ಒಂದು ಹೆಣ್ಣಿನ ಕುತಂತ್ರಕ್ಕೆ ಬಲಿಯಾದರಾ ಸಾವಿರಾರು ಕೋಟಿ ರೂಪಾಯಿಗಳ ಒಡೆಯ ಸರಳವಾಸ್ತು ಗುರೂಜಿ ? ಇಲ್ಲಿದೆ ನೋಡಿ ಕಿಲಾಡಿ ಲೇಡಿಯ ಮಾಸ್ಟರ್ ಪ್ಲಾನ್

ದೇಶಾದ್ಯಂತ ಸರಳ ವಾಸ್ತು ಬಗ್ಗೆ ಸಲಹೆ ನೀಡುತ್ತಿದ್ದ ಗುರೂಜಿ ಅವರು ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಚೇರಿ ತೆರೆದಿದ್ದರು. ಇವರ ಬಳಿ ಸಲಹೆ ಪಡೆಯಲು ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು. ಉದ್ಯೋಗಿಗಳ ಹೆಸರಿನಲ್ಲಿ ಆಸ್ತಿ ಮಾಡಿದ್ರಾ ಗುರೂಜಿ? ಹ’ತ್ಯೆಗೆ ಆಸ್ತಿ ಕಾರಣ? ಎನ್ನುವ ಹಲವು ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಬಹು ಮುಖ್ಯವಾಗಿ ಈ ಕಥೆಯ ರೂವಾರಿ ವನಜಾಕ್ಷಿ ಎನ್ನಲಾಗಿದ್ದು, ವನಜಾಕ್ಷಿ ಜೊತೆಗೆ ಚಂದ್ರಶೇಖರ ಗುರುಜಿ ಅತ್ಯಂತ ಸಲುಗೆ ಹೊಂದಿದ್ದರು ಎನ್ನಲಾಗಿದೆ. ಚಂದ್ರಶೇಖರ ಗುರುಜಿ ಸಾವಿರಾರು ಕೋಟಿ ಒಡೆಯನಾಗಿದ್ದು, ಅನೇಕ ಸಚಿವರು ಶಾಸಕರ ಜೊತೆಗೆ ವ್ಯಾಪಾರ ವಹಿವಾಟು ಮತ್ತು ಪಾಲುದಾರಿಕೆ ಹೊಂದಿದ್ದಾರೆ.

ಆದರೆ ಅಷ್ಟೇ ಕಾನೂನು ಬದ್ಧವಾಗಿ ತಮಗೆ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ಚಂದ್ರಶೇಖರ್‌ ವ್ಯವಹಾರ ನಡೆಸಿಕೊಂಡು ಬರುತಿದ್ದರು. ಆದರೆ ಅವರದೇ ಆದ ಸಂಸ್ಥೆಯಲ್ಲಿ ಒಬ್ಬ ಸಾಮಾನ್ಯ ಉದ್ಯೋಗಿ ಜೊತೆಗೆ ಅಷ್ಟೊಂದು ಆಸ್ತಿ ವಹಿವಾಟು ಹೊಂದುವಷ್ಟು ಸಲುಗೆ ಹೊಂದಿದ್ದು ಭಾರೀ ಚರ್ಚೆಗೆ ಮತ್ತು ಅನುಮಾನಕ್ಕೆ ಗ್ರಾಸವಾಗಿದೆ. ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ದುಷ್ಕರ್ಮಿಗಳು ಭೀಕರವಾಗಿ ಹ-ತ್ಯೆ ಮಾಡಿ ಪರಾರಿಯಾಗಿದ್ದಾರೆ. ವಿದ್ಯಾನಗರದ ಪ್ರಸಿಡೆಂಟ್ ಹೋಟೆಲ್‌ನಲ್ಲಿ ಚಂದ್ರಶೇಖರ್‍ ಗುರೂಜಿ ತಂಗಿದ್ದರು.

ನಿನ್ನೆ ಬೆಳಗ್ಗೆ ಭಕ್ತರ ಸೋಗಿನಲ್ಲಿ ಹೋಟೆಲ್‍ಗೆ ಬಂದ ದುಷ್ಕರ್ಮಿಗಳು ಗುರೂಜಿ ಬಳಿ ಆಶೀರ್ವಾದ ಪಡೆಯುವ ನಾಟಕವಾಡಿದ್ದಾರೆ. ರಿಸಪ್ಶನ್‌ ಬಳಿ ಕುಳಿತ್ತಿದ್ದ ಗುರೂಜಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ನಾಟಕವಾಡಿದ ದುಷ್ಕಮಿಗಳು ಏಕಾಏಕಿ ಅವರಿಗೆ ಚಾಕುವಿನಿಂದ ಹಲವಾರು ಬಾರಿ ಇರಿದಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಗುರೂಜಿ ರಕ್ಷಿಸಲು ಮುಂದಾಗಿದ್ದಾರೆ. ಆದರೆ, ದುಷ್ಕರ್ಮಿಗಳು ಅವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ.

ದುಷ್ಕರ್ಮಿಗಳಿಂದ ಬಿಡಿಸಿಕೊಳ್ಳಲು ಚಂದ್ರಶೇಖರ್ ಗುರೂಜಿ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಹಲವಾರು ಬಾರಿ ಚಾಕುವಿನಿಂದ ಇ’ರಿದ ಪರಿಣಾಮ ರ-ಕ್ತದ ಮಡುವಿನಲ್ಲೇ ಗುರೂಜಿ ಪ್ರಾಣಬಿಟ್ಟಿದ್ದಾರೆ. ಇಬ್ಬರು ದುಷ್ಕರ್ಮಿಗಳು ಗುರೂಜಿಗೆ ಚಾಕು ಇ’ ರಿಯುವ ದೃಶ್ಯ ಹೋಟೆಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಆಯುಕ್ತ ಲಾಭೂರಾಮ್, ಡಿಸಿಪಿ ಸಾಹಿಲ್ ಬಾಗ್ಲಾ ಪರಿಶೀಲನೆ ನಡೆಸಿದ್ದಾರೆ.

