ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹೊಸ ಹೊಸ ನಿರ್ದೇಶಕರಿಗೆ, ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶಗಳೂ ಸಿಗುತ್ತಿವೆ. ಅದರಲ್ಲೂ ಕಥೆಯನ್ನ ಒಳಗೊಂಡಿರುವ ಉತ್ತಮ ಚಿತ್ರಗಳನ್ನ ಜನರೂ ಕೂಡ ಮೆಚ್ಚಿಕೊಳ್ಳುತ್ತಿದ್ದಾರೆ. ಹಾಗಾಗಿ ರಿಷಭ್ ಶೆಟ್ಟಿ ಯಂಥ ಪ್ರತಿಭಾವಂತ ನಟ, ಹಾಗೂ ನಿರ್ಡೇಶಕರು ಇಂದು ಹೆಚ್ಚು ಹೆಸರು ಗಳಿಸುತ್ತಿದ್ದಾರೆ. ಹೌದು ಸ್ಯಾಂದಲ್ ವುಡ್ ನ್ನ ಒಂದು ಹಂತಕ್ಕೆ ಮೇಲಕ್ಕೆ ಕೊಂಡೊಯ್ಯುವುದರಲ್ಲಿ ರಿಷಭ್ ಶೆಟ್ಟಿಯವರ ಕೊಡುಗೆಯೋ ಇದೆ.
ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಹಾಗೂ ನಟ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಿರ್ದೇಶಕ. ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಮತ್ತಷ್ಟು ಸಿನಿಮಾಗಳನ್ನು ಸಿನಿ ಪ್ರಿಯರ ಎದುರು ತರಲಿದ್ದಾರೆ. ಇತ್ತೀಚಿಗಿನ ಅವರ ನಟನೆಯ ಗರುಡ ಗಮನ ವೃಷಭ ವಾಹನ ಸೂಪರ್ ಹಿಟ್ ಆಗಿತ್ತು. ಇನ್ನು ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿಯೂ ಮೆಚ್ಚುಗೆ ಗಳಿಸಿಕೊಂಡಿದ್ದಾರೆ ರಿಷಭ್ ಶೆಟ್ಟಿ. ರಿಷಬ್ ಶೆಟ್ಟಿಯವರ ಬತ್ತಳಿಕೆಯಲ್ಲಿ ಬೆಲ್ ಬಾಟಂ 2, ಮಹಾನೀಯರೆ ಮಹಿಳೆಯರೇ, ಆಂಟಗೋನಿ ಶೆಟ್ಟಿ, ಕಾಂತರ ಸಿನಿಮಾಗಳು ಬಾಕಿ ಇವೆ.
ಹೊಸ ಕಾರನ್ನು ಖರೀದಿಸಿ ಕೇಕ್ ಕಟ್ ಮಾಡಿರುವ ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಜೊತೆಗಿನ ಫೋಟೋವನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರ ಜೊತೆ ಇವರ ಇಬ್ಬರು ಮಕ್ಕಳೂ ಇದ್ದಾರೆ. ರಿಶಭ್ ಶೆಟ್ಟಿಯವರ ಮಗನ ಹೆಸರು ರಣ್ವಿತ್ ಶೆಟ್ಟಿ. ಮಗಳ ಹೆಸರನ್ನು ಇನ್ನೂ ದಂಪತಿಗಳು ಬಿಟ್ಟುಕೊಟ್ಟಿಲ್ಲ. ರಿಶಭ್ ಶೆಟ್ತಿಯವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಸಿನಿಮಾ ರಂಗದಲ್ಲಿದ್ದು, ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿಯವರು ಪ್ರಗತಿ ಶೆಟ್ಟಿಯವರನ್ನ 2017ರಲ್ಲಿ ವಿವಾಹವಾದರು.
ಯಾಕೆಂದರೆ ನಟನಾಗಿ ಹಾಗೂ ನಿರ್ದೇಶಕನಾಗಿ ರಿಷಭ್ ಶೆಟ್ಟಿ ಕರುನಾಡಿನಲ್ಲಿ ಗುರುತಿಸಿಕೊಂಡಿದ್ದಾರೆ. ಇಂದು ಲಕ್ಷಾಂತರ ಅಭಿಮಾನಿಗಳನ್ನ ರಿಷಭ್ ಶೆಟ್ಟಿ ಹೊಂದಿದ್ದಾರೆ ಎಂಅದ್ರೆ ಅದಕ್ಕೆ ಕಾರಣ ಅವರಲ್ಲಿರುವ ಅಗಾಧವದ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕರಾವಳಿಯ ಈ ಪ್ರತಿಭೆಗೆ ಚಂದನವನದಲ್ಲಿ ಇಂದು ಬಹಳ ಬೇಡಿಕೆಯಿದೆ. ಸದ್ಯ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಹೌದು ರಿಷಭ್ ಶೆಟ್ಟಿ ಇತ್ತೀಚಿಗೆ ಐಷಾರಾಮಿ ಕಾರೊಂದನ್ನು ಖರೀದಿಸಿ ಬೀಗುತ್ತಿದ್ದಾರೆ. ಒಂದು ಕೋಟಿ ಹದಿನೈದು ಲಕ್ಷ ರೂಪಾಯಿ ಮೌಲ್ಯದ ದುಬಾರಿ ಬೆಲೆಯ ಆಡಿ ಕಾರನ್ನು ಖರೀದಿಸಿರುವ ಸಂಭ್ರಮದಲ್ಲಿದ್ದಾರೆ ರಿಶಬ್ ಮತ್ತು ಪತ್ನಿ ಪ್ರಗತಿ. ಸೆಲಿಬ್ರೆಟಿಗಳೇ ಹೆಚ್ಚಾಗಿ ಖರೀದಿಸುವ ಆಡಿ ಕ್ಯೂ7 ಕಾರು ರಿಷಭ್ ಶೆಟ್ಟಿ ಮನೆ ಸೇರಿದೆ. ಸದ್ಯಕ್ಕೆ ರಿಷಬ್ ಶೆಟ್ಟಿ ಯವರು ಕನ್ನಡದ ಟಾಪ್ ಡೈರೆಕ್ಟರ್ ಪಟ್ಟಿಯಲ್ಲಿ ಸ್ಥಾನವನ್ನು ಗಳಿಸಿದ್ದಾರೆ. ತಮ್ಮದೇ ಆದ ಪ್ರೊಡಕ್ಷನ್ ಸಂಸ್ಥೆ ಯನ್ನು ಪೂರ್ಣ ಕಟ್ಟಿಕೊಂಡಿರುವ ರಿಷಭ್ ಅವರ ಸಿನಿಮಾಗಳಿಂದ ಕೋಟಿ ಕೋಟಿ ಹಣ ಮಾಡಿರುವುದಕ್ಕೆ ಈ ಆಡಿ ಕ್ಯೂ7 ಕಾರು ಪ್ರತ್ಯಕ್ಷ ಸಾಕ್ಷಿ.