ಸಕಲ ಕಷ್ಟ ಪರಿಹರಿಸೋ, ನಂಬಿ ಬಂದವರನ್ನು ಕೈ ಹಿಡಿದು ನಡೆಸುವ ವಿಷ್ಣುವಿನ ಅವತಾರ ವರಾಹ ದೈವ

ಭಕ್ತರ ಪಾಲಿನ ಆರಾಧ್ಯ ದೈವ, ಸಕಲ ಕಷ್ಟ ಪರಿಹರಿಸೋ, ನಂಬಿ ಬಂದವರನ್ನು ಕೈ ಹಿಡಿದು ನಡೆಸುವ ವರಾಹ ದೈವ ಈ ದೇವರ ಬಗ್ಗೆ ತಿಳಿಯೋಣ.

ಪುರಾಣಗಳಲ್ಲಿ ಹಲವಾರು ದಂತ ಕಥೆಗಳನ್ನು ಹೊಂದಿರುವ ವರಾಹ ದೇವಿಯು, ವಿಷ್ಣುವಿನ ಮಹಾ ಅವತಾರವೇ ಎಂದು ಹೇಳಲಾಗುತ್ತದೆ. ಹಂದಿಯ ರೂಪದಲ್ಲಿ ಭಕ್ತರ ಪೂಜೆಗೆ ಒಳಪಡುವ ವರಾಹ ದೇವಿ ಅನೇಕ ಪವಾಡಗಳಿಗೆ ಹೆಸರು ವಾಸಿ. ವರಾಹ ಎನ್ನುವುದು ಸಂಸ್ಕೃತ ಪದ ಇದರರ್ಥ ಹಂದಿ ಎಂಬುದಾಗಿದೆ. ಹಿರಾಣ್ಯಕ್ಷಾನು ಭೂದೇವಿಯನ್ನು ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡನು ಎಂಬುದು ಪುರಾಣಗಳಲ್ಲಿ ಉಲ್ಲೇಖವಿದೆ.

ವರಾಹ ದೈವದ ಸ್ವರೂಪ ಹೀಗಿದೆ. ವರಾಹವು ನಾಲ್ಕು ಕೈಗಳನ್ನು ಹೊಂದಿದೆ ಅದರಂತೆಯೇ ಎರಡು ಕೈಗಳಲ್ಲಿ ಸುದರ್ಶನ ಚಕ್ರ, ಶಂಖವನ್ನ ಹಿಡಿದಿದೆ. ಇನ್ನೆರಡು ಕೈಗಳಲ್ಲಿ ಒಂದು ಗದೆಯನ್ನು ಅಥವಾ ಖಡ್ಗವನ್ನು ಅಥವಾ ಕಮಲವನ್ನು ಹಿಡಿದುಕೊಂಡಿದ್ದರೆ ಮತ್ತೊಂದು ಕೈಯಲ್ಲಿ ವರದಮುದ್ರೆಯಿದೆ. ಈ ರೀತಿಯಾಗಿ ವರಾಹ ಸ್ವರೂಪ ದೇವಾಲಯಗಳನ್ನು ಕಾಣಬಹುದು.

ವರಾಹ ಸ್ವರೂಪದ ದೇವಾಲಯಗಳು: ವರಾಹದ ಮುಖ್ಯ ದೇವಾಲಯವೆಂದರೆ ಆಂಧ್ರ ಪ್ರದೇಶದ ತಿರುಮಲದಲ್ಲಿರುವ ಶ್ರೀ ವರಾಹಸ್ವಾಮಿ ದೇವಸ್ಥಾನ. ಇನ್ನೊಂದು ಪ್ರಮುಖ ದೇವಸ್ಥಾನವೆಂದರೆ ತಮಿಳುನಾಡಿನ ಚಿದಂಬರಂನ ಈಶಾನ್ಯಕ್ಕಿರುವ ಶ್ರೀಮುಷ್ಣಮ್ ಪಟ್ಟಣದಲ್ಲಿರುವ ಭೂವರಾಹಸ್ವಾಮಿ ದೇವಸ್ಥಾನ. ಹೀಗೆ ಅತ್ಯಂತ ಶಕ್ತಿಶಾಲಿ ದೇವರಾಗಿ ವರಾಹಸ್ವಾಮಿ ಭೂ ಲೋಕದಲ್ಲಿ ನೆಲೆಸಿದ್ದಾನೆ.

Leave a Comment