ಪ್ರತೀ ದಿನ ನಾವು ಮೊಬೈಲ್ ಬಳಸುವ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಸಮಸ್ಯೆ ಎಂದರೆ ಮೊಬೈಲ್ ಬಳಸುತ್ತಾ ಇರೋವಾಗ ಬಿಸಿ ಆಗುವುದು. ಸಾಮಾನ್ಯವಾಗಿ ಇದು ಎಲ್ಲರಿಗೂ ಕಾಡುವ ದೊಡ್ಡ ಸಮಸ್ಯೆಯೇ ಆಗಿರತ್ತೆ. ಮೊಬೈಲ್ ತಗೊಳೋವಾಗ ಚೆನ್ನಾಗಿರತ್ತೆ ಆದ್ರೆ ತಗೊಂಡು ಆರೇಳು ತಿಂಗಳು ಆದ ನಂತರ ಮೊಬೈಲ್ ಹೀಟ್ ಆಗೋಕೆ ಶುರು ಆಗತ್ತೆ. ಯಾತಕ್ಕಾಗಿ ಮೊಬೈಲ್ ಫೋನ್ ಹೀಟ್ ಆಗತ್ತೆ? ಇದರಿಂದ ಏನೆಲ್ಲ ಆಗತ್ತೆ? ಹಾಗೆ ಇದಕ್ಕೆ ಪರಿಹಾರ ಏನು ಅನ್ನೋದನ್ನ ವಿವರವಾಗಿ ನೋಡೋಣ.
ಫೋನ್ ಹೀಟ್ ಆಗ್ತಾ ಇದೆ ಅಂದ್ರೆ ಅದಕ್ಕೆ ಹಲವಾರು ರೀತಿಯ ಕಾರಣಗಳು ಇರಬಹುದು. ಮೊಬೈಲ್ ನ ಫಾಸ್ಟ್ ಚಾರ್ಜ್ ಮಾಡುತ್ತ ಬಳಕೆ ಮಾಡದೆ ಇದ್ದರೂ ಕೂಡಾ ಬೇಗ ಬಿಸಿ ಆಗತ್ತೆ. ಇನ್ನು ಮೊಬೈಲ್ ಬ್ಯಾಟರಿ ಸುಮ್ನೆ ನಮಗೆ ತಿಳಿಯದೆ ಹಲವಾರು ಬಾರಿ ಉಪಯೋಗ ಆಗ್ತಾ ಇರತ್ತೆ. ಬೇರೆ ಅಪ್ಲಿಕೇಶನ್ ಗಳು, ಜಿ ಪಿ ಎಸ್ ಆನ್ ಆಗಿದ್ದಾಗ ಹೀಗೆ ನಮಗೆ ತಿಳಿಯದೇನೆ ಹಲವಾರು ಕಾರ್ಯಗಳು ನಡೆಯುತ್ತ ಇರತ್ತೆ ಇದರಿಂದ ಕೂಡಾ ಮೊಬೈಲ್ ಬೇಗ ಬಿಸಿ ಆಗತ್ತೆ. ಹಾಗೆ ಫೋನ್ ಡಿಸ್ಪ್ಲೇ ಬ್ರೈಟ್ನೆಸ್ ಜಾಸ್ತಿ ಇಟ್ಟರು ಸಹ ಮೊಬೈಲ್ ಬೇಗ ಬಿಸಿ ಆಗತ್ತೆ. ಇನ್ನು ಸೂರ್ಯನ ಬಿಸಿಲಿನಲ್ಲಿ ಫೋನ್ ಬಳಸುತ್ತಾ ಇದ್ದರೂ ಸಹ ಹೀಟ್ ಆಗತ್ತೆ. ಹೀಗೆಲ್ಲ ಫೋನ್ ಪದೇ ಪದೇ ಹೀಟ್ ಆಗ್ತಾ ಇದ್ರೆ ಆಗ ಫೋನ್ ಬಳಕೆ ಮಾಡೋವಾಗ ಕೂಡಾ ಹ್ಯಾಂಗ್ ಆಗೋಕೆ ಶುರು ಆಗತ್ತೆ. ಬಿಸಿಲಿನಲ್ಲಿ ಬಳಸುತ್ತಾ ಇದ್ದರೆ ಫೋನ್ ಕೂಡಾ ಸ್ಲೋ ಆಗತ್ತೆ ಹಾಗಾಗಿ ಬಿಸಿಲಿನಲ್ಲಿ ಫೋನ್ ಬಳಕೆ ಮಾಡೋದನ್ನ ಆದಷ್ಟು ಕಡಿಮೆ ಮಾಡಬೇಕು. ಇದರ ಜೊತೆಗೆ ನಾವೆಲ್ಲ ಫೋನ್ ಗೆ ಬ್ಯಾಕ್ ಕವರ್ ಹಾಕ್ತೀವಿ ಇದರಿಂದಲೂ ಸಹ ಫೋನ್ ಬೇಗ ಹೀಟ್ ಆಗತ್ತೆ ಅಂತ ಹೆಳ್ತಾರೆ ಆದರೆ ಇದು ಅರ್ಧ ಸತ್ಯ ಅರ್ಧ ಸುಳ್ಳು. ಇವಿಷ್ಟು ಫೋನ್ ಹೀಟ್ ಆಗೋಕೆ ಹಲವಾರು ಕಾರಣಗಳು ಆಗಿರುತ್ತವೆ. ಇನ್ನು ಮೊಬೈಲ್ ಹೀಟ್ ಆಗಬಿಟ್ಟಿದೆ ಏನು ಮಾಡಬಹುದು ಅನ್ನೋದನ್ನ ನೋಡೋಣ.
