ದೇಹದ ಈ ಭಾಗದಲ್ಲಿ ತುರಿಕೆಯಿದ್ದರೆ ಇಲ್ಲಿದೆ ಪರಿಹಾರ

ದೇಹದಲ್ಲಿ ಒಂದಿಷ್ಟು ಗಾಳಿ ಆಡದೇ ಇರುವಂತಹ ಭಾಗ ಎಂದರೆ ಅದು ಗುಪ್ತಾಂಗ. ಇಲ್ಲಿ ಗಾಳಿ ಆಡದೇ ಇದ್ದರೆ ತುರಿಕೆ ಸಮಸ್ಯೆ ಕಂಡುಬರುತ್ತದೆ. ಗುಪ್ತಾಂಗದ ತುರಿಕೆಯು ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದ

ಇದು ಮಹಿಳೆಯರಲ್ಲಿ ಒಂದು ರೀತಿಯ ಸಮಸ್ಯೆ ಹುಟ್ಟು ಹಾಕಿದರೆ, ಪುರುಷರಲ್ಲಿ ಇನ್ನೊಂದು ರೀತಿಯ ಸಮಸ್ಯೆ ಹುಟ್ಟು ಹಾಕುತ್ತದೆ. ಕೆಲವೊಮ್ಮೆ ಪುರುಷರಿಗೆ ಯಾಕಾದರೂ ವೃಷಣಗಳಿವೆಯೋ ಎಂಬಷ್ಟು ತುರಿಕೆ ಸಮಸ್ಯೆ ಕಾಡುತ್ತದೆ. ಅದರಲ್ಲೂ ಸಾರ್ವಜನಿಕ ಸ್ಥಳದಲ್ಲಿ ಮುಜುಗರಕ್ಕಿಡು ಮಾಡುತ್ತದೆ.

ಈ ತುರಿಕೆ ಸಮಸ್ಯೆ ಉಂಟಾಗಲು ಕಾರಣಗಳೇನು ಎಂಬುದನ್ನು ತಿಳಿಯೋಣ. ಸಾಮಾನ್ಯವಾಗಿ ಜೀಮ್ ಅಥವಾ ವ್ಯಾಯಾಮ ಮಾಡಿದ ನಂತರ ನಮ್ಮ ತ್ವಚೆಯ ರಂಧ್ರಗಳು ತೆರೆದು ಬೆವರು ಹರಿಸಲು ನೋಡುತ್ತವೆ. ಈ ಸಂದರ್ಭದಲ್ಲಿ ಬಿಗಿಯಾದ ಒಳ ಉಡುಪು ಧರಿಸಿದ್ದರೆ ಗುಪ್ತಾಂಗದಲ್ಲಿ ಗಾಳಿ ಆಡುವುದಿಲ್ಲ. ಇದರಿಂದ ಫಂಗಸ್ ಉಂಟಾಗಿ ತುರಿಕೆಯಾಗುತ್ತದೆ.

ಹಾಗಾದರೆ ಗುಪ್ತಾಂಗ ಸಮಸ್ಯೆ ನಿವಾರಿಸುವುದು ಹೇಗೆ
ಕೆಲಸ ಮಾಡಿ ಮನೆಗೆ ಬಂದ ನಂತರ ಸ್ನಾನ ಮಾಡಿ.ಮೈಯನ್ನು ಚೆನ್ನಾಗಿ ಒರಸಿ, ಒಣಗಿಸಿಕೊಳ್ಳಬೇಕು. ಅಲ್ಲದೆ ಸಡಿಲವಾದ ಕಾಟನ್ ಒಳ ಉಡುಪನ್ನು ಧರಿಸಬೇಕು ಇದರ ಹೊರತು ಬೇರೆ ಉಡುಪು ಧರಿಸೋದು ಕಡಿಮೆ ಮಾಡಿದರೆ ತುಂಬಾ ಒಳ್ಳೆಯದು.

ಜೀಮ್ ಅಥವಾ ವ್ಯಾಯಾಮ ಮಾಡಿದ ನಂತರ ಕಡ್ಡಾಯ ವಾಗಿ ನಿಮ್ಮ ಒಳ ಉಡುಪನ್ನು ಬದಲಿಸಬೇಕು ಅಲ್ಲದೆ ತೇವಾಂಶ ಹೀರಿಕೊಳ್ಳುವ ಪೌಡರ್ ಬಳಸಿ.ಒಳ ಉಡುಪುಗಳನ್ನು ಬಿಸಿ ನೀರಿನಲ್ಲಿ ಸೋಪಿನ ಪುಡಿಯೊಂದಿಗೆ ಬಳಸಿ ತೊಳೆದರೆ ಇದರಲ್ಲಿದ್ದ ಎಲ್ಲಾ ವೈರಸ್ ಗಳನ್ನು ನಾಶ ಮಾಡಬಹುದಾಗಿದೆ.

ಸ್ನಾನ ಮಾಡುವಾಗ ಸೌಮ್ಯವಾದ, ಹೆಚ್ಚು ಸುಗಂಧವಿಲ್ಲದ ಸೋಪ್ ಹಚ್ಚಿಕೊಳ್ಳಬೇಕು.ವಾರಕ್ಕೆ ಎರಡು ಬಾರಿ ಎಣ್ಣೆ ಸ್ನಾನ ಮಾಡಿ. ಗುಪ್ತಾಂಗ ಅಥವಾ ವೃಷಣಗಳಲ್ಲಿ ಹೆಚ್ಚು ತುರಿಕೆಯಿದ್ದರೆ. ಅ ಭಾಗಕ್ಕೆ ಕೊಬ್ಬರಿ ಎಣ್ಣೆ ಹಚ್ಚಿ 15 ನಿಮಿಷದ ನಂತರ ಸ್ನಾನ ಮಾಡಿ. ಇದರಿಂದ ತುರಿಕೆ ಸಮಸ್ಯೆಗಳು ಆದಷ್ಟು ಬೇಗ ಕಡಿಮೆ ಆಗುತ್ತದೆ. ಒಂದು ವೇಳೆ ತುರಿಕೆ ಸಮಸ್ಯೆ ಹೆಚ್ಚಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ

Leave a Comment