ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಹಿರಿಯರು ಹೇಳೋದೇಕೆ?

ನಾವು ಹುಟ್ಟಿದಾಗಿನಿಂದ ಬೆಳೆದು ದೊಡ್ಡವರಾಗುವವರೆಗೆ ನಮ್ಮ ಕುಟುಂಬದವರು ನಮಗೆ ಹಲವಾರು ಸಂಪ್ರದಾಯಗಳನ್ನು ಹೇಳಿಕೊಡುತ್ತಾರೆ. ಕೆಲವು ಮಂದಿಗೆ ಅದು ಸತ್ಯವೋ ಸುಳ್ಳೋ ಎಂದು ಗೊತ್ತಿಲ್ಲ ಆದರೂ ಕೂಡ ಆಚರಣೆ ಮಾಡುತ್ತಾರೆ. ಇನ್ನೂ ಕೆಲವು ಮಂದಿ ಇದನ್ನು ಉದಾಸೀನ ಮಾಡಿ ಆಚರಣೆಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. ನಾವು ಇಲ್ಲಿ ಕೆಲವು ಹಿಂದೂ ಧರ್ಮದ ಆಚರಣೆಗಳ ಹಿಂದಿನ ರಹಸ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಹಿಂದಿನವರು ಹೇಳುತ್ತಾರೆ ಏಕೆ ?
ಏಕೆಂದರೆ ಭೂಮಿಯ ಸುತ್ತ ಯಾವಾಗಲೂ ಕಾಂತೀಯ ಕ್ಷೇತ್ರ ಇರುತ್ತದೆ. ಭೂಮಿ ದೊಡ್ಡ ಆಯಸ್ಕಾಂತ ಇದ್ದಂತೆ. ಹಾಗೆ ನಮ್ಮ ದೇಹದಲ್ಲಿ ರಕ್ತ ಸಂಚಾರ ಆಗುವುದರಿಂದ ನಮ್ಮ ದೇಹದಲ್ಲಿ ಕೂಡ ಕಾಂತೀಯ ಕ್ಷೇತ್ರ ಇರುತ್ತದೆ. ಹಾಗೆಯೇ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ನಮ್ಮ ದೇಹದ ಕಾಂತೀಯ ಕ್ಷೇತ್ರ ಮತ್ತು ಭೂಮಿಯ ಕಾಂತೀಯ ಕ್ಷೇತ್ರ ಸಮ ಆಗದೇ ಇರುವುದರಿಂದ ಬಿಪಿ ಹೆಚ್ಚಾಗುತ್ತದೆ. ನಾವು ಉತ್ತರ ದಿಕ್ಕಿಗೆ ತಲೆ ಇಡುವುದರಿಂದ ನಮ್ಮ ದೇಹದ ಕಬ್ಬಿಣ ಪೂರ್ತಿ ತಲೆಯಲ್ಲಿ ಸಂಗ್ರಹವಾಗುತ್ತದೆ. ಆಗ ತಲೆನೋವು ಉಂಟಾಗುತ್ತದೆ.

ಮನೆಯ ಮುಂದೆ ಸಗಣಿ ಹಾಕಿ ಸಾರಿಸುತ್ತಾರೆ ಏಕೆ? ಏಕೆಂದರೆ ಸಗಣಿಯಲ್ಲಿ ಮೀಥೇನ್ ಇರುತ್ತದೆ. ಸಗಣಿಗೆ ಸೂರ್ಯನ ಕಿರಣಗಳು ಹಾಗೂ ಗಾಳಿ ತಾಗಿ ಒಂದು ಮಿಶ್ರಣ ಆಗಿ ಬ್ಯಾಕ್ಟೀರಿಯಾಗಳು ಮನೆಯ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ.

ಉಪವಾಸವನ್ನು ಏಕೆ ಮಾಡಬೇಕು? ನಮ್ಮ ದೇಹದ ಆರೋಗ್ಯ ಕೆಡಲು ಮುಖ್ಯ ಕಾರಣ ಎಂದರೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಿ ಆಗದೇ ಇರುವುದು. ನಾವು ಪ್ರತಿದಿನ ಆಹಾರ ಸೇವನೆ ಮಾಡುವುದರಿಂದ ಕೆಲವು ವಿಷಕಾರಿ ವಸ್ತುಗಳು ನಮ್ಮ ದೇಹದಲ್ಲಿ ಸಂಗ್ರಹವಾಗುತ್ತದೆ. ಒಂದು ದಿನ ಪೂರ್ತಿ ಏನೂ ತಿನ್ನದೇ ಹೋದರೆ ಅವುಗಳು ಸತ್ತು ಹೋಗುತ್ತವೆ.

