ನಮ್ಮ ಕನ್ನಡದ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಯಾರಿಗೆ ತಾನೆ ಗೊತ್ತಿಲ್ಲ. ಕರ್ನಾಟಕ ಮೂಲದ ಹುಡುಗಿ ಇದೀಗ ಬಾಲಿವುಡ್ ನ ಬಹುಬೇಡಿಕೆಯ ನಟಿ. ದೀಪಿಕಾ ಪಡುಕೋಣೆ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ಎನ್ನುವ ವಿಷಯ ಹಲವರಿಗೆ ತಿಳಿದಿರುವ ವಿಷಯವೆ. ಕರ್ನಾಟಕದಿಂದ ಬಾಲಿವುಡ್ ಗೆ ಕಾಲಿಟ್ಟ ಎಲ್ಲಾ ನಟಿಯರು ಕೂಡ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವ ದಾಖಲೆಗಳಿವೆ ಅದರಲ್ಲಿ ದೀಪಿಕಾ ಪಡುಕೋಣೆ ಅವರ ಹೆಸರು ಕೂಡ ಒಂದು.
ದೀಪಿಕಾ ಪಡುಕೋಣೆ ಅವರು ನಟಿಸಿದ ಬಹುತೇಕ ಎಲ್ಲಾ ಹಿಂದಿ ಚಿತ್ರಗಳು ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿವೆ ಚೆನ್ನೈ ಎಕ್ಸ್ ಪ್ರೆಸ್, ಬಾಜಿರಾವ್ ಮಸ್ತಾನಿ, ಪದ್ಮಾವತ್ ಹೀಗೆ ಹಲವಾರು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿವೆ. ದೀಪಿಕಾ ಪಡುಕೋಣೆ ಅವರ ಕಾಲ್ಗುಣ ಚೆನ್ನಾಗಿದೆ ಅಂತಲೇ ಹೇಳಬೇಕು ಇವರು ಮಾಡಿರುವ ಎಲ್ಲಾ ಸಿನಿಮಾಗಳು ಕೂಡ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿವೆ. ಯಶಸ್ಸು ಸಿಕ್ಕಿದ ಹಾಗೆ ದೀಪಿಕಾ ಪಡುಕೋಣೆ ಜೀವನವೇ ಬದಲಾಗಿದೆ ಅಂತನೇ ಹೇಳಬಹುದು.
ದೀಪಿಕಾ ಪಡುಕೋಣೆ ಈಗ ಎಷ್ಟರ ಮಟ್ಟಕ್ಕೆ ಬೆಳೆದಿದ್ದಾಳೆ ಎಂದರೆ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮೊದಲ ನಟಿ ಇವರೇ. ನೀವು ನಿಜಕ್ಕೂ ನಂಬಲ್ಲ ದೀಪಿಕಾ ಪಡುಕೋಣೆ ಅವರು ಒಂದೇ ಒಂದು ಸಿನಿಮಾಗೆ ಬರೋಬ್ಬರಿ ಇಪ್ಪತ್ತೆರಡು ಕೋಟಿ ರುಪಾಯಿಗಳ ಸಂಭಾವನೆ ಪಡೆಯುತ್ತಾರೆ. ದೀಪಿಕಾ ಪಡುಕೋಣೆ ಅವರು 2018 ರಲ್ಲಿ ರಣ್ವೀರ್ ಸಿಂಗ್ ಅವರನ್ನು ಮದುವೆಯಾಗಿದ್ದಾರೆ . ಮದುವೆಯಾದರೂ ಕೂಡ ದೀಪಿಕಾ ಪಡುಕೋಣೆ ಅವರಿಗೆ ಸಿನಿಮಾಗಳ ಅವಕಾಶಗಳು ಕಡಿಮೆಯಾಗಿಲ್ಲ.
ರಣ್ವೀರ್ ಸಿಂಗ್ ಅವರು ಕೂಡ ಬಾಲಿವುಡ್ ನ ಪ್ರಖ್ಯಾತ ನಟ. ರಣ್ವೀರ್ ಸಿಂಗ್ ಕೂಡ ಒಂದು ಸಿನಿಮಾಗೆ ಇಪ್ಪತ್ತು ರಿಂದ ಮೂವತ್ತು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಒಟ್ಟಾರೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ವರ್ಷಕ್ಕೆ ಏನಿಲ್ಲವೆಂದರೂ ಐವತ್ತರಿಂದ ನೂರು ಕೋಟಿ ರೂಪಾಯಿಗಳ ಆದಾಯ ಪಡೆಯುತ್ತಾರೆ. ಇಷ್ಟೊಂದು ಹಣ ಸಂಪಾದನೆ ಮಾಡುವ ಈ ದಂಪತಿಗಳು ಇದೀಗ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಕೋಟ್ಯಾಂತರ ಬೆಲೆ ಬಾಳುವ ಪ್ಲಾಟ್ ಒಂದನ್ನು ಖರೀದಿ ಮಾಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ರಣಬೀರ್ ಮತ್ತು ದೀಪಿಕಾ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ.
ಇನ್ನೊಂದು ವಿಶೇಷತೆ ಏನೆಂದರೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಮನೆ ಇರುವ ಜಾಗದಲ್ಲೇ ದೀಪಿಕಾ ಮತ್ತು ರಣ್ವೀರ್ ಸಿಂಗ್ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಮುಂಬೈನ ಬಾಂದ್ರಾ ತುಂಬಾ ದುಬಾರಿಯೂತ ಸಿಟಿ ಇಲ್ಲಿ ಮನೆಯನ್ನು ಖರೀದಿ ಮಾಡಬೇಕೆಂದರೆ ಸಾಮಾನ್ಯ ಜನರ ಕೈಯಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಸಿಗುವ ಮನೆಗಳ ಬೆಲೆ ನೂರು ಕೋಟಿಗೂ ಅಧಿಕ ಇರುತ್ತೆ. ಇದೀಗ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಖರೀದಿ ಮಾಡಿರುವ ಮನೆ ನೂರ ಇಪ್ಪತ್ತು ಕೋಟಿ ರುಪಾಯಿಗಳು. ರಣವೀರ್ ಮತ್ತು ದೀಪಿಕಾ ಖರೀದಿ ಮಾಡಿರುವ ಮನೆಯ ಕಾರ್ಪೆಟ್ ಏರಿಯಾದ ವಿಸ್ತೀರ್ಣ 11266 ಸ್ಕ್ವೇರ್ ಫೀಟ್ ಇದೆ. ಮತ್ತು ಮನೆಯ ಟೆರೇಸ್ 1300 sq feet ಇದೆ.