ಕೆಲವೊಂದು ಬಾರಿ ಹೀಟ್ ಆಗೋದನ್ನ ತಡೆಯಬಹುದು ಅಥವಾ ಕಡಿಮೆ ಮಾಡಬಹುದು ಇನ್ನು ಕೆಲವು ಸಲ ಆಗಲ್ಲ. ಹೊಸದಾಗಿ ಆಂಡ್ರಾಯ್ಡ್ ಅಪ್ಡೇಟ್ ಬಂದಿರತ್ತೆ ಆಗ ಆಂಡ್ರಾಯ್ಡ್ ಅಪ್ಡೇಟ್ ಜಾಗ ಸ್ವಲ್ಪ ದೊಡ್ಡದಾಗಿ ಇರತ್ತೆ ಆಗ ಫೋನ್ ಪ್ರೇಸ್ಸಿಂಗ್ ಪವರ್ ಜಾಸ್ತಿ ಆಗಿ ಸ್ಲೋ ಆಗತ್ತೆ. ಇನ್ನು ಸಾಮಾನ್ಯವಾಗಿ ಗೇಮ್ ಆಡೋವಾಗ ಎಲ್ಲಾ ಫೋನ್ ಹೀಟ್ ಆಗೇ ಆಗತ್ತೆ ಆಗೆಲ್ಲ ಏನೂ ಮಾಡೋಕೆ ಆಗಲ್ಲ. ಇನ್ನೂ ಚಾರ್ಜ್ ಹಾಕ್ಕೊಂಡು ಗೇಮ್ ಆಡ್ತಾ ಇದ್ರೆ ಅಂತೂ ಕೆಟ್ಟ ಪರಿಣಾಮವನ್ನೇ ಬೀರತ್ತೆ. ಇಂಟರನಲ್ ಸ್ಟೋರೇಜ್ ಜಾಸ್ತಿ ಇದ್ರೆ ಕೂಡಾ ಮೊಬೈಲ್ ಫೋನ್ ಜಾಸ್ತಿ ಹಾಗೂ ಬೇಗ ಹೀಟ್ ಆಗತ್ತೆ ಹಾಗಾಗಿ ಇಂಟರನಲ್ ಸ್ಟೋರೇಜ್ ಕೊನೆಪಕ್ಷ ಐದು ಜಿಬಿ ಆದರೂ ಖಾಲಿ ಇರಬೇಕಾಗತ್ತೆ. ಆದಷ್ಟು ಬ್ಯಾಟರಿ ಸೇವರ್ ಅನ್ನು ಬಳಸಬೇಕು. ಇದರಿಂದ ಬ್ಯಾಟರಿ ಹೀಟ್ ಆಗೋದು ಕಡಿಮೆ ಆಗಬಹುದು. ಇಷ್ಟು ಆದರೂ ಸಹ ಮೊಬೈಲ್ ಹೀಟ್ ಆಗ್ತಾ ಇದ್ರೆ ಏನೋ ಸಮಸ್ಯೆ ಇದೆ ಎಂದು ಅರ್ಥ. ಹಾಗಾಗಿ ಒಮ್ಮೆ ಮೊಬೈಲ್ ಫೋನ್ ನ ರೀ ಸೆಟ್ ಕೊಟ್ಟರೆ ಕೆಲವೊಮ್ಮೆ ಕೆಲವೊಂದು ಫೋನ್ ಗಳು ಸರಿ ಆಗಬಹುದು. ಫೋನ್ ಹಳೆದದಂತೆ ಹೀಟಿಂಗ್ ಪ್ರಾಬ್ಲಮ್ ಸಾಮಾನ್ಯವಾಗಿ ಕಾಡತ್ತೆ. ನಮ್ಮ ಮೊಬೈಲ್ ಹೀಟ್ ಆಗೋಕೆ ಕಾರಣ ಏನು ಇರತ್ತೋ ಅದರಲ್ಲೇ ಮೊಬೈಲ್ ಫೋನ್ ಹೀಟ್ ಆಗದೆ ಇರೋ ತರ ಮಾಡೋಕೆ ಉತ್ತರ ಕೂಡಾ ಇದೆ.