ಕೊಲೆಯಾದ ಕೆಲವೇ ಗಂಟೆಗಳಲ್ಲಿ ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ವಿದ್ಯಾನಗರ ಹಾಗೂ ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯ ಫಲದ ಹಿಂದೆ ವನಜಾಕ್ಷಿ ಕೈವಾಡ ಪ್ರಮುಖ ಪಾತ್ರ ವಹಿಸಿದೆ. ಪೊಲೀಸರು ಎನ್‌ಕೌಂ’ಟಂರ್ ಮಾಡಿ ಬಿಡುತ್ತಾರಾ ಎಂಬ ಆತಂಕದಿಂದ ಸ್ವತಃ ಪೊಲೀಸರಿಗೆ ಆರೋಪಿಗಳಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ದೂರವಾಣಿ ಕರೆ ಮಾಡಿ ಬಂಧನ ಮಾಡುವಂತೆ ಹೇಳಿದ್ದರು ಎಂಬ ಮಾಹಿತಿ ಸಹ ಲಭ್ಯವಾಗಿದೆ‌.

ಗುರೂಜಿಯ ಬರ್ಬರ ಕೃತ್ಯ ಬೇನಾಮಿ ಆಸ್ತಿಗಾಗಿ ನಡೆಯಿತಾ ಎಂಬ ಅನುಮಾನ ವ್ಯಕ್ತವಾಗಿದೆ. ಆರೋಪಿ ವನಜಾಕ್ಷಿ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದು, 2019ರ ವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಗುರೂಜಿ ಅವರು ವನಜಾಕ್ಷಿ ಹೆಸರಿಗೆ ಗೋಕುಲ ರಸ್ತೆ ಬಳಿಯ ಅಪಾರ್ಟ್‌ಮೆಂಟ್‌ ಮತ್ತು ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು.ಬಳಿಕ ಆಸ್ತಿ ವಾಪಸ್‌ ಕೇಳಿದಾಗ ಗಲಾಟೆ ಆರಂಭವಾಗಿತ್ತು. ಆಸ್ತಿ ಜೊತೆಗೆ ಹಣಕಾಸಿನ ವಿಚಾರವಾಗಿಯೂ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಇದೇ ವಿಚಾರಕ್ಕೆ ಚಂದ್ರಶೇಖರ್ ಗುರೂಜಿ ಅನ್ನು ಮುಗಿಸಿದ್ದಾರೆ ಶಂಕೆ ವ್ಯಕ್ತವಾಗಿದೆ.

ಸದ್ಯ ಬಂಧಿತ ವನಜಾಕ್ಷಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಮಾತನಾಡಿದ ಹು – ಧಾ ಪೊಲೀಸ್ ಕಮಿಷನರ್ ಲಾಬೂರಾಮ್ ಅವರು, ಆರೋಪಿಗಳ ಪತ್ತೆಗೆ ಎಸಿಪಿ ನೇತೃತ್ವದಲ್ಲಿ 5 ತಂಡ ರಚನೆ ಮಾಡಲಾಗಿದೆ ಎಂದರು. ಗುರೂಜಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹುಬ್ಬಳ್ಳಿ – ಧಾರವಾಡ ಸುತ್ತಲೂ ನಾಕಾ ಬಂಧಿ ಹಾಕಲಾಗಿದೆ ಎಂದು ಕಮಿಷನರ್ ಲಾಬೂರಾಮ್ ತಿಳಿಸಿದ್ದಾರೆ.

ಮಹಾಂತೇಶ್ ಶಿರೂರು ಹಾಗೂ ಆತನ ಪತ್ನಿ ವನಜಾಕ್ಷಿ ವಿರುದ್ಧ ಗುರೂಜಿ ಕುಟುಂಬಸ್ಥರೂ ಅನುಮಾನ ವ್ಯಕ್ತಪಡಿಸಿದ್ದರು. 2016 ರ ವರೆಗೂ ಗುರೂಜಿ ಜತೆಗೇ ಇದ್ದ ಮಹಾಂತೇಶ್ ಶಿರೂರು, 2019 ರವರೆಗೂ ಗುರೂಜಿ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದ. ಆರೋಪಿ ಮಹಾಂತೇಶ್ ಶಿರೂರನಿಗೆ ವನಜಾಕ್ಷಿ ಜೊತೆ ಮದುವೆ ಮಾಡಿಸಿದ್ದೇ ಚಂದ್ರಶೇಖರ್ ಗುರೂಜಿ ಎಂದು ತಿಳಿದು ಬಂದಿದೆ.ಗುರೂಜಿ ಜತೆ ವ್ಯವಹಾರ ಚಟುವಟಿಕೆ ವಿಚಾರದಲ್ಲಿ ಭಿನ್ನಭಿಪ್ರಾಯ ಎದುರಾದ ಕಾರಣ ಈ ಕೃತ್ಯ ನಡೆದಿದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬರ್ತಿದೆ. ಗುರೂಜಿ ಹಾಗೂ ವನಜಾಕ್ಷಿ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. 008 ರ ಫ್ಲಾಟ್‌ನಲ್ಲಿ ಗುರೂಜಿ ಇದ್ದರು. ಇದೇ ಅಪಾರ್ಟ್‌ಮೆಂಟ್‌ನ 308 ರಲ್ಲಿ ಮಹಾಂತೇಶ್ ಹಾಗೂ ವನಜಾಕ್ಷಿ ವಾಸವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Leave a Comment