ತರಕಾರಿ ಅಂಗಡಿ ಮಾಡೋದ್ರಿಂದ ಲಾಭ ಗಳಿಸಬಹುದೇ, ಬಂಡವಾಳ ಎಷ್ಟಿರಬೇಕು? ಓದಿ.

ಬೇರೆಯವರ ಕೈಕೆಳಗೆ ಕೆಲಸ ಮಾಡೋಕೆ ಹಲವಾರು ಜನರಿಗೆ ಇಷ್ಟವಿರುವುದಿಲ್ಲ ತಾವೇ ಏನಾದರೂ ಬಂಡವಾಳ ಹಾಕಿ ಬ್ಯುಸಿನೆಸ್ ಸ್ಟಾಟ್ ಮಾಡ್ಬೇಕು ನಮ್ಮದೇ ಸ್ವಂತ ಕಂಪನಿ ಶುರು ಮಾಡಬೇಕು ಎಂಬೆಲ್ಲ ಆಸೆಗಳು ಪ್ರತಿಯೊಬ್ಬರಿಗೂ ಇರುತ್ತೆ.ಒಳ್ಳೆಯ ಬಂಡವಾಳದಿಂದ ತರಕಾರಿ ಅಂಗಡಿ ಬಿಸಿನೆಸ್ ಹೇಗೆ ಪ್ರಾರಂಭಿಸಬೇಕು ಹಾಗೂ ಅದಕ್ಕೆ ಬೇಕಾಗುವ ಬಂಡವಾಳ ಮತ್ತು ಅದರ ಲಾಭದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮೊದಲಿನ ಕಾಲದಂತೆ ವಾರಕ್ಕೆ ಒಂದು ಸಲ ತರಕಾರಿ ಖರೀದಿ ಮಾಡುವುದಿಲ್ಲ. ಈಗ ಎಲ್ಲರೂ ಪ್ರೆಶ್ ತರಕಾರಿಗಳನ್ನು ಖರೀದಿ ಮಾಡುತ್ತಾರೆ ಆದ್ದರಿಂದ ತರಕಾರಿ ಅಂಗಡಿ ಬಿಸಿನೆಸ್ ಮಾಡುವುದರಿಂದ ಲಾಭ ಗಳಿಸಬಹುದು. ಈ ಬಿಸಿನೆಸ್ ಪ್ರಾರಂಭಿಸಲು ಒಂದು ಪ್ರಮುಖ ಏರಿಯಾದಲ್ಲಿ 5,8,10 ಅಡಿ ಸ್ಥಳಾವಕಾಶ ಇರುವ ಮಳಿಗೆಯನ್ನು ಬಾಡಿಗೆಗೆ ಪಡೆಯಬೇಕು, ಒಂದು ವೇಳೆ ಸ್ವಂತ ಇದ್ದರೆ ಒಳ್ಳೆಯದು. ನಂತರ ತರಕಾರಿ ಇಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ಒಂದು ಕ್ಯಾಷ್ ಕೌಂಟರ್ ಟೇಬಲ್ ಇರಬೇಕು, ಒಂದು ತಕ್ಕಡಿ ಇರಬೇಕು.

ಈ ಬಿಸಿನೆಸ್ ಮಾಡಲು ಬೇಕಾಗುವ ಬಂಡವಾಳವೆಂದರೆ ಮಳಿಗೆ ಅಡ್ವಾನ್ಸ್ 30,000ರೂ, ಫರ್ನೀಚರ್ 20,000ರೂ, ತಕ್ಕಡಿಗೆ 6,000 ರೂ, ಒಟ್ಟು ಅಂದಾಜು 60,000 ರೂಪಾಯಿಯಿಂದ ಬಿಸಿನೆಸ್ ಶುರು ಮಾಡಬಹುದು. ಅಂಗಡಿಯಲ್ಲಿ ದಿನನಿತ್ಯ ಬಳಸುವ ತರಕಾರಿಗಳು ಇರಬೇಕು. ಇದರೊಂದಿಗೆ ಹಣ್ಣುಗಳನ್ನು ಸೇಬು, ದ್ರಾಕ್ಷಿ, ಹೀಗೆ ವಿವಿಧ ರೀತಿಯ ಹಣ್ಣುಗಳನ್ನು ಇಟ್ಟುಕೊಳ್ಳುವುದರಿಂದ ಲಾಭ ಗಳಿಸಬಹುದು.

ತರಕಾರಿಗಳನ್ನು ಹೋಲ್ ಸೇಲ್ ಮಾರ್ಕೆಟ್ ನಲ್ಲಿ ತಂದು ಸೇಲ್ ಮಾಡಬಹುದು. ಲಾಭ ನೋಡುವುದಾದರೆ 1,000 ಮಾರಾಟ ಮಾಡಿದರೆ 200-250 ರೂ ಲಾಭ ಗಳಿಸಬಹುದು, ದಿನಕ್ಕೆ 10,000 ಮಾರಾಟ ಮಾಡಿದರೆ 2,500ರೂ ಲಾಭ ಗಳಿಸಬಹುದು. ಒಂದು ತಿಂಗಳಿಗೆ 75,000ರೂ ಲಾಭ ಗಳಿಸಬಹುದು. ಕಡಿಮೆ ಬಂಡವಾಳದಿಂದ ಪ್ರಾರಂಭಿಸುವ ಬಿಸಿನೆಸ್ ಇದಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Comment