ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರು ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶ ವಿದೇಶದಲ್ಲೂ ಕೂಡ ಪ್ರಸಿದ್ದಿ ಪಡೆದಿದ್ದರು. ವಾಸ್ತು ಮತ್ತು ಜ್ಯೋತಿಷ್ಯದ ಕುರಿತು ಅಗಾಧವಾದ ಜ್ಞಾನವನ್ನು ಹೊಂದಿದ್ದರು. ಇಂದು ಮಧ್ಯಾಹ್ನ ಹುಬ್ಬಳ್ಳಿ ಉಣಕಲ್ ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಚಂದ್ರಶೇಖರ್ ಗುರೂಜಿಯವರು ಬರ್ಬರವಾಗಿ ಹ’ತ್ಯೆಯಾಗಿದ್ದಾರೆ. ಇದೀಗ ಇವರ ಸಾ’ವಿನ ಸುತ್ತ ಹಲವಾರು ಶಂಕೆಗಳು ಹುಟ್ಟಿಕೊಂಡಿವೆ.
ಕೆಲವೇ ಗಂಟೆಗಳಲ್ಲಿ ಚಂದ್ರಶೇಖರ್ ಗುರೂಜಿ ಅವರ ಕಥೆಯನ್ನು ಮುಗಿಸಿದ ಹಂತಕರ ಹೆಸರುಗಳು ಮತ್ತು ಅವರ ಮುಖವಾಡಗಳು ಬಯಲಾಗಿದೆ. ಆಶ್ಚರ್ಯಕರ ವಿಷಯವೇನೆಂದರೆ ಚಂದ್ರಶೇಖರ್ ಗುರೂಜಿ ಅವರನ್ನು ಮುಗಿಸಿದ್ದು ಅವರ ಆಪ್ತರೇ ಎಂದು ತಿಳಿದು ಬಂದಿದೆ .. ಹೌದು ಸ್ನೇಹಿತರೆ ಚಂದ್ರಶೇಖರ್ ಗುರೂಜಿ ಅವರ ಬಳಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿಗಳೇ ಗುರೂಜಿಯವರ ಕಥೆ ಮುಗಿಸಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಹಾಗಾದರೆ ಇವರ ಆಪ್ತ ವರ್ಗದವರೇ ಇವರಿಗೆ ಚಾ’ಕುವಿನಿಂದ ಇ’ರಿದು ಚುಚ್ಚಿ ಚುಚ್ಚಿ ಕಥೆ ಮುಗಿಸಿದ್ದು ಏಕೆ ಗೊತ್ತಾ?
ಚಂದ್ರಶೇಖರ್ ಗುರೂಜಿ ಅವರ ಬಳಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿ ವನಜಾಕ್ಷಿ ಎಂಬ ಮಹಿಳೆಯೇ ಈ ಕೃತ್ಯವನ್ನು ಮಾಡಿಸಿದ್ದಾಳೆ ಎಂಬ ಸುದ್ದಿ ಹೊರಬಿದ್ದಿದೆ. 16 ವರ್ಷಗಳ ಕಾಲ ವನಜಾಕ್ಷಿ ಗುರೂಜಿಯವರ ಬಳಿ ಕೆಲಸ ಮಾಡಿದ್ದಳು. ಹಾಗೆ ವನಜಾಕ್ಷಿ ಗಂಡ ಮಹಂತೇಶ್ ಕೂಡ 2009 ರಿಂದ 2019 ರ ವರೆಗೆ ಗುರೂಜಿಯವರ ಬಳಿ ಉದ್ಯೋಗಿಯಾಗಿ ಕೆಲಸ ಮಾಡಿದ್ದ. ಇದೀಗ ಗುರೂಜಿಯವರನ್ನು ಮಹಂತೇಶ್ ಮುಗಿಸಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಚಂದ್ರಶೇಖರ್ ಗುರೂಜಿ ಮತ್ತು ಮಹಿಳೆಯ ಮಧ್ಯೆ ಇದ್ದ ಬೇನಾಮಿ ಆಸ್ತಿ ಎಂಬ ಶಂಕೆ ಮೂಡಿದೆ. ಚಂದ್ರಶೇಖರ್ ಗುರೂಜಿಯವರು ಅಪಾರ್ಟ್ ಮೆಂಟ್ ಒಂದನ್ನು ಖರೀದಿ ಮಾಡಿ ಅದನ್ನು ಬೇನಾಮಿ ಆಸ್ತಿಯಾಗಿ ವನಜಾಕ್ಷಿ ಹೆಸರಿಗೆ ಬರೆದುಕೊಟ್ಟಿದ್ದರು. ಇನ್ ಕಮ್ ಟ್ಯಾಕ್ಸ್ ಹಣದಿಂದ ತಪ್ಪಿಸಿಕೊಳ್ಳಲು ಕಪ್ಪುಹಣ ಅಥವಾ ನಗದು ಹಣವನ್ನು ಬಚ್ಚಿಡಲು ಈ ರೀತಿ ಆಸ್ತಿಯನ್ನು ಮಾಡಿ ತನ್ನ ಉದ್ಯೋಗಿ ಹೆಸರಿಗೆ ಚಂದ್ರಶೇಖರ್ ಅವರು ನೂರಾರು ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ಅನ್ನು ಕೊಟ್ಟಿದ್ದರು.
