ಮೊಟ್ಟಮೊದಲ ಜ್ಯೋತಿರ್ಲಿಂಗ ಕ್ಷೇತ್ರ ಇದು ಯಾವುದು ಎಲ್ಲಿದೆ ಗೊತ್ತೇ? ತಿಳಿಯಿರಿ..

ನಮ್ಮ ದೇಶದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳು ಅಂದರೆ ೧೨ ಜ್ಯೋತಿರ್ಲಿಂಗಗಳು ಇವೆ. ಅದರಲ್ಲಿ ಮೊಟ್ಟಮೊದಲ ಜ್ಯೋತಿರ್ಲಿಂಗ ಕ್ಷೇತ್ರ ಎಂದರೆ ಗುಜರಾತ ರಾಜ್ಯದ ವೆರವಲ್ ನಲ್ಲಿ ಇರುವ ಸೋಮನಾಥ ದೇವಾಲಯ. ಗುಜರಾತ್ ನಲ್ಲಿ ಇರುವ ಸೋಮನಾಥ ದೇವಾಲಯವು ತುಂಬಾ ಪುರಾತನ ದೇವಾಲಯ ಆಗಿದೆ. ದೇಶದಲ್ಲಿ ಇರುವ ಶಿವ ಭಕ್ತರು ಅತಿ ಹೆಚ್ಚಾಗಿ ಭೇಟಿ ನೀಡುವ ದೇವಸ್ಥಾನ ಇದು. ಸೋಮನಾಥ ದೇವಾಲಯದ ಬಗ್ಗೆ ಪುರಾಣಗಳಲ್ಲಿ ಸಹ ಹೇಳಲಾಗಿದೆ. ಅದ್ಭುತವಾದ ಈ ಸನಾತ ದೇವಾಲಯ ಹಲವಾರು ವಿಷಯಗಳನ್ನು ಒಳಗೊಂಡಿದೆ ಅದರ ಬಗ್ಗೆ ಇಲ್ಲಿ ತಿಳಿಯೋಣ.

ಉತ್ತರ ಭಾರತ ದೇವಾಲಯಗಳಲ್ಲಿ ಹಿಂದೂಗಳು ಹೆಚ್ಚಾಗಿ ದೀಪಗಳನ್ನು ಬೆಳಗಿ ಆರಾಧನೆ ಮಾಡುತ್ತಾರೆ. ಮುಖ್ಯವಾಗಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಹೇಳುವ ಅವಶ್ಯಕತೆ ಇಲ್ಲ ಅಷ್ಟು ಪೂಜೆಗಳು ಅಲ್ಲಿ ನಡೆಯುತ್ತವೆ. ಇಲ್ಲಿ ಕಿಕ್ಕಿರಿದ ಭಕ್ತ ಸಮೂಹ ಸಾಗರೋಪಾದಿಯಲ್ಲಿ ಸೇರುತ್ತವೆ. ಕಾಲು ಇಡಲು ಸಹ ಸ್ವಲ್ಪವೂ ಸ್ಥಳ ಇರುವುದಿಲ್ಲ. ಈ ಸೋಮನಾಥ ಪುರದ ಸ್ಥಳ ಪುರಾಣದ ಬಗ್ಗೆ ಹೇಳುವುದಾದರೆ, ಚಂದ್ರನು ದಕ್ಷನ ಶಾಪದಿಂದ ವಿಮುಕ್ತಿ ಮಾಡಿದ ಶಿವನಿಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಿದ್ದಾನೆ. ಅದೇ ಈ ಸೋಮನಾಥ ದೇವಾಲಯ. ಈ ದೇವಾಲಯವನ್ನು ಮೊದಲು ಚಂದ್ರ ಬಂಗಾರವನ್ನು ಬಳಸಿ ನಿರ್ಮಾಣ ಮಾಡಿದ್ದನು. ಆ ನಂತರ ರಾವಣನು ಬೆಳ್ಳಿಯಿಂದ ಹಾಗೂ ಕೃಷ್ಣನು ಲೋಹದಿಂದ ನಿರ್ಮಾಣ ಮಾಡಿದ್ದನು ಎಂದು ಹೇಳಲಾಗುತ್ತದೆ. ಸೋಮನಾಥ ದೇವಾಲಯವು ಪ್ರಮುಖ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಮೊದಲನೆಯದು. ಇಲ್ಲಿ ಸಾಕ್ಷಾತ್ ಪರಶಿವ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.

