ನಮಗೆಲ್ಲ ತಿಳಿದಿರುವಂತೆ ದೇವಸ್ಥಾನ ಒಂದು ಶಾಂತಿ ಧಾಮ. ದೇವರ ಧ್ಯಾನಕ್ಕೆ, ನಮ್ಮ ಬೇಡಿಕೆಗಳನ್ನು ದೇವರಿಗೆ ತಲುಪಿಸಲು ಹೀಗೆ ಹಲವಾರು ಕಾರಣಗಳಿಂದ ನಾವು ದೇವಸ್ಥಾನಕ್ಕೆ ಹೋಗುತ್ತೇವೆ ಆದರೆ ಅಲ್ಲಿ ನಮಗೆ ಅರಿವಿಲ್ಲದಂತೆ ನಾವು ಕೆಲವೊಂದು ಚಿಕ್ಕ ಪುಟ್ಟ ತಪ್ಪುಗಳನ್ನ ಮಾಡುತ್ತೇವೆ ಅದರಿಂದ ನಾವು ದೋಷಗಳನ್ನು ಎದುರಿಸಬೇಕಾಗುತ್ತದೆ ಮತ್ತು ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.ಅದು ಏನಂದ್ರೆ,
ನಾವು ಜೀವನದಲ್ಲಿ ಏನಾದ್ರೂ ಒಂದು ನಿರ್ಧಾರ ತೆಗೆದುಕೊಳ್ಳುವಾಗ ಅದಕ್ಕೆ ಹೇಗೆ ನಮ್ಮದೇ ಆದ ಕೆಲವು ನಿಯಮಗಳು ಇರುತ್ತದೆಯೋ ಹಾಗೇ ದೇವಾಲಯಗಳಲ್ಲಿ ಕೂಡ ಕೆಲವೊಂದಿಷ್ಟು ನಿಯಮಗಳನ್ನು ಮಾಡಿರುತ್ತಾರೆ ಅವುಗಳನ್ನು ನಾವು ಪಾಲಿಸಲೇಬೇಕು.
ನಾವು ದೇವಾಲಯಗಳಲ್ಲಿ ಕೆಲವೊಂದು ಕಡೆ ಶಾಂತತೆ ಕಾಪಾಡಿ ಎನ್ನುವ ಬೋರ್ಡ್ ನೋಡಿರುತ್ತೇವೆ ಯಾಕಾಗಿ ಹಾಗೇ ಬರೆದು ಹಾಕಿರ್ತಾರೆ ಗೊತ್ತ? ದೇವಾಲಯಗಳಲ್ಲಿ ನಾವು ಜೋರಾಗಿ ಮಾತನಾಡುವುದು ನಗುವುದರಿಂದ ಅಲ್ಲಿನ ಶಾಂತ ವಾತಾವರಣ ಹೋಗಿ ಶಾಂತತೆ ನೆಲೆಸುತ್ತದೆ ಇದರಿಂದ ಎಲ್ಲರ ಮನಸ್ಸಿಗೂ ಒಂದು ರೀತಿಯ ಕಿರಿ ಕಿರಿ ಉಂಟಾಗುತ್ತದೆ. ಧ್ಯಾನ ಸ್ಥಿತಿಯಲ್ಲಿದ್ದರೆ ಏಕಾಗ್ರತೆ ಕಡಿಮೆ ಆಗತ್ತೆ ಹಾಗಾಗಿ ದೇವಸ್ಥಾನದಲ್ಲಿ ಶಾಂತವಾಗಿ ವರ್ತಿಸಬೇಕು.
