ಇಲ್ಲಿರುವಂತಹ ಶಕ್ತಿಶಾಲಿ ಗಣೇಶ ದೇವಾಲಯಕ್ಕೆ ಬಂದು ಗಂಟೆಯನ್ನ ಅರ್ಪಿಸಿದರೆ ಸಾಕು. ಮಹಾ ಗಣೇಶನ ಕೃಪೆಯಿಂದ ನಿಮ್ಮ ಜೀವನದಲ್ಲಿ ಅಂದುಕೊಂಡ ಕೆಲಸ ನೆರವೇರುತ್ತದೆ. ಯಾರಿಗೆ ಕಂಕಣ ಭಾಗ್ಯ, ಮಕ್ಕಳಿಲ್ಲ ಅವರು ಇಲ್ಲಿಗೆ ಬಂದು ಹರಕೆ ಕಟ್ಟಿಕೊಂಡು ತೀರಿಸಿದರೆ ಸಾಕು. ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಈ ದೇವಸ್ಥಾನ ಇರೋದಾದ್ರೋ ಎಲ್ಲಿ. ಇಲ್ಲಿರುವ ಗಣೇಶನಿಗಿರುವ ಶಕ್ತಿಯಂಥದ್ದು ಅನ್ನೋದನ್ನ ತಿಳಿಯ
ನಮ್ಮ ದೇಶದಲ್ಲಿ ಸಾಕಷ್ಟು ಗಣೇಶನ ದೇವಸ್ಥಾನಗಳಿರುತ್ತದೆ. ಆದರೆ ಈ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪೊಕ್ಕಡದಲ್ಲಿರುವ ಗಣೇಶನ ದೇವಾಲಯಯೂ ಕೂಡ ಒಂದು. ಬಹಳ ಪ್ರಭಾವಶಾಲಿ ಮಹಿಮಾನ್ವಿತ ದೇವಾಲಯವಾಗಿರುತ್ತೆ ಅದುವೇ ಸೌತಡ್ಕ ಮಹಾಗಣಪತಿ ದೇವಾಲಯ. ಇದು ಪವಿತ್ರ ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿ ತಾಣವಾಗಿದೆ. ಈ ದೇವಸ್ಥಾನದ ಇತಿಹಾಸವನ್ನ ನೋಡುವುದಾದರೆ.
ಗೋಪಾಲಕರಿಗೆ ಕಾಡಿನಲ್ಲಿ ಕಲ್ಲಿನ ಗಣಪತಿ ಸಿಗುತ್ತದೆ ಆ ಗಣಪತಿಯನ್ನ ಗೋಪಾಲಕರು ಒಂದು ಕಟ್ಟೆಯ ಮೇಲೆ ಪ್ರತಿಷ್ಟಾಪನೆ ಮಾಡ್ತಾರೇ.ಆ ಸ್ಥಳವೇ ಇಂದು ಸೌಕಡ್ಕ ಸ್ಥಳವೆಂದೆನಿಸಿದೆ. ಗೋಪಾಲಕರು ಸೌತೆಕಾಯಿಯನ್ನ ಸಮರ್ಮಿಸಿದರಿಂದ ಸೌತಡ್ಕ ಎನ್ನುವ ಹೆಸರು ಈ ದೇವಸ್ಥಾನಕ್ಕೆ ಬಂದಿದೆ. ಇಂದಿಗೂ ಈ ದೇವಾಲಯದ ಗಣೇಶನಿಗೆ ಸೌತೆಕಾಯಿ ಸಮರ್ಪಿಸುವ ಆಚರಣೆ ಮುಂದುವರೆದಿದೆ.
ಈ ದೇವಸ್ಥಾನದ ವಿಶೇಷತೆ ಎಂದರೆ ಈ ದೇವಸ್ಥಾನಕ್ಕೆ ಯಾವುದೇ ರೀತಿಯಾದ ಕಟ್ಟಡಗಳಿಲ್ಲ, ಗೋಪುರ, ಗರ್ಭಗುಡಿ ಅನ್ನೋದು ಇಲ್ಲ.ಬದಲಾಗಿ ಇದೊಂದು ಬಯಲು ಗಣಪತಿ.ತೆರೆದ ಸ್ಥಳದಲ್ಲಿ ಗಣೇಶ ನೆಲೆಸಿದ್ದಾನೆ. ಹರಕೆ ಹೊತ್ತು ಈ ದೇವಸ್ಥಾನಕ್ಕೆ ಬೇಡಿಕೊಂಡರೆ 9 ತಿಂಗಳೊಳಗಾಗಿ ಅವರ ಬೇಡಿಕೆ ಇಡೇರುತ್ತಂತೆ. ಅದರಂತೆ ಮರುದಿನವೇ ಬಂದು ಗಂಟೆಯನ್ನ ಕಟ್ಟುತ್ತಾರೆ ಇಲ್ಲಿನ ಭಕ್ತರು. ಹಾಗಾಗಿ ಈ ದೇವಾಲಯದಲ್ಲಿ ಸಾವಿರಾರು ಗಂಟೆಗಳನ್ನ ಕಾಣಬಹುದಾಗಿದೆ.
ಈ ದೇವಸ್ಥಾನದಲ್ಲಿ ವಿಶೇಷವಾಗಿ ಅಪ್ಪ ಕಜ್ಜಾಯ, ಪಂಚ ಕಜ್ಜಾಯ, ರಂಗಪೂಜೆ,ಮೂಡಪ್ಪ ಸೇವೆ ಈ ಕ್ಷೇತ್ರದಲ್ಲಿ ನಡೆಯುವ ಸೇವೆಗಳಾಗಿರುತ್ತವೆ. ಇಲ್ಲಿ ಗೋಶಾಲೆಗಳು ಕೂಡ ಇರುತ್ತದೆ. 150 ರಿಂದ 200 ಗೋವುಗಳನ್ನ ಇಲ್ಲಿ ಕಾಣಬಹುದಾಗಿದೆ. ದಿನದ 24 ಗಂಟೆಯೂ ಈ ದೇವಸ್ಥಾನ ತೆರದಿರುತ್ತದೆ.
ಈ ದೇವಸ್ಥಾನಕ್ಕೆ ನೀವು ಬರುವುದಾದರೂ ಹೇಗೆ ಅನ್ನೋದಾದ್ರೆ ಧರ್ಮಸ್ಥಳದಿಂದ 16 ಕಿ.ಮೀ.ದೂರದಲ್ಲಿದೆ ಇ ದೇವಸ್ಥಾನ. ಅದುವೇ ಸೌತಡ್ಕ. ನೀವೂ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಪ್ರವಾಸಕ್ಕೆ ಬಂದರೆ ಈ ದೇವಸ್ಥಾನಕ್ಕೂ ಬಂದು ಗಣೇಶನ ದರ್ಶನ ಪಡೆದು ಹರಕೆ ಕಟ್ಟಿಕೊಂಡು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.