ಇತ್ತೀಚಿಗೆ ಇದೊಂದು ನ್ಯೂಸ್ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನ ಅಲ್ಲಾಡಿಸುತ್ತಿದೆ. ಎಲ್ಲರ ಬಾಯಲ್ಲೂ ಇದೇ ಮಾತು. ಪವಿತ್ರ ಲೋಕೇಶ್ ಹಾಗೂ ನರೇಶ್ ಬಾಬು ಅವರ ಸಂಬಂಧದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಇದು ಯಾವುದು ಕೇವಲ ಗಾಸಿಪ್ ಅಲ್ಲ, ನನ್ನ ಪತಿಯ ಜೊತೆ ಪವಿತ್ರ ಲೋಕೇಶ್ ಸಂಬಂಧ ಇಟ್ಟುಕೊಂಡಿದ್ದಾರೆ ಅಂತ ನರೇಶ್ ಬಾಬು ಅವರ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು.
ಇಷ್ಟು ದಿನ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹರಿದಾಡುತ್ತಿದ್ದ ಸುದ್ದಿ, ಇದೀಗ ಅಧಿಕೃತವಾಗಿ ಅವರ ಬಾಯಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ವಿಷಯಗಳು ಹೊರಬಂದಿವೆ. ಕನ್ನಡ ಮಾಧ್ಯಮಗಳಲ್ಲಿ ಕುಳಿತು ಒಂದು ಕಡೆ ಪವಿತ್ರ ಲೋಕೇಶ್ ಇನ್ನೊಂದು ಕಡೆ ನರೇಶ್ ಹಾಗೂ ಮತ್ತೊಂದು ಕಡೆ ರಮ್ಯಾ ರಘುಪತಿ ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ರಮ್ಯಾ ರಘುಪತಿ ತನ್ನ ಮೇಲೆ ಮಾಡುತ್ತಿರುವ ಆರೋಪ ಸುಳ್ಳು, ನಾನು ಹಾಗೂ ನರೇಶ್ ಇಬ್ಬರು ಒಳ್ಳೆಯ ಸ್ನೇಹಿತರು. ಅವರ ಗಂಡ ಹೆಂಡತಿಯ ನಡುವೆ ಏನಾದರೂ ಸಮಸ್ಯೆ ಇದ್ದರೆ ಅವರು ಬಗೆಹರಿಸಿಕೊಳ್ಳಬೇಕು, ಅದರಲ್ಲಿ ನಡುವೆ ನನ್ನನ್ನು ತರಬಾರದು ಅಂತ ಪವಿತ್ರ ಲೋಕೇಶ್ ಈ ಪ್ರಕರಣದಿಂದ ತಪ್ಪಿಸಿಕೊಂಡಿದ್ದರು.
ಇದೇ ರೀತಿ ಮೀಡಿಯಮ್ ಮುಂದೆ ಮಾತನಾಡಿದ ನರೇಶ್ ಬಾಬು ಕೂಡ ತಾನು ಪವಿತ್ರ ಉತ್ತಮ ಫ್ರೆಂಡ್ಸ್, ನನ್ನ ಮಾನಸಿಕ ಸ್ಥಿತಿ ಸೀಮಿತದಲ್ಲಿ ಇಲ್ಲದೆ ಇರುವಾಗ ಪವಿತ್ರ ನನ್ನ ಜೊತೆಗಿದ್ದು ನನ್ನನ್ನ ಗೈಡ್ ಮಾಡಿದ್ದಾರೆ, ಹಾಗೂ ನನ್ನ ಪತ್ನಿಯಾಗಿದ್ದ ರಮ್ಯಾ ನನ್ನ ಜೊತೆಗೆ ಇಲ್ಲ ಅವಳಿಗೆ ವಿಚ್ಛೇದನದ ನೋಟೀಸ್ ಕೊಟ್ಟಿದ್ದೇನೆ ಎಂದು ಹೇಳಿದ್ದರು. ಆದರೆ ರಮ್ಯಾ ರಘುಪತಿ ಮಾತ್ರ ತಾನು ಯಾವುದೇ ಕಾರಣಕ್ಕೂ ನರೇಶ್ ಬಾಬು ಅವರಿಗೆ ವಿಚ್ಛೇದನವನ್ನು ಕೊಡೋದಿಲ್ಲ ಅಂತ ಪಟ್ಟು ಹಿಡಿದು ಕುಳಿತಿದ್ದಾರೆ.