ಇನ್ನು ಎರಡನೆಯದಾಗಿ, ನಾವು ದೇವಸ್ಥಾನದಲ್ಲಿ ದೇವರ ಎದುರು ನಿಲ್ಲ ಬಾರದು ಕಾರಣ ದೇವರ ಮುಖದಿಂದ ನಮಗೆ ತಿಳಿಯದಂತೆ ಒಂದು ರೀತಿಯ ಪ್ರಭೆ ಶಕ್ತಿ ಹೊರ ಹೊಮ್ಮುತ್ತ ಇರುತ್ತದೆ ಹಾಗೇ ಹೋಗುವಾಗ ನಾವು ದೇವರ ಎದುರು ನಿತ್ತಾಗ ಆ ಪ್ರಭೆಯನ್ನು ತಡೆದುಕೊಳ್ಳುವ ಶಕ್ತಿ ಸಾಮರ್ಥ್ಯ ನಮ್ಮಲ್ಲಿ ಇರುವುದಿಲ್ಲ.
ಇನ್ನೊಂದು ಏನು ಅಂದ್ರೆ ದೇವಸ್ಥಾನದಲ್ಲಿ ಒಬ್ಬ ವ್ಯಕ್ತಿ ಪ್ರಾರ್ಥನೆ ಮಾಡ್ತಾ ಇದ್ದಾಗ ನಾವು ಅಂತಹ ವ್ಯಕ್ತಿಯ ಎದುರಿನಿಂದ ಹೋಗಬಾರದು ಯಾಕೆಂದ್ರೆ ಆ ವ್ಯಕ್ತಿಯ ಏಕಾಗ್ರತೆ ಮತ್ತು ಪ್ರಾರ್ಥನೆಗೆ ಭಂಗ ತಂದಂತೆ ಆಗುತ್ತದೆ.
ಕೆಲವರಿಗೆ ದೇವರಿಗೆ ಪ್ರದಕ್ಷಿಣೆ ಹೇಗೆ ಹಾಕಬೇಕು ಎನ್ನುವುದು ತಿಳಿದಿರಲ್ಲ ಅಪ್ರದಕ್ಷಿಣೆ ಅಂದ್ರೆ ಉಲ್ಟಾ ಪ್ರದಕ್ಷಿಣೆ ಹಾಕುತ್ತಾರೆ. ಹೀಗೆ ಅಪ್ರದಕ್ಷಿಣೆ ಹಾಕುವುದು ಶ್ರೇಯಸ್ಕರ ಅಲ್ಲ ಯಾವಾಗಲೂ ನಮ್ಮ ಬಲ ಬದಿಯಿಂದ ಪ್ರದಕ್ಷಿಣೆ ಹಾಕಬೇಕು ಮತ್ತು ಶಿವಲಿಂಗಕ್ಕೆ ಮಾತ್ರ ಅರ್ಧ ಪ್ರದಕ್ಷಿಣೆ ಹಾಕಬೇಕು.
ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಚರ್ಮದಿಂದ ಮಾಡಿದ ಯಾವೊಂದು ವಸ್ತುಗಳನ್ನು ಸಹ ನಾವು ದೇವಸ್ಥಾನದ ಒಳಗೆ ಕೊಂಡೊಯ್ಯಬಾರದು. ಚರ್ಮವನ್ನು ಅಶುದ್ಧವೆಂದು ಪರಿಗಣಿಸಿರುವುದರಿಂದ ಚರ್ಮದ ಬೆಲ್ಟ್ ಆಗಲಿ ಯಾವುದೇ ಚರ್ಮದ ವಸ್ತುಗಳನ್ನು ದೇವಸ್ಥಾನದ ಒಳಗೆ ಒಯ್ಯುವಂತಿಲ್ಲ. ಇಂತಹ ಕೆಲವೊಂದಿಷ್ಟು ಸಣ್ಣ ಪುಟ್ಟ ತಪ್ಪುಗಳನ್ನು ಇಷ್ಟು ದಿನ ತಿಳಿಯದೆ ನಾವೆಲ್ಲರೂ ಮಾಡಿರುತ್ತೇವೆ ಆದರೆ ಇನ್ನುಮುಂದೆ ಮಾಡದೇ ಇಂಥ ತಪ್ಪುಗಳನ್ನು ತಿದ್ದಿಕೊಂಡು ನಡೆಯೋಣ.