ಸೀರೆಗಳಿಗೆ ಕುಚ್ಚು ಹಾಕುವ ಸುಲಭ ವಿಧಾನ

ಕ್ರಿಸ್ಟಲ್ ಮಣಿ ಬಳಸಿಕೊಂಡು ಸಾರಿಗೆ ಕುಚ್ಚು ಹಾಕುವುದು ಹೇಗೆ ಅನ್ನೋದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸೀರೆಗೆ ಕುಚ್ಚು ಹಾಕುವ ಮೊದಲು ಸೀರೆಯ ಬಣ್ಣವನ್ನು ನೋಡಿಕೊಂಡು ಸೀರೆಯ ಬಣ್ಣಕ್ಕೆ ಹೊಂದಿಕೊಳ್ಳುವಂತಹ ಸಿಲ್ಕ್ ತ್ರೆಡ್ ತೆಗೆದುಕೊಂಡು ಕುಚ್ಚು ಹಾಕಬೇಕು. ಸೀರೆಗೆ ಮ್ಯಾಚ್ ಆಗುವಂತಹ ಎರಡು ಬಣ್ಣದ ಸಿಲ್ಕ್ ತ್ರೆಡ್ ತೆಗೆದುಕೊಳ್ಳಬೇಕು. ಕುಚ್ಚು ಹಾಕಲು ಮೊದಲು ದಾರವನ್ನು ತಯಾರಿ ಮಾಡಿಕೊಳ್ಳಬೇಕು. ಯಾವುದೋ ಒಂದು ನೋಟ್ಬುಕ್ ಅಥವಾ ರಟ್ಟಿಗೆ ದಾರ ತೆಗೆದುಕೊಂಡು 75 ಎಳೆಗಳನ್ನು ಸುತ್ತಿಕೊಂಡು ತಯಾರಿಸಿಕೊಳ್ಳಬೇಕು. 75 ಏಳೆಗಳ ದಾರವನ್ನು ದೊಡ್ಡ ಸೂಜಿಗೆ ಸುರಿದುಕೊಂಡು ಅದನ್ನು ಸೀರೆಯ ಅಂಚಿಗೆ ನಮ್ಮ ಒಂದು ಹೆಬ್ಬೆರಳಿನಶ್ಟು ಜಾಗವನ್ನು ಬಿಟ್ಟುಕೊಂಡು ಸೂಜಿಯ ಸಹಾಯದಿಂದ ಸೀರೆಗೆ ಹಾಕಿ ಮಧ್ಯದಲ್ಲಿ ತಂದುಕೊಂಡು ನಂತರ ಇನ್ನೊಂದು ಬಣ್ಣದ ಸಿಲ್ಕ್ ತ್ರೆಡ್ ತೆಗೆದುಕೊಂಡು ಮೊದಲು ಒಂದೆರಡು ಸುತ್ತು ಸುತ್ತಿಕೊಂಡು ಬುಡದಲ್ಲಿ ಒಂದು ಗಂಟನ್ನು ಹಾಕಿಕೊಳ್ಳಬೇಕು. ಯಾವುದೇ ಎಳೆಗಳು ಬಿಚ್ಚಿ ಹೊರಗೆ ಬಾರದಂತೆ ಸರಿಯಾಗಿ ಸುತ್ತಿಕೊಂಡು 3 ಗಂಟನ್ನು ಹಾಕಬೇಕು.

ನಂತರ ಗಂಟು ಹಾಕಿ ಹೆಚ್ಚಿದ್ದ ದಾರವನ್ನು ಕಟ್ ಮಾಡಿಕೊಳ್ಳಬೇಕು. ಹಾಗೆಯೇ ಕೆಳಗೆ ಹೆಚ್ಚುಳಿದಂತಹ ದಾರವನ್ನು ಕಟ್ ಮಾಡಿ ಸೂಜಿಯನ್ನು ಬೇರ್ಪಡಿಸಿಕೊಂಡು ಎಲ್ಲಾ ದಾರಗಳನ್ನು ಲೆವೆಲ್ ಮಾಡಿಕೊಳ್ಳಬೇಕು. ನಂತರ ಬೇಕಾದ ಬಣ್ಣದ ಕ್ರಿಸ್ಟಲ್ ಮಣಿ ತೆಗೆದುಕೊಂಡು ದಾರದ ಸರಿಯಾಗಿ ಮಧ್ಯಭಾಗವನ್ನು ತೆಗೆದುಕೊಂಡು ಎರಡು ಎಳೆಗಳಲ್ಲಿ ಕ್ರಿಸ್ಟಲ್ ಮಣಿಯನ್ನು ಹಾಕಿ ಮೇಲಕ್ಕೆ ಸೇರಿಸಿ ಸರಿಯಾಗಿ ಕ್ರಿಸ್ಟಲ್ ಮಣಿ ಎಲ್ಲಿಯೂ ಹೊರಗೆ ಕಾಣದಂತೆ ದಾರಗಳಿಂದ ಸರಿಯಾಗಿ ಮುಚ್ಚಿಕೊಳ್ಳಬೇಕು. ಹಾಗೆಯೇ ನಂತರ ಮೇಲೆ ಕಟ್ಟಿಕೊಂಡ ಹಾಗೆಯೇ ಚಾರಿ ಥ್ರೆಡ್ ತೆಗೆದುಕೊಂಡು ಬಿಗಿಯಾಗಿ ಕ್ರಿಸ್ಟಲ್ ಮಣಿ ಹೊರಗೆ ಬಾರದಂತೆ ಮತ್ತೆ ಮೂರು ಸುತ್ತು ಹಾಕಿಕೊಂಡು ಗಂಟು ಕಟ್ಟಬೇಕು. ನಂತರ ಕುಚ್ಚು ಬಹಳ ಉದ್ದ ಬೇಕಿದ್ದರೆ ಹಾಗೆ ಬಿಟ್ಟು ಕೊಳ್ಳಬಹುದು ಇಲ್ಲವಾದರೆ ಎಲ್ಲವನ್ನು ಒಂದೇ ಅಳತೆಗೆ ಕಟ್ ಮಾಡಿಕೊಳ್ಳಲೂಬಹುದು. ಹೆಚ್ಚಾಗಿ ಸಾರಿ ಕುಚ್ಚು ಚಿಕ್ಕದಾಗಿದ್ದರೆ ಬಹಳಷ್ಟು ಚೆನ್ನಾಗಿ ಕಾಣುವುದು. ಇನ್ನೂ ಒಂದು ಗಮನಿಸಬೇಕಾದ ಅಂಶವೆಂದರೆ ಸೀರೆಗೆ ಪೂರ್ತಿಯಾಗಿ ಕುಚ್ಚು ಹಾಕಿ ಮುಗಿಸಲು ಒಂದೇ ಬಣ್ಣದ ಥ್ರೆಡ್ ಬಳಸಿ ಕುಚ್ಚು ಹಾಕುವುದಾದರೆ ಇಡಿ ಒಂದು ತ್ರೆಡ್ ಬೇಕಾಗುವುದು. ಅಥವಾ ಎರಡು ಬಣ್ಣದ ತ್ರೆಡ್ ಬಳಸುವುದಾದರೆ ಎರಡು ಬಣ್ಣದ ಅರ್ಧಭಾಗ ಥ್ರೆಡ್ ಬೇಕಾಗುವುದು. ಈ ರೀತಿಯಾಗಿ ನಾವು ನಮ್ಮ ಸೀರೆಗೆ ಸುಲಭವಾಗಿ ಕುಚ್ಚು ಕಟ್ಟಿಕೊಳ್ಳಬಹುದು

Leave a Comment