ಮನೆಯಲ್ಲೇ ಸುಲಭವಾಗಿ ತಯಾರಿಸಿ ರುಚಿಯಾದ ಪಾನಿಪುರಿ

ಈಗಿನ ಕಾಲದಲ್ಲಿ ಎಲ್ಲರಿಗೂ ಫಾಸ್ಟ್ ಫುಡ್ ಅಂದ್ರೆ ತುಂಬಾನೇ ಇಷ್ಟ. ಅದ್ರಲ್ಲೂ ಗೋಬಿ ಮಂಚೂರಿ ಪಾನೀ ಪೂರಿ ಇವು ಎಲ್ಲರಿಗೂ ಫೆವರೀಟ್ ತಿನಿಸುಗಳು. ಇವುಗಳನ್ನು ತಿನ್ನೋದಕ್ಕೆ ಅಂತ ಕೆಲವೊಮ್ಮೆ ಎಷ್ಟೇ ದೂರ ಇದ್ರು ಸಹ ಹೋಗಿ ಕಾದು ಕುಳಿತು ತಿಂದು ಬರುತ್ತೇವೆ. ಆದರೆ ರಸ್ತೆ ಬದಿಯಲ್ಲಿ ಇಟ್ಟು ಮಾರಾಟ ಮಾಡುವ ಇಂತಹ ತಿನಿಸುಗಳನ್ನು ನಾವು ತಿನ್ನೋದರಿಂದ ನಮ್ಮ ಆರೋಗ್ಯದ ಮೇಲೆ ಇಂತಹ ಪರಿಣಾಮವನ್ನು ಇದು ಬೀರಬಹುದು. ಗೋಬಿ ಮಂಚೂರಿ ಪಾನಿಪೂರಿ ತಿನ್ನಬೇಕು ಅನಸತ್ತೆ ಆದ್ರೆ ಆರೋಗ್ಯದ ಬಗ್ಗೆ ಕೂಡ ಸ್ವಲ್ಪ ಗಮನ ಇರಬೇಕು ಅಲ್ವಾ. ಮನೇಯಲ್ಲಿಯೆ ನಾವು ರುಚಿಯಾಗಿ ಹಾಗೂ ಶುಚಿಯಾಗಿ ಸ್ಟ್ರೀಟ್ ಸ್ಟೈಲ್ ಪಾನಿ ಪೂರಿ ಹಾಗೂ ಗೋಬಿ ಮಂಚೂರಿ ಎಲ್ಲವನ್ನೂ ಮಾಡಿಕೊಂಡು ತಿನ್ನಬಹುದು ಅಲ್ವಾ.ಹಾಗಾಗಿ ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಸುಲಭವಾಗಿ ಮನೆಯಲ್ಲಿಯೇ ಪಾನಿ ಪೂರಿ ಅಥವಾ ಸ್ಟ್ರೀಟ್ ಸ್ಟೈಲ್ ಗೊಲಗಪ್ಪ ಹೇಗೆ ಮಾಡೋದು, ಅದಕ್ಕೆ ಬೇಕಾದ ಪೂರಿ, ಪಾನಿ ಹಾಗೂ ಆಲೂ ಸ್ಟಫ್ ಹೇಗೆ ಮಾಡೋದು ಅಂತ ತಿಳಿಸಿಕೊಡ್ತೀವಿ.

