ಕಾರ್ಯಕ್ರಮಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಾರೆ ಗೊತ್ತಾ. ಅವರ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ ಮುಕೇಶ್ ಅಂಬಾನಿ, ಜಗತ್ತಿನಲ್ಲಿ ಅತಿ ದುಬಾರಿ ಮದುವೆ ಅಂತ ಈ ಮದುವೆ ಕರೆಸಿಕೊಂಡಿತ್ತು. ಈ ಮದುವೆಯಲ್ಲಿ ಮುಕೇಶ್ ಅಂಬಾನಿ ಮಗಳು ತೊಟ್ಟ ಡ್ರೆಸ್ಸಿನ ಬೆಲೆ ಬರೋಬರಿ 90 ಕೋಟಿ ರೂಪಾಯಿ ಹಾಗೆಯೇ ಅವರ ಮದುವೆಯ ಇನ್ವಿಟೇಶನ್ ಒಂದರ ಬೆಲೆ ಐದು ಲಕ್ಷ ರೂಪಾಯಿ. ಇನ್ನು ಮುಖೇಶ್ ಅಂಬಾನಿ ತನ್ನ ಪತ್ನಿ ನೀತಾ ಅಂಬನಿಗೋಸ್ಕರ 220 ಕೋಟಿ ರೂಪಾಯಿ ಖರ್ಚು ಮಾಡಿ ಬರ್ತಡೆ ಸೆಲೆಬ್ರೇಟ್ ಮಾಡಿದ್ದರು. ಇದಕ್ಕೆ ಜಗತ್ತಿನ ಅತಿ ಶ್ರೀಮಂತ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇನ್ನು ಈ ಅತಿಥಿಗಳ ಸ್ವಾಗತಕ್ಕೆ 32 ಚಾರ್ಟೆಡ್ ಫ್ಲೈಟ್ ಗಳನ್ನ ಬುಕ್ ಮಾಡಿದ್ದರು ಮುಖೇಶ್ ಅಂಬಾನಿ.
ಇನ್ನು ದುಬೈ ಶೇಖ್ ಅವರ ಮದುವೆ ಸಮಾರಂಭಗಳನ್ನು ನೋಡುವುದಾದರೆ ಇದು ಇನ್ನೂ ಅದ್ದೂರಿಯಾಗಿ ಇರುತ್ತೆ ಇಲ್ಲಿ ಜಗತ್ತಿನ ಅತಿ ಹೆಚ್ಚು ಶ್ರೀಮಂತ ವ್ಯಕ್ತಿಗಳು ಆಗಮಿಸುತ್ತಾರೆ ಅಷ್ಟೇ ಅಲ್ಲ ದುಬೈ ಶೇಕ್ ಮದುವೆ ಸಮಾರಂಭಕ್ಕೆ ಬಂದ ಗಣ್ಯರಿಗೆ ಕಾರ್ ಗಿಫ್ಟ್ ಮಾಡುತ್ತಾರಂತೆ. ಅಲ್ಲದೆ ಮದುವೆ ಕಾರ್ಯಕ್ರಮಕ್ಕೆ ತರಿಸುವ ಹೂವುಗಳಿಗೆ ನೂರಾರು ಕೋಟಿ ಹಣ ಖರ್ಚು ಮಾಡುತ್ತಾರೆ. ಇನ್ನು ಸೆಲೆಬ್ರಿಟಿಗಳನ್ನು ನೋಡೋದಕ್ಕೆ ದುಬೈ ಶೇಕ್ ಬೇರೆ ಕಡೆಗೆ ಹೋಗಬೇಕಿಲ್ಲ ಜಗತ್ತಿನ ಅತಿ ಮುಖ್ಯ ಸೆಲೆಬ್ರೇಟಿಗಳು ಕೂಡ ದುಬೈ ಶೇಕ್ ಅವರನ್ನು ನೋಡೋದಕ್ಕೆ ಅವರಿದ್ದಲ್ಲಿಗೆ ಬರುತ್ತಾರೆ. ಇನ್ನು ಬಾಲಿವುಡ್ ಹಾಗೂ ಹಾಲಿವುಡ್ ನ ಸಿನಿಮಾ ತಾರೆಯರನ್ನ ದುಬೈ ಶೇಕ್ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದುಬೈಗೆ ಕರೆಸಿಕೊಳ್ಳುತ್ತಾರೆ.
ಇನ್ನು ಮುಕೇಶ್ ಅಂಬಾನಿ ತನ್ನ ಪತ್ನಿಯ ಹುಟ್ಟುಹಬ್ಬಕ್ಕೆ 400 ಕೋಟಿ ಗಿಫ್ಟ್ ಆಗಿ ಕೊಟ್ಟಿದ್ರು. ಅದರಂತೆ ದುಬೈಶಕ ಕೂಡ ಹಲವಾರು ಓನರ್ ಆಗಿದ್ದಾರೆ. ಶೇಖ್ ಹಮ್ದನ್ ಹತ್ರ ಇರುವ ಯೂತ್ ನ ಬೆಲೆ ಬರೋಬ್ಬರಿ ನಾಲ್ಕು ಸಾವಿರ ಕೋಟಿ ರೂಪಾಯಿ. ಒಟ್ಟಿನಲ್ಲಿ ಪುರಾಣಗಳಲ್ಲಿ ಹೇಳುವ ಕುಬೇರ ಎಷ್ಟು ಶ್ರೀಮಂತನಾಗಿದ್ದನೋ ಗೊತ್ತಿಲ್ಲ, ಆದರೆ ಅಂಬಾನಿ ಹಾಗೂ ಶೇಖ್ ಗಳನ್ನ ನೋಡಿದ್ರೆ ಕುಬೇರ ಅಂದ್ರೆ ಹೀಗೆ ಇದ್ದ ಅಂತ ಊಹಿಸಿಕೊಳ್ಳಬಹುದು!