ಈಗ ಅಂತೂ ಬೇಸಿಗೆ ಕಾಲ ತುಂಬಾ ಬಿಸಿಲು ಬೆವರು ಇದರಿಂದ ಒಂದು ಕಡೆ ಕಿರಿ ಕಿರಿ ಆದ್ರೆ ಇನ್ನೊಂದು ಕಡೆ ಸಹಿಸೋಕೆ ಆಗ್ದೆ ಇರೋವಂತ ಬೆವರು ಗುಳ್ಳೆಗಳು. ಈ ಬೆವರು ಗುಳ್ಳೆಗಳು ಮುಖದ ಮೇಲೆ ಬೆನ್ನಿನ ಮೇಲೆ ಎಲ್ಲಾ ಕಡೆ ಆಗತ್ತೆ. ಇದರಿಂದ ತುರಿಕೆ ಮತ್ತು ಉರಿ ಶುರು ಆಗತ್ತೆ ಕೆಲವೊಬ್ಬರಿಗೆ ದೇಹದಲ್ಲಿ ನಂಜಿನ ಅಂಶ ಹೆಚ್ಚಾಗಿ ಇರುವವರಿಗೆ ಅದು ಸೆಪ್ಟಿಕ್ ಕೂಡ ಆಗಬಹುದು. ಈ ಬೆವರು ಗುಳ್ಳೆಗಳು ಅಥವಾ ಬೆವರು ಸಾಲೇ ಅಂತ ಏನು ನಾವು ಹೇಳ್ತೀವಿ ಇದು ಮಕ್ಕಳಲ್ಲಿ ಕಂಡುಬರುವುದು ಹೆಚ್ಚು. ಮಕ್ಕಳ ಶಾಲಾ ಸಮವಸ್ತ್ರದಿಂದ ಹಿಡಿದು ಆಡುವ ಆಟಗಳು, ಊಟ ತಿಂಡಿ ಇವುಗಳಿಂದಳು ಸಹ ಬೆವರು ಗುಳ್ಳೆಗಳು ಉಂಟಾಗತ್ತೆ. ಈ ಬೆವರು ಗುಳ್ಳೆಗಳು ಹೇಗೆ ಉಂಟಾಗುತ್ತದೆ ಅದಕ್ಕೆ ಮನೆ ಮದ್ದುಗಳು ಏನು ಅನ್ನೋದನ್ನ ಇಲ್ಲಿ ತಿಳಿಯೋಣ
ಭಾರತ ದೇಶವನ್ನು ಸಮಶೀತೋಷ್ಣ ವಲಯ ಅಂತ ಹೇಳ್ತಾರೆ ಆದ್ರೆ ಇತ್ತೀಚಿನ ದಿನಗಳಲ್ಲಿ ಉಷ್ಣ ವಲಯ ಅಂತ ಹೇಳಬಹುದು. ಮಕ್ಕಳ ಸಮವಸ್ತ್ರ ಶರ್ಟ್, ಪ್ಯಾಂಟ್, ಟೈ, ಬೆಲ್ಟ್ , ಕೋಟ್ ಮೇಲಿಂದ ಒಂದು ಭಾರವಾದ ಬ್ಯಾಗ್. ಒಂದು ಸ್ವಲ್ಪ ಕೂಡ ಗಾಳಿ ಆಡೋಕೆ ಜಾಗ ಇಲ್ದೆ ಇರೋ ಹಾಗೆ ಮಕ್ಕಳು ಯೂನಿಫಾರ್ಮ್ ಇಂದ ಪ್ಯಾಕ್ ಆಗಿರ್ತಾರೆ ಹೀಗಿರುವಾಗ ಬೆವರು ಸಾಲೆ ಆಗ್ದೇ ಇನ್ನೇನು?