ಮೊದಲು ಪೂರಿ ಮಾಡಿಕೊಳ್ಳಬೇಕು. ಅದಕ್ಕೆ ಎರಡು ಕಪ್ ಚಿರೋಟಿ ರವೆ, ಎರಡು ಟಿ ಸ್ಪೂನ್ ಮೈದಾ ಹಿಟ್ಟು, ಅರ್ಧ ಸ್ಪೂನ್ ಉಪ್ಪು, ಒಂದು ಸ್ಪೂನ್ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಹದಿನೈದರಿಂದ ಇಪ್ಪತ್ತು ನಿಮಿಷ ಬಿಡಬೇಕು. ನಂತರ ಒಮ್ಮೆ ಚೆನ್ನಾಗಿ ಹಿಟ್ಟನ್ನು ನಾದಿಕೊಂಡು ಚಪಾತಿ ಹಿಟ್ಟಿಗಿಂತ ಸ್ವಲ್ಪ ದೊಡ್ಡ ಉಂಡೆ ಮಾಡಿಕೊಂಡು ಚಪಾತಿ ಮನೆಗೆ ಸ್ವಲ್ಪ ಎಣ್ಣೆ ಸವರಿಕೊಂಡು ಲಟ್ಟಣಿಗೆ ಸಹಾಯದಿಂದ ತೆಳುವಾಗಿ ಲಟ್ಟಿಸಿಕೊಳ್ಳಬೇಕು. ನಂತರ ಒಂದು ರೌಂಡ್ ಶೇಪ್ ನ ಮುಚ್ಚಳದ ಸಹಾಯದಿಂದ ಎಲ್ಲವನ್ನೂ ಕಟ್ ಮಾಡಿಕೊಂಡು ಕಾದಿರುವ ಎಣ್ಣೆಯಲ್ಲಿ ಪೋರಿಯನ್ನ ಕರಿದುಕೊಳ್ಳಬೇಕು. ಎಲ್ಲಾ ಪೂರಿಗಳು ಸರಿಯಾಗಿ ಉಬ್ಬಿ ಬರುವಂತೆ ಎರಡೂ ಕಡೆ ಗೋಲ್ಡನ್ ಬ್ರೌನ್ ಕಲರ್ ಬರುವವರೆಗೂ ಕರಿದುಕೊಳ್ಳಬೇಕೂ.

ನಂತರ ಆಲೂ ಸ್ಟಫ್:- ನಾಲ್ಕರಿಂದ ಐದು ಬೇಯಿಸಿ ನೀರು ಬಳಿಸಿ ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಒಂದು ಬೌಲ್ ಗೆ ಹಾಕಿ ಅದನ್ನ ಚೆನ್ನಾಗಿ ಮ್ಯಾಶ್ ಮಾಡಿಕೊಂಡು ಅದಕ್ಕೆ ಒಂದು ಕಪ್ ಅಷ್ಟು ನೆನೆಸಿ ಬೇಯಿಸಿಟ್ಟ ಬಟಾಣಿ, ಒಂದು ಸ್ಪೂನ್ ಖಾರದ ಪುಡಿ, ಒಂದು ಸ್ಪೂನ್ ಚಾಟ್ ಮಸಾಲ ಪುಡಿ ಹಾಗೂ ಸ್ವಲ್ಪ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಬೇಕು.

ನಂತರ ಪಾನಿ: ಪಾನಿ ಮಾಡೋಕೆ ಬೇಕಾಗಿರೋದು ಪುದೀನಾ ಹಾಗೂ ಕೊತ್ತಂಬರಿ ಸೊಪ್ಪು ಎರಡೂ ಒಂದೊಂದು ಕಟ್ಟು. ಇವುಗಳನ್ನ ಚೆನ್ನಾಗಿ ತೊಳೆದು ಮಿಕ್ಸಿಗೆ ಹಾಕಿ ಅದರ ಜೊತೆಗೆ ಖಾರಕ್ಕೆ ಬೇಕಾದಷ್ಟು ಹಸಿರು ಮೆಣಸಿನಕಾಯಿ ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಂಡು ನಂತರ ಆ ನೀರನ್ನು ಸೋಸಿಕೊಂಡು ಅದಕ್ಕೆ ಒಂದು ಚಮಚ ಉಪ್ಪು, ಕಾಲು ಕಪ್ ಹುಣಸೆ ರಸ, ಒಂದು ಟಿ ಸ್ಪೂನ್ ಬ್ಲಾಕ್ ಸಾಲ್ಟ್, ಒಂದು ಸ್ಪೂನ್ ಚಾಟ್ ಮಸಾಲ, ಅರ್ಧ ಸ್ಪೂನ್ ಆಮ್ ಚೂರ್ ಪೌಡರ್ ಮತ್ತೆ ಒಂದು ಲೀಟರ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪಾನಿ ಕೂಡ ರೆಡಿ ಆಗತ್ತೆ ಲಾಸ್ಟ್ ಅಲ್ಲಿ ಒಂದು ಪೂರಿ ತಗೊಂಡು ಮಧ್ಯದಲ್ಲಿ ಸ್ವಲ್ಪ ಒಡೆದುಕೊಂಡು ಅದಕ್ಕೆ ಆಲೂ ಮಸಾಲ ಈರುಳ್ಳಿ ಸ್ಟಫ್ ಮಾಡಿ ಪಾನಿ ಜೊತೆ ತಿನ್ನೋಕೆ ರೆಡೀ

Leave a Comment