ಸ್ವಲ್ಪ ತಿಂಗಳುಗಳು ಕಳೆದ ನಂತರ ಚಂದ್ರಶೇಖರ್ ಗುರೂಜಿ ಅವರು ತಾವು ಬರೆದುಕೊಟ್ಟ ಆಸ್ತಿಯನ್ನು ಹಿಂದಿರುಗಿಸುವಂತೆ ವನಜಾಕ್ಷಿ ಬಳಿ ಕೇಳಿದ್ದರು. ಆಗ ವನಜಾಕ್ಷಿ ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ನಾನು ಹೇಗೆ ಹಿಂದಿರುಗಿಸಬೇಕೆಂದು ನೀವು ನನಗೆ ಕೊಟ್ಟಿರುವ ಆಸ್ತಿಯನ್ನು ನಾನು ಹಿಂತಿರುಗಿ ಕೊಡಲು ಆಗಲ್ಲ ಅದು ನನ್ನದೇ ಆಸ್ತಿ ಎಂದು ಗುರೂಜಿ ಅವರ ಬಳಿ ವಾದಕ್ಕೆ ಇಳಿದಿದ್ದಳು. ಆದರೆ ಗುರೂಜಿ ಪಟ್ಟು ಹಿಡಿದು ತನ್ನ ಆಸ್ತಿಯನ್ನು ಹಿಂದಿರುಗಿಸುವಂತೆ ಪೀಡಿಸುತ್ತಿದ್ದರು. ಇದೇ ವಿಷಯಕ್ಕೆ ಗುರೂಜಿ ಮತ್ತು ವನಜಾಕ್ಷಿ ಮದ್ಯ ವಾದವಿವಾದಗಳು ನಡೆಯುತ್ತಲೇ ಇತ್ತು ಮಾತಿನ ಚಕಮಕಿ ನಡೆಯುತ್ತಲೇ ಇತ್ತು.
ಇಂದು ಮಧ್ಯಾಹ್ನ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಚಂದ್ರಶೇಖರ್ ಗುರೂಜಿ ಅವರು ರಿಸೆಪ್ಷನ್ ನಲ್ಲಿ ಕುಳಿತಿದ್ದರು. ಏಕಾಏಕಿ ಗುರೂಜಿ ಬಳಿ ಬಂದ ಇಬ್ಬರು ದುಷ್ಕರ್ಮಿ ಗಳು ಕಾಲಿಗೆ ನಮಸ್ಕಾರ ಮಾಡುವ ನಾಟಕವಾಡಿ, ಈ ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬ ವನಜಾಕ್ಷಿಯ ಕಂಡ ಮಹಾಂತೇಶ್ ಕೂಡ ಆಗಿದ್ದ. ಇಬ್ಬರೂ ಸೇರಿ ಚಾಕುವಿನಿಂದ ಗುರೂಜಿಯವರನ್ನು ಅರುವತ್ತು ಬಾರಿ ಚುಚ್ಚಿ ಚುಚ್ಚಿ ಕೊ’ಲೆ ಮಾಡಿದ್ದಾರೆ. ಇವರು ಕೊ’ಲೆ ಮಾಡಿರುವ ವಿಡಿಯೋ ಹೋಟೆಲ್ ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕೃತ್ಯದ ಹಿಂದೆ ಗುರೂಜಿಯವರ ಸಹೋದ್ಯೋಗಿಯಾಗಿದ್ದ ಮಹಂತೇಶ್ ನ ಹೆಸರು ಮೊದಲಿಗೆ ಕೇಳಿಬರುತ್ತಿದೆ. ಆದರೆ ಸದ್ಯಕ್ಕೆ ತನಿಖೆ ನಡೆಯುತ್ತಿದ್ದು ಸತ್ಯಾಂಶ ತದನಂತರವೇ ಹೊರಬರಲಿದೆ.