ಇಡೀ ರಾಜ್ಯವನ್ನೇ ಕಂಗಡಿಸುವಂತೆ, ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹ’ತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ ಗುರೂಜಿಯವರನ್ನು ಭೀಕರವಾಗಿ ಚಾಕುವಿನಿಂದ ಚುಚ್ಚಿ ಹಂತಕರು ಕೊ’ಲೆಗೈದಿದ್ದಾರೆ. ಕೇವಲ 40 ಸೆಕೆಂಡುಗಳಲ್ಲಿ 60 ಬಾರಿ ಚಂದ್ರಶೇಖರ್ ಗುರೂಜಿಯವರನ್ನು ಚುಚ್ಚಲಾಗಿದೆ ಎಂಬುದು ಸಿಸಿಟಿವಿಯ ಫೂಟೇಜಿನಿಂದ ಸಾಬೀತಾಗಿದೆ ಅಲ್ಲದೆ ಕೃತ್ಯ ಮಾಡಿರುವ ಹಂತಕರು ಕೂಡ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ದಾರುಣ ಕೃತ್ಯಕ್ಕೆ ಆಸ್ತಿ ವಿವಾದಗಳೇ ಕಾರಣ ಎನ್ನಲಾಗುತ್ತಿದೆ.
ಹಾಗಾದ್ರೆ ಈ ಚಂದ್ರಶೇಖರ ಗುರೂಜಿ ಯಾರು ಸರಳವಾಸ್ತು ಆರಂಭವಾಗಿದ್ದು ಹೇಗೆ! ಇತ್ಯಾದಿ ಮಾಹಿತಿಗಳನ್ನು ನಾವು ಈ ಲೇಖನದಲ್ಲಿ ನಿಮಗೆ ನೀಡುತ್ತೇವೆ. ಚಂದ್ರಶೇಖರ ಗುರೂಜಿ ಅವರು ಮೂಲತಃ ಬಾಗಲಕೋಟೆಯವರು. ಇವರು ಹುಟ್ಟಿದ್ದು 1958ರಲ್ಲಿ. ಚಿಕ್ಕ ವಯಸ್ಸಿನಲ್ಲಿ ವಾಸ್ತುವಿನ ಬಗ್ಗೆ ಕಲ್ಪನೆ ಇದ್ದ ಚಂದ್ರಶೇಖರ್ ಅವರು, ಬಾಗಲಕೋಟೆಯಲ್ಲಿ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿ ಕೆಲಸಕ್ಕಾಗಿ ಮುಂಬೈಗೆ ತರಲುತ್ತಾರೆ ಮುಂಬೈನಲ್ಲಿ ಕನ್ ಸ್ಟ್ರಕ್ಷನ್ ಕಂಪನಿಗಳಲ್ಲಿ ಕೆಲಸ ಮಾಡಿ ಒಂದಷ್ಟು ಹಣವನ್ನು ಸಂಪಾದನೆ ಮಾಡುತ್ತಾರೆ. ಬಳಿಕ ಸಿಂಗಾಪುರಕ್ಕೆ ಹಾರುತ್ತಾರೆ ಚಂದ್ರಶೇಖರ್. ಸಿಂಗಪೂರ್‌ನಲ್ಲಿ ಕೆಲವು ಸಮಯ ತಂದಿದ್ದು ಸರಳ ವಾಸ್ತುವಿನ ಬಗ್ಗೆ ಅಧ್ಯಯನ ಮಾಡುತ್ತಾರೆ. ಸ್ವಲ್ಪ ಸಮಯದ ನಂತರ ಮತ್ತೆ ಮುಂಬೈಗೆ ಮರಳಿ ತಮ್ಮದೇ ಆದ ಕನ್ ಸ್ಟ್ರಕ್ಷನ್ ಕಂಪನಿಯನ್ನು ಆರಂಭಿಸುತ್ತಾರೆ. ಬಳಿಕ ಆರಂಭವಾಗಿದ್ದೆ ಸರಳ ವಾಸ್ತು ಕಂಪನಿ.
ಸರಳ ವಾಸ್ತುವನ್ನು ಆರಂಭಿಸಿದ ನಂತರ ವಾಹಿನಿಗಳಲ್ಲಿ ಕಾರ್ಯಕ್ರಮಗಳಲ್ಲಿ ಸರಳ ವಾಸ್ತುವಿನ ಬಗ್ಗೆ ಮಾಹಿತಿಯನ್ನು ನೀಡಲು ಆರಂಭಿಸುತ್ತಾರೆ. ಬಳಿಕ ಸರಳವಾಸ್ತು ಹಾಗೂ ಚಂದ್ರಶೇಖರ್ ಗುರೂಜಿ ಎನ್ನುವ ಹೆಸರು ಕರ್ನಾಟಕ ರಾಜ್ಯಾದ್ಯಂತ ಸಿಕ್ಕಾಪಟ್ಟೆ ಫೇಮಸ್ ಆಗುತ್ತೆ. ರಾತ್ರೋರಾತ್ರಿ ಚಂದ್ರಶೇಖರ್ ಗುರೂಜಿ ಒಬ್ಬ ಫೇಮಸ್ ಸರಳ ವಾಸ್ತು ತಜ್ಞ ಎಂದು ಗುರುತಿಸಿಕೊಳ್ಳುತ್ತಾರೆ. ಚಂದ್ರಶೇಖರ್ ಗುರೂಜಿ ಅವರ ಕಂಪನಿಯ ಎದುರು ಸಾಲು ಸಾಲು ಗಟ್ಟಲೆ ಜನ ಬಂದು ನಿಲ್ಲುತ್ತಾರೆ. ತಮ್ಮ ಜೀವನದಲ್ಲಿಯೂ ಬದಲಾವಣೆಗಳಾಗಬೇಕು ಅಂತ ಹಲವರು ಚಂದ್ರಶೇಖರ್ ಗುರೂಜಿ ಹೇಳಿರುವಂತಹ ಬದಲಾವಣೆಗಳನ್ನು ಮನೆಗಳಲ್ಲಿ ತರುತ್ತಾರೆ. ಕೆಲವರು ಇದರಲ್ಲಿ ಯಶಸ್ಸನ ಕಂಡರೆ ಇನ್ನು ಕೆಲವರು ಫೇಲ್ಯೂರ್ ಕೂಡ ಆಗಿದ್ದಾರೆ.