ಇಲ್ಲಿ ಈ ದೇವಸ್ಥಾನ ನಿರ್ಮಾಣ ಆದಾಗಿನಿಂದ ಸುಮಾರು ಏಳು ಭಾರಿ ನಾಶವಾಗಿ ಪುನರ್ ನಿರ್ಮಾಣ ಮಾಡಲ್ಪಟ್ಟಿದೆ. ಕೊನೆಗೆ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರು ೧೯೫೧ ರಲ್ಲಿ ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದ್ದರು ಎಂದು ಹೇಳಲಾಗುತ್ತದೆ. ಸೋಮನಾಥ ದೇವಾಲಯದಲ್ಲಿ ಯಾರಿಗೂ ಅರ್ಥವಾಗದ ಕೆಲವು ವಿಚಿತ್ರಗಳು ನಡೆಯುತ್ತವೆ. ಅದೇ ಚಂದ್ರನು ಪ್ರತಿಷ್ಠಾಪಿಸಿದ ಶಿವಲಿಂಗ. ದೇವಾಲಯದ ಮಧ್ಯದಲ್ಲಿ ಭೂಮಿಯ ಒಳಗೆ ಯಾವುದೇ ಆಧಾರ ಇಲ್ಲದೇ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇದು ಗಾಳಿಯಲ್ಲಿ ತೇಲುವ ಶಿವಲಿಂಗದ ಹಾಗೆ ಕಾಣಿಸುತ್ತದೆ. ಇದನ್ನು ಒಂದು ವರ್ಣಿಸಲಾಗದ ಅದ್ಭುತವಾದ ದೃಶ್ಯ ಎಂದು ಹೇಳಬಹುದು.

ಸೋಮನಾಥ ದೇವಾಲಯದ ಒಳಗೆ ಅದ್ಭುತವಾದ ಮಂಟಪ, ಎತ್ತರದ ಗೋಪುರಗಳು ನಮಗೆ ಕಾಣಿಸುತ್ತೆ. ಗುಡಿಯಲ್ಲಿ ಶಿವಲಿಂಗವು ದೊಡ್ಡ ಗಾತ್ರದಲ್ಲಿ ಕಾಣಿಸುತ್ತದೆ. ಶಿವನ ಹಿಂದೆ ಪಾರ್ವತಿ ದೇವಿಯ ವಿಗ್ರಹ ಸಹ ಕಾಣಿಸುತ್ತದೆ. ದ್ವಾರಕ್ಕೆ ಎಡ ಹಾಗೂ ಹಿಂದಿನ ಭಾಗದಲ್ಲಿ ಗಣೇಶ ಹಾಗೂ ಆಂಜನೇಯನ ವಿಗ್ರಹಗಳು ಕಾಣಿಸುತ್ತವೆ. ಈ ದೇವಾಲಯದ ಕೆತ್ತನೆ, ಬೆಳ್ಳಿ ದ್ವಾರಗಳು, ನಂದಿ ವಿಗ್ರಹಗಳು ಮತ್ತು ಇಲ್ಲಿನ ಶಿವಲಿಂಗ ಇವು ಪ್ರಮುಖ ಆಕರ್ಷಣೆಯನ್ನು ಪಡೆದಿದೆ. ಭಕ್ತರು ಕಾರ್ತಿಕ ಪೌರ್ಣಮಿಯ ಹಬ್ಬದಂದು ಈ ದೇವಾಲಯಕ್ಕೆ ವಿಶೇಷವಾಗಿ ಭೇಟಿ ನೀಡುತ್ತಾರೆ. ಮಹಾ ಶಿವರಾತ್ರಿ ಮತ್ತು ಚಂದ್ರಗ್ರಹಣ ಸಮಯದಲ್ಲಿ ಲಕ್ಷಾಂತರ ಭಕ್ತರು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಇಲ್ಲಿ ನಾವು ಕಾಣುವಂತಹ ಒಂದು ಅದ್ಭುತವೇ ಶಿವಲಿಂಗ ಗಾಳಿಯಲ್ಲಿ ತೇಲುವುದು. ಇದು ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸುತ್ತದೆ.

Leave a Comment