ಸಚಿನ್ ಪುತ್ರನ ಬಗ್ಗೆ ಸಂತೋಷ ವ್ಯಕ್ತಪಡಿಸಿದ ವಿದೇಶಿ ಮಹಿಳಾ ಕ್ರಿಕೆಟರ್ ಜೊತೆ ಸಚಿನ್ ತೆಂಡೂಲ್ಕರ್ ಮಗನ ಸುತ್ತಾಟ ಓಡಾಟ

ಕ್ರಿಕೆಟ್ ದೇವರು ಎಂದೇ ಪ್ರಸಿದ್ಧರಾಗಿರುವ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್. ಅತಿ ಕಿರಿಯ ವಯಸ್ಸಿನಲ್ಲಿ ಕ್ರಿಕೆಟ್ ಫೀಲ್ಡ್ ಗೆ ಇಳಿದು ಇಂದು ಅತ್ಯಂತ ಫೇಮಸ್ ಕ್ರಿಕೆಟಿಗ ಎನಿಸಿರುವ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದಾರೆ. ಇದೀಗ ಅವರ ಮಗ ಅರ್ಜುನ್ ತೆಂಡೂಲ್ಕರ್ ಕೂಡ ಅತ್ಯುತ್ತಮ ಕ್ರಿಕೆಟಿಗನಾಗುವ ಹಂಬಲ ಹೊಂದಿದ್ದಾರೆ.

ಸಚಿನ್ ತೆಂಡೂಲ್ಕರ್ ಮಗಳು ಸಿನಿಮಾ, ಮಾಡಲಿಂಗ್ ಕ್ಷೇತ್ರಕ್ಕೆ ಹೋದರೆ ಮಗ ಅರ್ಜುನ್ ತೆಂಡೂಲ್ಕರ್ ಅಪ್ಪನಂತೆ ಕ್ರಿಕೆಟ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಸದ್ಯ ಅರ್ಜುನ್ ಇಂಗ್ಲಿಂಡಿನಲ್ಲಿದ್ದಾರೆ. ಅವರ ಫೋಟೋವೊಂದನ್ನು ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂಗ್ಲೆಂಡಿಗೆ ಕ್ರಿಕೆಟ್ ಗಾಗಿ ಹೋಗಿದ್ಡಾರಾ ಎಂದು ನೀವು ಊಹಿಸಬಹುದು. ಆದರೆ ಅರ್ಜುನ್ ತೆಂಡುಲ್ಕರ್ ಹಲವು ಬಾರಿ ಇಂಗ್ಲೆಂಡ್ ಗೆ ಹೋಗುತ್ತಾರೆ. ಈ ಸಮಯದಲ್ಲಿ ತಪಪ್ದೇ ಡೇನಿಯಲ್ ಅವರನ್ನು ಭೇಟಿ ಮಾಡುತ್ತಾರೆ. ಅರ್ಜುನ್ ಅವರನ್ನು ಭೇಟಿ ಮಾಡಿದ್ದ ಡೆನಿಯಲ್, ನಿಮ್ಮನ್ನು ಭೇಟಿಯಾಗಿ ಖುಷಿಯಾಯಿತು ಎಂದು ಬರೆದುಕೊಂಡಿದ್ದಾರೆ.

