ಮನುಷ್ಯನಿಗೆ ಸಹಜವಾಗಿ ಒಂದಲ್ಲ ಒಂದು ಸಾಮಾನ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ, ಆದ್ರೆ ಅನಂತಹ ಸಮಸ್ಯೆಗಳಿಗೆ ಸುಲಭವಾಗಿ ಬಿಡದೆ ಅದಕ್ಕೆ ತಕ್ಕ ಔಷಧಿ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಅದೇ ನಿಟ್ಟಿನಲ್ಲಿ ಒಂದಿಷ್ಟು ಸಾಮಾನ್ಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಮರಗಗಳನ್ನು ತಿಳಿಯೋಣ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಕೂಡ ಈ ವಿಚಾರವನ್ನು ಹಂಚಿಕೊಳ್ಳಿ.
ಸಕ್ಕರೆ ಕಾಯಿಲೆ ಅನ್ನೋದು ಪ್ರಸ್ತುತ ದಿನಗಳಲ್ಲಿ ಬಹುತೇಕ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಯಿಲೆಯಾಗಿದೆ. ಇದಕ್ಕೆ ಹತ್ತಾರು ಪರಿಹಾರ ಮಾರ್ಗಗಳಿವೆ ಹಾಗು ಆಯುರ್ವೇದದಲ್ಲಿ ಹೆಚ್ಚಿನ ಪರಿಹಾರವಿದೆ. ನೀವು ಸಾಮಾನ್ಯವಾಗಿ ಅಮೃತಬಳ್ಳಿ ಅನ್ನೋ ಸಸ್ಯದ ಬಗ್ಗೆ ತಿಳಿದಿರುತ್ತೀರ ಅಥವಾ ನೋಡಿರುತ್ತೀರ ಈ ಸಸ್ಯವು ಸಕ್ಕರೆ ಕಾಯಿಲೆಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ಪಂಡಿತರು ಹೇಳುತ್ತಾರೆ. ಹೌದು ಅಮೃತ ಬಳ್ಳಿಯ ಚಿಗುರನ್ನು ಪ್ರತಿ ದಿನವೂ ಹಸಿ ಹೊಟ್ಟೆಗೆ ಸೇವಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುವುದು.
ಇನ್ನು ಕಣ್ಣಿನ ಅರೋಗ್ಯ ವೃದಿಗೆ ಹಸಿ ತರಕಾರಿ ಸೊಪ್ಪುಗಳು ಉತ್ತಮ ಪರಿಹಾರ ನೀಡುವಂತ ಕೆಲಸ ಮಾಡುತ್ತದೆ ಹೌದು ಕ್ಯಾರೆಟ್ ಕೂಡ ಕಣ್ಣಿನ ಆರೋಗ್ಯಕ್ಕೆ ಉತ್ತಮವಾದದ್ದು ಇದನ್ನು ಪ್ರತಿದಿನ ಹಸಿಯಾಗಿ ತಿನ್ನುವುದರಿಂದ ಕಣ್ಣಿನ ಅರೋಗ್ಯ ವೃದ್ಧಿಯಾಗುತ್ತದೆ.
ಮಕ್ಕಳಲ್ಲಿ ಅಥವಾ ವಯಸ್ಸಾದವರಲ್ಲಿ ಕಫದ ಸಮಸ್ಯೆ ಕಾಣಿಸಿಕೊಂಡರೆ ತುಳಸಿ ರಸ ತಗೆದು ಒಂದು ಚಮಚ ಜೇನುತುಪ್ಪ ಸೇರಿಸಿ ಶಿಶುಗಳಿಗೆ, ಮಕ್ಕಳಿಗೆ ವಯಸ್ಸಾದವರಿಗೆ ಕೂಡ ಕೆಲ ಬಾರಿ ಕೊಟ್ಟರೆ ಕಫದ ತೊಂದರೆ ಕಡಿಮೆಯಾಗವುದು. ಇನ್ನು ವಿಳ್ಳೇದೆಲೆಯ ರಸವನ್ನು ತಗೆದು ಜೇನುತುಪ್ಪ ಸೇರಿಸಿ ಚಿಕ್ಕ ಮಕ್ಕಳಿಗೆ ಕುಡಿಸಿದರೆಗೊರಗುಡುವ ಕಫ ನೀರಾಗಿ ಶೀತ ಕಫ ನಿವಾರಣೆ ಹೊಂದುವುದು.
ಮತ್ತೊಂದು ಮನೆಮದ್ದು: ಮೂತ್ರ ತಡೆ,ನೋವು, ಉರಿಮೂತ್ರ ಈ ಸಮಸ್ಯೆಗಳಿಗೆ ನೀರನ್ನು ಕುದಿಸಿ ಅರ್ಧ ಹೋಳು ನಿಂಬೆ ರಸವನ್ನು ಹಿಂದಿ ಹದವಾಗಿ ಆರಿಸಿ ದಿನಕ್ಕೆ ಎರಡು ಸಲ ಒಂದು ವಾರ ಕುಡಿಯಿರಿ ಹೀಗೆ ಮಾಡುವುದರಿಂದ ಈ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.