ಹೀಗೆ ಫೇಮಸ್ ಆದ ಚಂದ್ರಶೇಖರ್ ಗುರೂಜಿ 2016ರಲ್ಲಿ ಸರಳ ಜೀವನ ಎನ್ನುವ ವಾಹಿನಿಯನ ಆರಂಭಿಸುತ್ತಾರೆ. ಎರಡು ವರ್ಷಗಳ ಕಾಲ ನಡೆದ ಈ ವಾಹಿನಿ ವಂಜನೆಯ ಪ್ರಕರಣದಿಂದಾಗಿ 2018ರಲ್ಲಿ ಮುಚ್ಚಲಾಗುತ್ತೆ. ರಾಜ್ಯದ್ಯಂತ ಬೇರೆ ಬೇರೆ ಕಡೆಗಳಿಂದ ಜನರು ಸರಳ ವಾಸ್ತು ಹಾಗೂ ಸರಳ ಜೀವನದ ಮೇಲೆ ದೂರನಾ ನೀಡಲು ಆರಂಭಿಸುತ್ತಾರೆ. ತಮ್ಮಿಂದ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಾರೆ ಎಂದು ಚಂದ್ರಶೇಖರ್ ಗುರೂಜಿ ಅವರ ಮೇಲೆ ಆರೋಪವನ್ನು ಮಾಡುತ್ತಾರೆ. ಬಳಿಕ ಸರಳ ವಾಸ್ತು ವಿನ ಬಗ್ಗೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳು ಕೂಡ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಇತ್ತೀಚಿನ ದಿನಗಳಲ್ಲಿ ಸರಳವಾಸ್ತು ಎನ್ನುವುದನ್ನು ಜನ ಕೊಂಚಮಟ್ಟಿಗೆ ಮರೆತಿದ್ದಾರೋ ಎನ್ನುವಷ್ಟರ ಮಟ್ಟಿಗೆ ಮೂಲೆ ಸೇರುತ್ತಾರೆ ಚಂದ್ರಶೇಖರ್ ಗುರೂಜಿ.
ಇದೀಗ ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡಲಾಗಿದೆ. ಒಂದು ಕಾಲದಲ್ಲಿ ಒಂದು ರೂಪಾಯಿಗೂ ಪರದಾಡುತ್ತಿದ್ದ ಚಂದ್ರಶೇಖರ್ ಗುರೂಜಿ ಇದೀಗ ಮುಂಬೈನಲ್ಲಿಯೂ ಫ್ಲ್ಯಾಟ್ ಗಳನ್ನು ಹೊಂದಿರುವ ಒಬ್ಬ ಕೋಟ್ಯಾಧಿಪತಿ. ಸಾವಿರಾರು ಕೋಟಿ ಆಸ್ತಿಗಳ ಒಡೆಯ. ಅಲ್ಲದೆ ತಮ್ಮ ಸಂಬಂಧಿಕರು ಹಾಗೂ ಪರಿಚಯದವರ ಹೆಸರಿನಲ್ಲಿಯೂ ಕೂಡ ಸಾಕಷ್ಟು ಬೇನಾಮಿ ಆಸ್ತಿಗಳನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಚಂದ್ರಶೇಖರ್ ಗುರೂಜಿ ಸರಳ ವಾಸ್ತುವಿನ ಮೂಲಕ ಫೇಮಸ್ ಆಗುತ್ತಾ ಬಂದಂತೆ ಹಲವು ರಾಜಕಾರಣಿಗಳಿಗೆ ದೊಡ್ಡ ದೊಡ್ಡ ಕಂಪನಿಗಳಿಗೆ ವಾಸ್ತುವನ್ನ ಹೇಳುತ್ತಿದ್ದರು. ಇವರು ವಾಸ್ತುನ ತಮ್ಮ ಮನೆಯಲ್ಲಿಯೂ ಅಥವಾ ಕಂಪನಿಯಲ್ಲಿಯೂ ಅಳವಡಿಸಿ ಒಳ್ಳೆಯದಾಗಿದೆ ಎನ್ನುವವರ ಸಂಖ್ಯೆಯು ಇದೆ, ಅದೇ ರೀತಿ ತಮಗೆ ಮೋಸವಾಗಿದೆ ಎಂದು ಹೇಳಿಕೊಳ್ಳುವವರು ಇದ್ದಾರೆ. ಅದೇನೇ ಇರಲಿ ಒಬ್ಬ ವ್ಯಕ್ತಿಯನ್ನು ಹೀಗೆ ತಮ್ಮದೇ ಆದ ಕಾರಣಕ್ಕೆ ಮುಗಿಸಿರುವುದು ಮಾತ್ರ ಖಂಡನೀಯ!