ಹಾಗಾದ್ರೆ ಈ ಬೆವರು ಗುಳ್ಳೆಗಳು ಬಾರದೆ ಇರೋದಕ್ಕೆ ಪರಿಹಾರ ಏನು? ತಿಳಿಸಿಕೊಡ್ತಿವಿ ನೋಡಿ. ಈ ಬೆವರು ಸಾಲೆಗೆ ಮುಖ್ಯ ಕಾರಣ ಅಂದ್ರೆ ಹೀಟ್ ತಾಪ. ಅಂದ್ರೆ ದೇಹದ ಉಷ್ಣಾಂಶತೆ ಅತಿಯಾಗಿ ಇರುವುದು. ಹಾಗಾದ್ರೆ ದೇಹದ ಉಷ್ಣಾಂಶತೆ ಯಾಕೆ ಇಷ್ಟೊಂದು ಜಾಸ್ತಿ ಆಗತ್ತೆ ಅಂತ ನೋಡೋದಾದ್ರೆ, ಬೇಸಿಗೆಯಲ್ಲಿ ಅತಿಯಾದ ಬಿಸಿಲು ಇದರಿಂದ ಬೆವರು ಬರತ್ತೆ ಹಾಗಾಗಿ ದೇಹದ ಉಷ್ಣಾಂಶ ಹೆಚ್ಚಾಗಿ ಬೆವರು ಗುಳ್ಳೆಗಳು ಬರುತ್ತೆ. ಹಾಗೆ ನಾವು ತಿನ್ನುವಂತಹ ಆಹಾರಗಳು ಅಂದ್ರೆ ಜಂಕ್ ಫುಡ್, ಹೆಚ್ಚು ಮಾಸಾಲೆಯಿಂದ ಕೂಡಿದ ಆಹಾರಗಳು ಗೋಬಿ ಮಂಚೂರಿ ಪಾನಿಪೂರಿ ಇಂಥ ಆಹಾರಗಳನ್ನು ಈಗಿನ ಮಕ್ಕಳು ಜಾಸ್ತಿ ತಿನ್ನೋಕೆ ಬಯಸುತ್ತಾರೆ ಇದರಿಂದ ಕೂಡ ದೇಹದ ಉಷ್ಣತೆ ಹೆಚ್ಚಾಗುತ್ತದೆ ಅದರ ಜೊತೆಗೆ ಬಿಸಿಲು, ಧರಿಸುವ ಬಟ್ಟೆಗಳಿಂದಳು ಸಹ ಬೆವರು ಗುಳ್ಳೆಗಳು ಉಂಟಾಗುತ್ತವೆ.
ಬೆವರು ಗುಳ್ಳೆಯ ಲಕ್ಷಣಗಳು ಹೇಗೆ ಇರತ್ತೆ ಅಂತ ನೋಡೋದಾಡ್ರೆ ಮೈಯ್ಯ ತುಂಬಾ ಚಿಕ್ಕ ಚಿಕ್ಕ ಹಲ್ಲೆಗಳು ಆಗತ್ತೆ ತುರಿಕೆ ಉರಿ ಆಗೋದು ಬಹಳ ಬೇಗ ಈ ಹಲ್ಲೆಗಳು ಕೆಂಪಾಗತ್ತೆ. ಇವೆಲ್ಲವೂ ಬೆವರು ಗುಳ್ಳೆಯ ಲಕ್ಷಣಗಳು. ಇದಕ್ಕೆ ಪರಿಹಾರ ಏನು ಅಂದ್ರೆ. ಮುಖ್ಯವಾಗಿ ಪಿತ್ತ ಆಹಾರ ಅಂದ್ರೆ, ದೇಹದ ಉಷ್ಣವನ್ನು ಕಡಿಮೆ ಮಾಡುವಂತಹ ಆಹಾರಗಳನ್ನು ಮಕ್ಕಳಿಗೆ ಹೆಚ್ಚು ಹೆಚ್ಚು ನೀಡಬೇಕು. ಅತಿಯಾದ ಮಸಾಲೆ ಪದಾರ್ಥಗಳನ್ನು ಹಾಗೂ ಜಂಕ್ ಫುಡ್ ಗಳನ್ನು ಮಕ್ಕಳಿಗೆ ಕೊಡಬಾರದು. ಇದರ ಬದಲು ಬೇಸಿಗೆಯಲ್ಲಿ ಸಾಧ್ಯ ಆದಷ್ಟು ಎಳೆನೀರು, ಸೌತೆ ಕಾಯಿ, ಮಜ್ಜಿಗೆ, ಹಾಲು, ಸಬ್ಬಕ್ಕಿ ಪಾಯಸ, ಹೆಸರು ಬೇಳೆ ಪಾಯಸ, ಕಾಮ ಕಸ್ತೂರಿ ಬೀಜವನ್ನು ನೀರಿನಲ್ಲೇ ಬೆರೆಸಿ ಇಂತಹ ಉಷ್ಣ ಕಡಿಮೆ ಮಾಡುವಂತಹ ದೇಹವನ್ನ ತಂಪಾಗಿ ಇದುವಂತಹ ಆಹಾರಗಳನ್ನು ಮಕ್ಕಳಿಗೆ ಕೊಡಬೇಕು.
