108 ಅಡಿಯ ಬೃಹತ್ ಶಿವಲಿಂಗವನ್ನು ಹೊಂದಿರುವಂತ ಕರ್ನಾಟಕದ ಈ ಪುಣ್ಯ ಕ್ಷೇತ್ರ ಎಲ್ಲಿದೆ ಗೊತ್ತಾ

ರಾಜ್ಯದಲ್ಲಿ ಹಲವು ದೇವಾಯಲಗಳು ಹಾಗೂ ಪ್ರವಾಸಿ ತಾಣಗಳಿವೆ ಆದ್ರೆ ಪ್ರತಿ ದೇವಾಲಯ ಹಾಗೂ ಪ್ರವಾಸಿ ತಾಣಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ, ಅದೇ ನಿಟ್ಟಿನಲ್ಲಿ ಕರ್ನಾಟಕದ ಈ ಪುಣ್ಯ ಕ್ಷೇತ್ರ ಹತ್ತಾರು ವಿಶೇಷತೆಯನ್ನು ಹೊಂದಿದೆ. ಅಷ್ಟಕ್ಕೂ ಈ ಕ್ಷೇತ್ರ ಯಾವುದು ಇದರ ಮಹತ್ವವೇನು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ.

ಈ ಪುಣ್ಯ ಕ್ಷೇತ್ರ ಇರೋದಾದ್ರೂ ಎಲ್ಲಿ ಅನ್ನೋದನ್ನ ನೋಡುವುದಾದರೆ ಕೋಲಾರ ಜಿಲ್ಲೆ ಯ ಬಂಗಾರಪೇಟೆ ಗೆ 12 ಕಿಲೋ ಮೀಟರ್ ದೂರದಲ್ಲಿರುವ ಕಮ್ಮಸಂದ್ರ ಇದು ಇಂದಿನ ದಿನಗಳಲ್ಲಿ ಪವಿತ್ರ ಪುಣ್ಯಕ್ಷೇತ್ರವಾಗಿ ಕೋಟಿಲಿಂಗಗಳ ನಾಡಾಗಿದೆ, ಈ ಕ್ಷೇತ್ರದಲ್ಲಿ ಸುಮಾರು 108 ಅಡಿಗಳ ಬೃಹತ್ ಶಿವಲಿಂಗ ಹಾಗೂ 32 ಅಡಿ ಎತ್ತರದ ಅತಿ ದೊಡ್ಡ ಬಸವಣ್ಣನನನ್ನು ಹೊಂದಿದ ಇಲ್ಲಿ ಭಕ್ತರು ನಿತ್ಯವೂ ಶಿವಲಿಂಗ ಸ್ಥಾಪನೆ ಮಾಡುತ್ತಿದ್ದು, ಈ ಕ್ಷೇತ್ರದಲ್ಲಿ ಮುಂದಿನ ಕೆಲವು ದಶಕಗಳಲ್ಲಿ ಕೋಟಿ ಲಿಂಗ ಸ್ಥಾಪನೆಯಾಗುವ ಸಾಧ್ಯತೆ ಇದೆ ಅನ್ನೋದನ್ನ ಹೇಳಾಗುತ್ತಿದೆ.

ಇನ್ನು ಈ ಪವಿತ್ರ ಕ್ಷೇತ್ರ ಕಮ್ಮಸಂದ್ರದಲ್ಲಿ ಶ್ರೀಸಾಂಬಶಿವಮೂರ್ತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಕ್ಷೇತ್ರದಲ್ಲಿರುವ ವಿಶಾಲ ಪ್ರಕಾರದ ಮೊದಲ ಮುಖ್ಯದ್ವಾರದಲ್ಲಿ ಶಿವಲಿಂಗ ಮತ್ತು ಬಸವೇಶ್ವರರ ದರ್ಶನ ಪಡೆದು, ಎರಡನೇ ದ್ವಾರಕ್ಕೆ ಬಂದರೆ ಆಕಾಶ ಶಿವಲಿಂಗ ಮತ್ತು ಅನೇಕ ದೇವತೆಗಳ ದರ್ಶನವಾಗುತ್ತದೆ. ಮುಂದೆ ಸಾಗುತ್ತಿದ್ದಂತೆ ವಿಶಾಲ ಪ್ರಕಾರದಲ್ಲಿ ಭಕ್ತರು ಸ್ಥಾಪಿಸಿರುವ ಸಾವಿರಾರು ಶಿವಲಿಂಗಗಳನ್ನು ನೋಡಬಹುದು. ಅಷ್ಟೇ ಅಲಲ್ದೆ ಈ ದೇವಾಯಲದ ಒಂದೇ ಅಂಗಳದಲ್ಲಿ ಪ್ರದಾನ ಶಿವನ ದೇವಾಲಯ ಹಾಗೂ ಬ್ರಹ್ಮ, ವಿಷ್ಣು, ಮಹೇಶ್ವರ, ವಿನಾಯಕ, ಅಯ್ಯಪ್ಪ, ಆಂಜನೇಯ, ಕನಿಕಾ ಪರಮೇಶ್ವರಿ, ಪಾರ್ವತಿ, ಲಕ್ಷ್ಮೀ, ನವಗ್ರಹ, ಸತ್ಯನಾರಾಯಣಸ್ವಾಮಿ, ಸುಬ್ರಹ್ಮಣ್ಯ, ವೆಂಕಟೇಶ್ವರ, ಪಂಚಮುಖಿ ಆಂಜನೇಯ, ಸಂತೋಷಿಮಾತಾ, ಮಂಜುನಾಥೇಶ್ವರ ಸ್ವಾಮಿ ದರ್ಶನಭಾಗ್ಯ ಲಭಿಸುತ್ತದೆ. ಪಕ್ಕದಲ್ಲೇ ಸುಂದರವಾದ ಬೃಂದಾವನವೂ ಇದೆ.

ಇಲ್ಲಿ ಮತ್ತೊಂದು ವಿಶೇಷತೆ ಏನು ಅಂದ್ರೆ ಇಲ್ಲಿನ ಬಿಲ್ವಪತ್ರೆ ಮರಕ್ಕೆ ಹಾಗೂ ನಾಗಲಿಂಗ ವೃಕ್ಷ ಗಳಿಗೆ ದೇವಾಲಯದಲ್ಲಿ ಪೂಜಿಸಿದ ಪವಿತ್ರ ದಾರವನ್ನು ಈ ಮರಗಳಿಗೆ ಕಟ್ಟಿದರೆ ಇಷ್ಟಾರ್ಥ ಈಡೇರುತ್ತದೆ ಅನ್ನೋ ನಂಬಿಕೆ ಇಲ್ಲಿನ ಭಕ್ತರಲ್ಲಿದೆ. ಇಲ್ಲಿ ಸಾಮೂಹಿಕ ಮದ್ವೆಗಳು ನಡೆಯುತ್ತವೆ ಹಾಗೂ ಇದು ಯಾತ್ರಾ ಸ್ಥಳಕೂಡ ಆಗಿದೆ ಹತ್ತಾರು ಸೌಕರ್ಯಗಳ ಜೊತೆಗೆ ಹತ್ತಾರು ವಿಶೇಷತೆಗಳನ್ನು ಈ ಕೋಟಿಲಿಂಗ ಪುಣ್ಯ ಕ್ಷೇತ್ರದಲ್ಲಿ ಕಾಣಬಹುದಾಗಿದೆ.

Leave a Comment