ಡೇನಿಯಲ್ ವ್ಯಾಟ್ ಹಾಗೂ ಅರ್ಜುನ್ ತೆಂಡೂಲ್ಕರ್ ಇಬ್ಬರೂ ಮೊದಲಿಂದ ಸ್ನೇಹಿತರು. ಇಂಗ್ಲೆಂಡ್ ಗೆ ಹೋದರೆ ಅರ್ಜುನ್ ಡೇನಿಯಲ್ ಅವರನ್ನು ಭೇಟಿಯಾಗದೇ ಇರುವುದೇ ಇಲ್ಲ. ಇವರಿಬ್ಬರು ಈ ಬಾರಿಯೂ ಲಂಡನ್ ನಲ್ಲಿ ಭೇಟಿಯಾಗಿ ರಾತ್ರಿ ಊಟವನ್ನು ಜೊತೆಯಲ್ಲಿಯೇ ಮಾಡಿದ್ದಾರೆ. ಈ ಸಂದರ್ಭದ ಫೋಟೋವನ್ನು ಡೇನಿಯಲ್ ವ್ಯಾಟ್ ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಅವರನ್ನು 2022ರ ಐಪಿಎಲ್ ನಲ್ಲಿ ಇಂಡಿಯನ್ ಮುಂಬೈ ಪ್ರಾಂಚೈಸಿ 30 ಲಕ್ಷಕ್ಕೆ ಖರೀದಿಸಿತ್ತು. ಆದರೆ ದುರದೃಷ್ಟವಶಾತ್ ಅವರಿಗೆ ಐಪಿಎಲ್ ನಲ್ಲಿ ಒಂದೇ ಒಂದು ಮ್ಯಾಚ್ ನಲ್ಲಿಯೂ ಆಡುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಅರ್ಜುನ್ ಅವರ ಕ್ರಿಕೆಟ್ ಭವಿಷ್ಯದ ಅದೃಷ್ಟದ ಪರೀಕ್ಷೆ ಇನ್ನೂ ಆಗಿಲ್ಲ! ಸಚಿನ್ ತೆಂಡೂಲ್ಕರ್ ಅವರು ತಮ್ಮ 16ನೆ ವಯಸ್ಸಿನಲ್ಲಿಯೆ ಬ್ಯಾಟ್ ಹಿಡಿದು ಕ್ರಿಕೆಟ್ ಕ್ರೀಡಾಂಗಣಕ್ಕೆ ಇಳಿದವರು. ಅವರಿಗೆ ತಮ್ಮ ಮಗನನ್ನು ಉತ್ತಮ ಕ್ರಿಕೆಟಿಗನನ್ನಾಗಿ ಮಾಡುವ ಆಸೆ.

ಆದರೆ 22 ವರ್ಷದ ಅರ್ಜುನ್ ಅವರಿಗೆ ಇನ್ನು ಕ್ರಿಕೆಟ್ ಕೈ ಹಿಡಿದಿಲ್ಲ. ಆದರೆ ಅರ್ಜುನ್ ಪ್ರಯತ್ನವನ್ನಂತೂ ಬಿಟ್ಟಿಲ್ಲ. ಇನ್ನಷ್ಟು ಅಭ್ಯಾಸದಲ್ಲಿ ನಿರತರಾಗಿದ್ಡಾರೆ. ಸಚಿನ್ ತೆಂಡೂಲ್ಕರ್ ಹಲವರಿಗೆ ಕ್ರಿಕೆಟ್ ಗುರು. ದೇಶದ ಆಟಗಾರರಿಗೆ ಮಾತ್ರವಲ್ಲ, ವಿದೇಶಿ ಆಟಗಾರರೂ ಕೂಡ ಸಚಿನ್ ಅವರನ್ನು ಬಹುವಾಗಿ ಗೌರವಿಸುತ್ತಾರೆ. ಸಚಿನ್ ಇದುವರೆಗೆ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇಂದು ಕ್ರೆಕೆಟ್ ನಿಂದ ನಿವೃತ್ತಿ ಪಡೆದಿದ್ದರೂ ಕೂಡ, ಸಚಿನ್ ಕ್ರಿಕೆಟ್ ಕೊಚ್ ಆಗಿಯೂ ಹಾಗೂ ಐಪಿಎಲ್ ನ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಚಿನ್ ಅವರನ್ನ ನೋಡಿ ಇಂದಿಗೂ ಹಲವರು ಕ್ರಿಕೆಟ್ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ. ಅಂತಹ್ವರಿಗೆಲ್ಲಾ ಸಚಿನ್ ತೆಂಡೂಲ್ಕರ್ ಅವರೇ ಸ್ಪೂರ್ತಿ ಅವರೇ ಗುರು!

Leave a Comment