ಇದರ ಜೊತೆಗೆ ದೇಹದ ಸ್ವಚ್ಛತೆ ಕೊಡ್ಡ ಬಹಳ ಮುಖ್ಯ. ದೇಹ ಸ್ವಚಾವಾಗಿ ಇಲ್ಲ ಅಂದರೆ ದೇಹದ ಚರ್ಮದ ಮೇಲೆ ಬೇಡವಾದ ಕ್ರಿಮಿಗಳು ಬಂದು ಕೂರುತ್ತವೆ. ಇದರಿಂದಲೂ ಬೆವರು ಸಾಲೆ ಆಗತ್ತೆ. ಇದನ್ನ ತಡೆಗಟ್ಟೋಕೆ ಮಕ್ಕಳು ಸ್ನಾನ ಮಾಡುವಾಗ ಸ್ನಾನ ಮಾಡುವ ನೀರಿಗೆ ಚೆನ್ನಾಗಿ ಸ್ವಚ್ಛ ಮಾಡಿದ ಕಹಿಬೇವಿನ ಎಲೆಗಳನ್ನು ಹಾಕಿ ಕುದಿಸಿ ಆ ನೀರನ್ನ ಸ್ನಾನ ಮಾಡೋಕೆ ಬಳಸಿ ಇದರಿಂದ ಕ್ರಿಮಿಗಳು ನಾಶ ಆಗುತ್ತವೆ. ಬೇವಿನ ಸೊಪ್ಪು ಉತ್ತಮ ಕ್ರಿಮಿ ಮಾಶಕದಂತೆ ಕೆಲಸ ಮಾಡುತ್ತದೆ. ಬ್ಯಾಕ್ಟೀರಿಯ ಗಳನ್ನ ಕೊಲ್ಲುತ್ತದೆ . ಹಾಗಾಗಿ ಬೇವಿನ ಎಳೆಯನ್ನ ನೀರಲ್ಲಿ ಕುದಿಸಿ ಸ್ನಾನ ಮಾಡುವುದರಿಂದ ಬೆವರು ಗುಳ್ಳೆಗಳು ಬರದಂತೆ ತಡೆಯಬಹುದು. ಹಾಗಾದ್ರೆ ಈಗಾಗಲೇ ಬೆವರು ಗುಳ್ಳೆ ಆಗಿದೆ ಅದಕ್ಕೆ ಮನೆ ಮದ್ದು ಏನು ಅಂತ ನೋಡೋದಾದ್ರೆ, ಶ್ರೀ ಗಂಧವನ್ನ ಕಲ್ಲಿನಲ್ಲಿ ತೆಯದು ಅದನ್ನ ಗುಳ್ಳೆಗಳಿಗೆ ಹಚ್ಚಬೇಕು. ಇದಲ್ಲದೆ ಅರಿಶಿನದ ಕೊಂಬು ಇದನ್ನ ಕೂಡ ಕಲ್ಲಿನಲ್ಲಿ ತೆಯ್ದು ಅದರ ಪೇಸ್ಟ್ ಹಚ್ಚಿದರು ಗುಳ್ಳೆಗಳು ಕಡಿಮೆ ಆಗತ್ತೆ ಮತ್ತು ಜಾಯಿ ಕಾಯಿ ಅಂತ ಸಿಗತ್ತೆ ಅದನ್ನ ಕೂಡ ನೀರಿನಲ್ಲಿ ತೇಯ್ದು ಇದರ ಪೇಸ್ಟ್ ಹಚ್ಚಿದರು ಸಹ ಬೆವರು ಗುಳ್ಳೆಗಳು ಕಡಿಮೆ ಆಗುತ್ತದೆ. ಇನ್ನೂ ಮುಖ್ಯವಾಗಿ ಮನೆಯಲ್ಲಿ ಇರುವಾಗ ಮಕ್ಕಳಿಗೆ ದಪ್ಪದ ಬಟ್ಟೆಗಳನ್ನ ಧರಿಸುವುದು ಕಡಿಮೆ ಮಾಡಿ. ಆದಷ್ಟು ಗಾಳಿ ಆಡುವ ಬಟ್ಟೆಗಳನ್ನ ಧರಿಸಿ. ಇಷ್ಟಾದರೂ ಸಹ ಬೆವರು ಗುಳ್ಳೆಗಳು ಕಡಿಮೆ ಆಗದೆ ಇದ್ದಲ್ಲಿ ಹತ್ತಿರದ ವೈದ್ಯರನ್ನು ಭೇಟಿ ಮಾಡಿ.