ನಮ್ಮ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಕುಟುಂಬದ ಕೊಡುಗೆ ಎನ್ನುವುದು ಸಾಕಷ್ಟು ಅಮೂಲ್ಯವಾದದು ಹಾಗೂ ಅದಕ್ಕೆ ಸರಿಸಾಟಿಯಾದ ಇನ್ನೊಂದು ಕುಟುಂಬ ಇಲ್ಲ ಎಂದು ಹೇಳಬಹುದಾಗಿದೆ. ಅಣ್ಣಾವ್ರ ಮುಖ್ಯ ಕುಟುಂಬದ ಮಜಲುಗಳು ಮಾತ್ರವಲ್ಲದೆ ಅವರ ಸಂಬಂಧಿಕರ ಕೊಡುಗೆಯೂ ಕೂಡ ಇಲ್ಲಿ ಪ್ರಮುಖವಾಗಿರುತ್ತದೆ. ನಾವು ಇಲ್ಲಿ ಮಾತನಾಡಲು ಹೊರಟಿರುವುದು ವಿಜಯರಾಘವೇಂದ್ರ ಅವರ ಬಗ್ಗೆ.
ವಿಜಯ ರಾಘವೇಂದ್ರ ಅವರು ಇನ್ಯಾರು ಅಲ್ಲ ಅಣ್ಣಾವ್ರ ಪತ್ನಿ ಆಗಿರುವ ಪಾರ್ವತಮ್ಮನವರ ಸಹೋದರ ಚಿನ್ನೇಗೌಡರ ಪುತ್ರ. ಚಿನ್ನಾರಿ ಮುತ್ತನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ವಿಜಯ್ ರಾಘವೇಂದ್ರ ರವರು ಬಾಲ ನಟನಾಗಿ ಸಾಕಷ್ಟು ಫೇಮಸ್ ಆಗಿದ್ದರು. ಒಂದು ಕಾಲದಲ್ಲಿ ಅಂದರೆ, ತಮ್ಮ ಸಿನಿಮಾ ದಿನಗಳ ಆರಂಭಿಕ ಸಮಯದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟನಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಅದೃಷ್ಟ ವಿಜಯ್ ರಾಘವೇಂದ್ರ ಅವರ ಕೈ ಹಿಡಿಯಲಿಲ್ಲ ಎಂದು ಹೇಳಬಹುದಾಗಿದೆ. ಆದರೂ ಕೂಡ ಸಗಬಿರುಚಿಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರಿಗೆ ತಲುಪಿಸುವಲ್ಲಿ ವಿಜಯ್ ರಾಘವೇಂದ್ರ ಅವರ ಪ್ರಯತ್ನ ಇಂದಿಗೂ ಕೂಡ ಜಾರಿಯಲ್ಲಿದೆ.
ಇನ್ನು ವಿಜಯ್ ರಾಘವೇಂದ್ರ ಅವರ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡುವುದಾದರೆ 2007ರಲ್ಲಿ ಅವರು ಖ್ಯಾತ ಪೊಲೀಸ್ ಅಧಿಕಾರಿ ಆಗಿರುವ ಬಿಕೆ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನ ಅವರನ್ನು ಮದುವೆಯಾಗುತ್ತಾರೆ. ಇನ್ನು ಇಬ್ಬರು ದಂಪತಿಗಳಿಗೂ ಶೌರ್ಯ ಎನ್ನುವ ಮಗ ಕೂಡ ಇದ್ದಾನೆ. ಇನ್ನೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ವಿಜಯ್ ರಾಘವೇಂದ್ರ ಅವರ ಸಹೋದರ ಎನ್ನುವುದು ನಿಮಗೆ ವಿಶೇಷವಾಗಿ ಹೇಳಬೇಕಾಗಿಲ್ಲ.
ಇತ್ತೀಚಿಗಷ್ಟೇ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಒಂದು ಹೆಣ್ಣು ಮಗುವನ್ನು ಎತ್ತಿ ಹಿಡಿದುಕೊಂಡಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅದನ್ನು ಅವರ ಮಗಳು ಎಂಬುದಾಗಿ ಆ ವಿಡಿಯೋದಲ್ಲಿ ಹೇಳಲಾಗಿತ್ತು ಆದರೆ ನಿಜವಾಗಿಯೂ ಕೂಡ ಆಕೆ ಸ್ಪಂದನ ಅವರ ಸಹೋದರನ ಮಗಳು ಎಂಬುದಾಗಿ ತಿಳಿದು ಬಂದಿದೆ. ನಟ ವಿಜಯ್ ರಾಘವೇಂದ್ರ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.