ಮೂಲಂಗಿ ಸೇವನೆ ಮಾಡುತ್ತಿದ್ದರೆ ಇದರಲ್ಲಿರುವ ಆರೋಗ್ಯಕಾರಿ ಗುಣಗಳನ್ನು ತಿಳಿದುಕೊಳ್ಳಿ

ಸಸ್ಯಹಾರಿ ತರಕಾರಿಗಳಲ್ಲಿ ಮೂಲಂಗಿ ಕೂಡ ಒಂದು.ಇದು ರುಚಿಯಷ್ಟೇ ನೀಡುವುದಿಲ್ಲ ಅದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ.ಸಾಲಾಡ್ ಒಂದೇ ಅಲ್ಲದೆ ಬಗೆ ಬಗೆಯಾಗಿ ಮೂಲಂಗಿಯನ್ನು ಸೇವಿಸಲಾಗುತ್ತದೆ.

ಮೂಲಂಗಿ ಯಲ್ಲಿ ವಿಟಮಿನ್ ಎ,ಬಿ,ಸಿ ಹೇರಳವಾಗಿರುತ್ತದೆ. ಅಲ್ಲದೆ ಸಾರಜನಕ, ಪಿಷ್ಟ, ನಾರು , ಖನಿಜಾಂಶ , ರಂಜಕ, ಪೊಟಾಷಿಯಂ, ಕಬ್ಬಿಣ ತಾಯಬ್ಲಿನ್ ನಂತಹ ಪೊಷಕಾಂಶಗಳು ಇದರಲ್ಲಿ ಇವೆ.
ಮೂಲಂಗಿ ತಜಾ ತರಕಾರಿಮಹಯಾಗಿರುವುದರಿಂದ ಇದನ್ನು ಹಸಿಯಾಗಿ ಸಹ ಸೇವಿಸಬಹುದು. ಇದರ ಉಪಯೋಗಗಳ ಬಗ್ಗೆ ತಿಳಿಯೋಣ.

ಮೂಲಂಗಿ ಭಯಾನಕ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.ರಕ್ತದೊತ್ತಡ ನಿಯಂತ್ರಿಸುವಲ್ಲಿ ಈ ಮೂಲಂಗಿ ಸಹಕರಿಸುತ್ತದೆ. ಮೂತ್ರಕೋಶ ಹಾಗೂ ಮೂತ್ರ ಪಿಂಡಗಳನ್ನ ಶುದ್ಧಿಕರಿಸಲು ಸಹಕಾರಿಯಾಗಿದೆ.

ಕೆಂಪು ಮೂಲಂಗಿ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.ಕಾಮಾಲೆ ಇರುವವರು ಕೆಂಪು ಮೂಲಂಗಿ ರಸದ ಸೇವನೆ ಮಾಡಿದ್ರೆ ಒಳ್ಳೆಯದು.ನಿತ್ಯವು ಮೂಲಂಗಿ ಸೇವಿಸುವುದರಿಂದ ಹೃದಯಾಘಾತ ಸಮಸ್ಯೆಯನ್ನು ನಿಯಂತ್ರಿಸಬಹುದು.

ಮೂಲಂಗಿಯು ದೇಹದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹ ಸಮಸ್ಯೆದೂರವಾಗಿಸುತ್ತದೆ. ಮೂಲಂಗಿ ಸೇವನೆಯಿಂದ ಹಲ್ಲುಗಳು ಗಟ್ಟಿಯಾಗುತ್ತದೆ, ಹಳದಿಗಟ್ಟುವಿಕೆ ಕಡಿಮೆ ಆಗುತ್ತದೆ. ಮೂಲಂಗಿಗೆ ಸ್ವಲ್ಪ ನಿಂಬೆರಸ ಹಾಕಿ ಹಲ್ಲು ಉಜ್ಜುವುದರಿಂದ ಹಲ್ಲು ಗಳು ಫಳ ಫಳ ಹೊಳೆಯುತ್ತವೆ.

ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಿದ್ದರೆ ಮೂಲಂಗಿ ಹಾಗೂ ದಾಳಿಂಬೆ ರಸ ಮಿಶ್ರಣ ಮಾಡಿ ಕುಡಿಯಬಹುದು. ಕತ್ತರಿಸಿದ ಮೂಲಂಗಿಯನ್ನು ಉಪ್ಪು ಬೆರಸಿ ತಿಂದರೆ ಬಾಯಿಯಿಂದ ಕೆಟ್ಟ ವಾಸನೆ ಬರುವುದಿಲ್ಲ.

ಮೂಲಂಗಿ ಶರೀರಕಷ್ಟೇ ಅಲ್ಲ ಮುಖದ ಮೊಡವೆ ಸಮಸ್ಯೆಗೆ ಮೂಲಂಗಿ ರಾಮಬಾಣದಂತೆ ಕೆಲಸ ಮಾಡುತ್ತದೆ.ಮೂಲಂಗಿ ಯಿಂದ ಇಷ್ಟೆಲ್ಲಾ ಲಾಭ ಪಡೆಯಬೇಕೆಂದರೆ ಮೂಲಂಗಿಯನ್ನು ಬೆಯಿಸದೆ ಹಸಿ ಯಾಗಿ ತಿಂದ್ರೆ ಅತ್ಯಧಿಕ ಲಾಭ ಪಡೆಯಬಹುದು.

Leave a Comment