ಮನೆಯ ಮುಂದೆ ರಂಗೋಲಿಯನ್ನು ಏಕೆ ಹಾಕಿರುತ್ತಾರೆ?
ಮನೆಯ ಮುಂದೆ ಹಾಕುವ ರಂಗೋಲಿಯನ್ನು ಕೋಲಂ ಎಂದು ಕರೆಯಲಾಗುತ್ತದೆ. ಮನೆಯ ಮುಂದೆ ಪ್ರತಿನಿತ್ಯ ರಂಗೋಲಿ ಹಾಕುವುದರಿಂದ ಕ್ರಿಮಿಗಳು ನಮ್ಮ ಮನೆಯ ಒಳಗೆ ಬರುವುದಿಲ್ಲ.

ಬೆಳಿಗ್ಗೆ ಎದ್ದು ಸೂರ್ಯನಿಗೆ ನಮಸ್ಕಾರ ಮಾಡುತ್ತೀವೀ ಏಕೆ? ಬೆಳಿಗ್ಗೆ ಎದ್ದು ಸೂರ್ಯನಿಗೆ ನಮಸ್ಕಾರ ಮಾಡಿ ನೀರನ್ನು ಹಾಕುವಾಗ ಸೂರ್ಯನ ಕಿರಣಗಳು ನೀರಿನ ಮೇಲೆ ಬೀಳುತ್ತವೆ. ಇದರಿಂದ ನಮ್ಮ ಕಣ್ಣಿಗೆ ಒಳ್ಳೆಯದಾಗಿ ದೃಷ್ಟಿ ವೃದ್ಧಿಸುತ್ತದೆ. ನಾವು ದೇವಸ್ಥಾನಕ್ಕೆ ಏಕೆ ಹೋಗುತ್ತೇವೆ? ನಮ್ಮ ಭೂಮಿಯ ಮೇಲೆ ಕಾಂತೀಯ ಮತ್ತು ವಿದ್ಯುತ್ ಚಲಕಗಳು ಚಲಿಸುತ್ತಿರುತ್ತವೆ. ದೇವಸ್ಥಾನವನ್ನು ಕಟ್ಟುವಾಗ ಎಲ್ಲಿ ಈ ಎರಡು ಶಕ್ತಿ ಹೆಚ್ಚು ಇದೆ ಎಂದು ನೋಡಿ ಕಟ್ಟುತ್ತಾರೆ. ಆದ್ದರಿಂದ ಸಕಾರಾತ್ಮಕ ಶಕ್ತಿ ಗರ್ಭಗುಡಿಯಲ್ಲಿ ಹೆಚ್ಚಿರುತ್ತದೆ. ದೇವಸ್ಥಾನಕ್ಕೆ ಹೋಗಿ ಸುತ್ತು ಹಾಕುವುದರಿಂದ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಮುಖಕ್ಕೆ ಅರಿಶಿನವನ್ನು ಏಕೆ ಹಚ್ಚಿಕೊಳ್ಳುತ್ತಾರೆ? ಅರಿಶಿನ ಒಂದು ನೈಸರ್ಗಿಕ ವಸ್ತು. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳು ಸತ್ತು ಹೋಗಿ ಮುಖ ಕಾಂತಿಯುತವಾಗುತ್ತದೆ. ಹಿರಿಯರ ಕಾಲಿಗೆ ನಮಸ್ಕಾರ ಏಕೆ ಮಾಡುತ್ತಾರೆ? ಏಕೆಂದರೆ ನಮಸ್ಕಾರ ಮಾಡಿದಾಗ ಕೈ ಹಿರಿಯರ ಕಾಲಿಗೆ ತಾಗಿದಾಗ ಅವರ ಆಶೀರ್ವಾದದಿಂದ ಒಂದು ಸಕಾರಾತ್ಮಕ ಶಕ್ತಿ ದೇಹವನ್ನು ಪ್ರವೇಶಿಸುತ್ತದೆ. ಹಣೆಗೆ ಕುಂಕುಮವನ್ನು ಏಕೆ ಇಡುತ್ತಾರೆ. ಹಣೆಯ ಮಧ್ಯ ಭಾಗದಲ್ಲಿ ಒಂದು ಭಾಗ ಇರುತ್ತದೆ. ಅಲ್ಲಿಂದ ನಮ್ಮ ದೇಹಕ್ಕೆ ಪೂರ್ತಿ ರಕ್ತ ಸಂಚಾರ ಆಗುತ್ತದೆ. ಇದರಿಂದ ಏಕಾಗ್ರತೆ ಹೆಚ್ಚಾಗಿ ಶಕ್ತಿಯ ಮಟ್ಟ ಹೆಚ್ಚುತ್ತದೆ.

Leave a Comment