ಸೀತಾಫಲ ಹಣ್ಣು ಹತ್ತಾರು ಲಾಭಗಳನ್ನು ಹೊಂದಿದೆ, ಇದರಲ್ಲಿ ನಾನಾ ರೀತಿಯ ರೋಗಗಳನ್ನು ದೈಹಿಕ ಸಮಸ್ಯೆಗಳನ್ನು ನಿವಾರಿಸುವ ಗುಣಗಳನ್ನು ಕಾಣಬಹುದು. ಇನ್ನು ಈ ಹಣ್ಣಿನಲ್ಲಿರುವಂತ ಔಷಧಿಯ ಗುಣಗಳು ಯಾವವು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಈ ಆರೋಗ್ಯಕರ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ.
ಸೀತಾಫಲ ಹಣ್ಣಿನಲ್ಲಿರುವಂತ ಔಷದಿಯ ಗುಣಗಳು: ಗಾಯಗಳು ಬೇಗನೆ ವಾಸಿಯಾಗವಂತೆ ಮಾಡುತ್ತದೆ ಹೌದು ಸೀತಾಫಲದ ಹಣ್ಣಾದ ಎಲೆಗಳನ್ನು ಬಾಣಲೆಯಲ್ಲಿ ಹುರಿದು ಕಾರಕನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿ ಲೇಪಿಸಿದರೆ ಎಲ್ಲ ಬಗೆಯ ಗಾಯಗಳು ಬೇಗ ಒಣಗುತ್ತದೆ.
ಇನ್ನು ಸೀತಾಫಲದ ಎಲೆಯನ್ನು ಹಸಿ ಅರಸಿನ ಕೊಂಬನ್ನು ಅರೆದು ಲೇಪಿಸಿದರೆ ನಾರು ಹುಣ್ಣು ಗುಣವಾಗುತ್ತದೆ. ಇದನ್ನು ಒಂದರಿಂದ ಎರಡು ವಾರಗಳು ಮಾಡಬೇಕಾಗುತ್ತದೆ. ದೇಹದ ಮೇಲೆ ಆಗುವಂತ ಕುರ ಗಡ್ಡೆ ಇವುಗಳನ್ನು ನಿವಾರಿಸಲು ಸೀತಾಫಲದ ಎಲೆಯನ್ನು ಉಪ್ಪಿನ ಜತೆ ಅರೆದು ಕುರು ಮತ್ತು ಗಡ್ಡೆಯ ಮಧ್ಯಭಾಗವನ್ನು ಬಿಟ್ಟು ಸುತ್ತಲೂ ಹಚ್ಚಿದರೆ ಕುರು ಮತ್ತು ಗಡ್ಡೆ ಬೇಗ ಪಕ್ವವಾಗುತ್ತದೆ.
ಸೀತಾಫಲದ ಬೀಜದೊಳಗಿನ ಪೊಪ್ಪನ್ನು ಒಣಗಿಸಿ ಕುಟ್ಟಿ ಪುಡಿಮಾಡಿ ಅದರ ಹೊಗೆಯನ್ನು ಮೂರ್ಛೆ ರೋಗಿಗಳಿಗೆ ನೀಡಿದರೆ ಎಚ್ಚರ ಬರುತ್ತದೆ ಈ ಚಿಕಿತ್ಸೆಯನ್ನು ರೋಗ ಬಂದ ಸಮಯದಲ್ಲಿ ಮೂರೂ ನಾಲ್ಕು ತಿಂಗಳು ಮಾಡಬೇಕು.
ಸೀತಾಫಲದ ಎಲೆಯನ್ನು ಗೋಮೂತ್ರದಲ್ಲಿ ಅಥವಾ ಮೊಸರಿನಲ್ಲಿ ಅರೆದು ಲೇಪಿಸಿದರೆ ಪಿತ್ತದಿಂದ ಉಂಟಾದ ಮೈ ಉರಿ, ಪಿತ್ತದ ಗಂದೆಗಳು ಗುಣವಾಗುತ್ತವೆ. ಅಷ್ಟೇ ಅಲ್ಲದೆ ಹೊಟ್ಟೆ ಹುಳು ಜಂತು ಹುಳು ಸಮಸ್ಯೆಗೆ ಸೀತಾಫಲದ ಎಳೆಯ ಕಷಾಯವನ್ನು ಸೇವಿಸಿದರೆ ಜಂತು ಹುಳುಗಳು ನಾಶವಾಗುತ್ತವೆ.