ದೇಹದ ತೂಕ ಬೇಗನೆ ಇಳಿಸಲು ಉಪಯೋಗಕಾರಿ ಈ ಟಿಪ್ಸ್

ಈಗಿನ ಜೀವನ ಶ್ಯೆಲಿಯಲ್ಲಿ ತೂಕ ಜಾಸ್ತಿಯಾಗಿ ಆರೋಗ್ಯದ ಪ್ರಮಾಣ ಕಡಿಮೆಯಾಗಿದೆ.
ದಿನಾಲೂ ವ್ಯಾಯಾಮ ಮಾಡಿದರೂ ಕೆಲವೊಬ್ಬರು ತೂಕ ಇಳಿಯುವುದಿಲ್ಲ. ಹಾಗೆಯೇ ಹಣ ವ್ಯರ್ಥ ಮಾಡಿ ಮನೆಯ ಹತ್ತಿರದಲ್ಲಿನ ಜಿಮ್ ಗಳಿಗೆ ಹೋದರೂ ಪ್ರಯೋಜನವಾಗುವುದಿಲ್ಲ. ಅಂತವರು ಮನೆಯಲ್ಲಿನ ಆಹಾರ ಪದಾರ್ಥಗಳನ್ನು ಬಳಸಿ ತೂಕ ಇಳಿಸಿಕೊಳ್ಳಬಹುದು.

ಹಾಗೆಯೇ ಈ ಸಲಹೆಯನ್ನು ಅನುಸರಿಸಿವುದರಿಂದ ತಿಂಗಳಿನಲ್ಲಿ 6 ರಿಂದ 7ಕೆ. ಜಿ. ತೂಕವನ್ನು ಇಳಿಸಿಕೊಳ್ಳಬಹುದು.ಮೊದಲು ಎಳೆಯಾದ ಸೌತೆಕಾಯಿಯನ್ನು ತೆಗೆದುಕೊಂಡು ಚಿಕ್ಕದಾಗಿ ಹೋಳುಗಳನ್ನಾಗಿ ಮಾಡಿಕೊಂಡು ಅದಕ್ಕೆ ಶುಂಠಿಯನ್ನು ಹೋಳುಗಳನ್ನಾಗಿ ಮಾಡಿ ಮಿಕ್ಸಿಯಲ್ಲಿ ರುಬ್ಬಬೇಕು. ಅದಕ್ಕೇ ಕಾಲುಭಾಗ ಲಿಂಬೆಹಣ್ಣಿನ ರಸವನ್ನು ಹಿಂಡಬೇಕು. ತಿಂಗಳಿನಲ್ಲಿ 6 ರಿಂದ 7ಕೆ.ಜಿ ತೂಕ ಇಳಿಸಬೇಕು ಅನ್ನುವಂತವರು ಇದನ್ನು ದಿನಕ್ಕೆ ೨ ಬಾರಿ ಅಂದರೆ ಬೆಳಿಗ್ಗೆ ತಿಂಡಿ ತಿನ್ನುವ ಅರ್ಧ ತಾಸು ಮೊದಲು ಇದನ್ನು ಒಂದು ಲೋಟ ಕುಡಿಯಬೇಕು.

ಹಾಗೆಯೇ ರಾತ್ರಿ ಊಟದ ಮೊದಲು ಕುಡಿಯಬೇಕು.ಬೇಕಾದಲ್ಲಿ ಜೇನುತುಪ್ಪ ಸೇರಿಸಿಕೊಳ್ಳಬಹುದು. ಬೇಡವಾದಲ್ಲಿ 1ರಿಂದ 2 ಕೆ.ಜಿ ಇಳಿದರೆ ಸಾಕು ಎನ್ನುವಂತವರು ದಿನಕ್ಕೆ ಒಂದು ಬಾರಿ ಕುಡಿದರೆ ಸಾಕು. ಇದು ಸ್ವಲ್ಪ ಕಹಿಯಾಗಿರುತ್ತದೆ. ಶುಂಠಿಯನ್ನು ಹಾಕುವುದರಿಂದ ಕಹಿಯಾಗುತ್ತದೆ. ಇದು ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಈ ಸಲಹೆಯನ್ನು ಅನುಸರಿಸಿ ಪ್ರಯೋಜನ ಪಡೆದುಕೊಳ್ಳಿ ನಿಮ್ಮ ತೂಕವನ್ನು ಇಳಿಸಿಕೊಳ್ಳಿ.

Leave a Comment