ಶಕ್ತಿ ಶಾಲಿ ದೇವತೆ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಮಹಿಮೆಯನೊಮ್ಮೆ ಓದಿ

ನಿಮ್ಮ ಅಮೂಲ್ಯ ವಸ್ತುಗಳೇನಾದರೂ ಕಳೆದಿವೆಯೇ ಅಥವಾ ಜಮೀನು, ಆಸ್ತಿಯಕ್ಕೆ ಸಂಬಂಧಿಸಿದ ಸಮಸ್ಯೆಗಳೇನಾದರೂ ಎದುರಿಸುತ್ತಿದೀರ. ಹಾಗಾದರೆ ಈ ತಾಯಿ ಸನ್ನಿಧಿಗೆ ಬಂದು ಮನಸಾರೆ ಬೇಡಿಕೊಂಡರೆ ಸಾಕು.ನಿಮ್ಮ ಎಲ್ಲಾ ಕಲಹಗಳು ಬಗೆ ಹರಿಯುತ್ತವೆ.ಅಷ್ಟು ಶಕ್ತಿಶಾಲಿ ಆಗಿದ್ದಾಳೆ ಈ ದೇವತೆ.

ಕರ್ನಾಟಕದ ಶಕ್ತಿಶಾಲಿ ದೇವತೆಗಳಲ್ಲಿ ಒಬ್ಬಳಾದ ಈಕೆಯೇ ಶ್ರೀ ಸಿಗಂದೂರು ಚೌಡೇಶ್ವರಿ.ಸಿಗಂದೂರು ಕ್ಷೇತ್ರದ ಆರಾಧ್ಯ ದೇವತೆ.ರಾಜ್ಯದ ಮೂಲೆ ಮೂಲೆ ಯಿಂದ ಭಕ್ತರನ್ನು ಆಕರ್ಷಿಸುವ ತಾಯಿ. ಈ ಅಧಿದೇವತೆ ನೆಲೆಸಿರುವುದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹನ್ನೀರಿನ ಸಿಗಂದೂರಿನ ಮಡಿಲಿನಲ್ಲಿ. ಸಿಗಂದೂರು ದಟ್ಟ ಕಾಡಿನಿಂದ ಆವೃತವಾಗಿದ್ದು, ಯಾವುದೇ ಸದ್ದು,ಗದ್ದಲದ ವಿಲ್ಲದ ನೆಮ್ಮದಿಯ ತಾಣವಾಗಿದೆ.

ಎರಡೂ ದಶಕಗಳ ಹಿಂದೆ ಕುಗ್ರಾಮವಾಗಿದ್ದ ಸಿಗಂದೂರು ತಾಯಿ ಚೌಡೇಶ್ವರಿ ಉಪಸ್ಥಿತಿ ಯಿಂದ ದಿವ್ಯಾ ಕ್ಷೇತ್ರ ವಾಗಿ ಪರಿಣಮಿಸಿದೆ.ಈ ದೇವಿಯನ್ನು ಸಿಗಂದೂರೇಶ್ವರಿ ಎಂದು ಕರೆಯುತ್ತಾರೆ.
ಈ ಕ್ಷೇತ್ರದ ವಿಶೇಷ ಆಚರಣೆ ಎಂದರೆ ಭಕ್ತರು ತಮ್ಮ ಹೊಲ ಮನೆ , ಹೊಸ ಕಟ್ಟಡಗಳಿಗೆ ಇವರು ಕೊಡುವ ಬೋರ್ಡ್ ನೇತುಹಾಕುತ್ತಾರೆ. ಆ ಬೋರ್ಡಿನಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ಯ ಕಾವಾಲಿದೆ ಎಂದು ಬರೆದಿರುತ್ತದೆ. ಈ ಬೋರ್ಡ್ ಗಳನ್ನು ಹಾಕಿದರೆ ಆ ಜಾಗದಲ್ಲಿ ಕಳ್ಳತನ ಆಗೋದಿಲ್ಲ ಎಂಬ ನಂಬಿಕೆಯಿದೆ.

ಈ ಚೌಡೇಶ್ವರಿ ವಿಗ್ರಹವು ಸುಮಾರು ಮೂನ್ನೂರು ವರ್ಷಗಳ ಇತಿಹಾಸ ಹೊಂದಿದೆ.ಹಿಂದೆ ಇಲ್ಲಿನ ನಾಯಕರಾದ ಶೇಷಪ್ಪನವರು ಸಂಗಡಿಗರೊಂದಿಗೆ ಬೇಟೆ ಆಡಲು ಕಾಡಿಗೆ ಹೋದಾಗ ದಾರಿ ತಪ್ಪಿ ಸಂಗಡಿಗರಿಂದ ಬೇರ್ಪಡುತ್ತಾರೆ. ತಬ್ಬಿಬ್ಬಾಗಿ ಏನೂ ಮಾಡಬೇಕೆಂದು ತೋಚದೇ ಮರದ ಕೆಳಗೆ ವಿಶ್ರಾಂತಿ ಪಡೆಯುವಾಗ ಮಂಪರು ಆವರಿಸಿ ನಿದ್ರೆಗೆ ಜಾರುತ್ತಾರೆ ಅವರ ಕನಸಿನಲ್ಲಿ ಚೌಡೇಶ್ವರಿಯು ಶಂಖ, ಚಕ್ರ, ಗದಧಾರಿಯಾಗಿ ಬಂದು ನಾನು ಇಲ್ಲಿ ಭಕ್ತರ ಉದ್ಧಾರಕ್ಕಾಗಿ ನೆಲಸುತ್ತೇನೆ ನನಗೆಂದೆ ಒಂದು ಜಾಗ ಹಾಗೂ ಪೂಜೆ ಸಲ್ಲಬೇಕೆಂದು ಹೇಳುತ್ತಾಳೆ.

ಎಚ್ಚರ ಗೊಂಡ ಶೇಷಪ್ಪ ನಿಗೆ ದೇವಿಯ ವಿಗ್ರಹ ದೊರೆಯುತ್ತದೆ. ಕೊನೆಗೆ ತನ್ನ ಊರಿನ ಬ್ರಾಹ್ಮಣ ಪುರೋಹಿತರಾದ ದುಗ್ಗಜ್ಜರೊಂದಿಗೆ ಸೇರಿ ದೇವಿಯನ್ನು ಪ್ರತಿಷ್ಠಾಪಿಸಿ ಸಣ್ಣದೊಂದು ಗುಡಿ ನಿರ್ಮಿಸುತ್ತಾರೆ. ದುಗ್ಗಜ್ಜ ಈ ದೇಗುಲದ ಆರ್ಚಕರಾದರೆ, ಶೇಷಪ್ಪ ಧರ್ಮದರ್ಶಿಗಳಾಗುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಸಿಗಂದೂರು ಚೌಡೇಶ್ವರಿಯು ದುಷ್ಟರನ್ನು ಶೀಕ್ಷಿಸುತ್ತಾ, ಶಿಷ್ಟ ರನ್ನು ರಕ್ಷಿಸುತ್ತಾ ರಾಜ್ಯದ ಎಲ್ಲಾ ಭಕ್ತರನ್ನು ಆಕರ್ಷಿಸುತ್ತಾ ನೆಲೆನಿಂತಿದ್ದಾಳೆ.

Leave a Comment