ಆದರೆ ಇದೀಗ ಈ ಎಲ್ಲಾ ಪ್ರಕರಣಕ್ಕೆ ಒಂದು ಟ್ವಿಸ್ಟ್ ಸಿಕ್ಕಿದೆ. ನರೇಶ್ ಬಾಬು ಹಾಗೂ ಪವಿತ್ರ ಸ್ನೇಹಿತರು ಎಂದೇ ಓಡಾಡಿಕೊಂಡಿದ್ದು, ಇದೀಗ ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ರಮ್ಯಾ ರಘುಪತಿ ಅವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅವಶ್ಯಕತೆ ಒಳಗಾದ ರಮ್ಯಾ ರಘುಪತಿ, ನನ್ನ ಗಂಡನ ಜೊತೆ ಇರಲು ಆಕೆ ಯಾರು ಇದು ಅಕ್ರಮ ಸಂಬಂಧ ಕರೆಯಿರಿ ಅವಳನ್ನ ಆಚೆ ಎಂದು ಹೋಟೆಲ್ ರೂಮನ ಹೊರಗಡೆ ನಿಂತು ರಂಪಾಟ ಮಾಡಿದ್ದರು. ಈ ಸಮಯದಲ್ಲಿ ಪೊಲೀಸರು ಹಾಗೂ ಮೀಡಿಯಾದವರು ಸ್ಥಳದಲ್ಲಿದ್ದರು.
ಕೊನೆಗೂ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಬಾಬು ರೂಮಿನಿಂದ ಹೊರ ಬಂದಿದ್ದಾರೆ. ನರೇಶ್ ಪೊಲೀಸ್ ಪ್ರೊಟೆಕ್ಷನ್ ಇಟ್ಟುಕೊಂಡು ರೂಮಿನಿಂದ ಹೊರ ನಡೆದದ್ದು ಅಲ್ಲದೆ, ರಮ್ಯಾ ರಘುಪತಿ ಅವರಿಗೆ ಕ್ಯಾರೆ ಎನ್ನದೆ ವಿಡಿಯೋ ಎದುರೇ ನೃತ್ಯ ಮಾಡುತ್ತಾ ಮೈಸೂರಿನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಮೀಡಿಯಾದ ಮುಂದೆ ಮಾತನಾಡಿದ ರಮ್ಯಾ ರಘುಪತಿ, ಇವರಿಬ್ಬರೂ ಸ್ನೇಹಿತರಾಗಿದ್ದರೆ ಮೈಸೂರಿನಲ್ಲಿ ಪವಿತ್ರ ಲೋಕೇಶ್ ಅವರ ಮನೆ ಇದೆಯಂತೆ ಅಲ್ಲಿಯೇ ಅವರ ಪತಿಯ ಎದುರೇ ಕುಳಿತು ಮಾತನಾಡುತ್ತಾ ಅಲ್ಲಿಯೇ ಉಳಿದುಕೊಳ್ಳಬಹುದಿತ್ತು. ಹೀಗೆ ಕದ್ದು ಮುಚ್ಚಿ ಒಂದು ರೂಮಿನಲ್ಲಿ ಇಬ್ಬರು ಇರುತ್ತಾರೆ ಎಂದರೆ ಇದು ಸ್ನೇಹ ಅಲ್ಲ. ನರೇಶ್ ಹಾಗೂ ಪವಿತ್ರ ನನ್ನ ಬಳಿ ಮಾತನಾಡದೆ ರೂಮಿನಿಂದ ಹೊರ ನಡೆದಿದ್ದೆ ನನಗೆ ದೊಡ್ಡ ಗೆಲುವು.
ಯಾಕಂದ್ರೆ ಇಬ್ಬರು ನಿಂತು ಮಾತನಾಡಿದರೆ ಸತ್ಯ ಎಂದು ಹೇಳಬಹುದಿತ್ತು ಆದರೆ ಕಳ್ಳರ ಹಾಗೆ ಓಡಿದ್ದನ್ನು ನೋಡಿದರೆ ಅವರಲ್ಲಿರುವ ಗಿಲ್ಟ್ ಗೊತ್ತಾಗುತ್ತೆ. ನಾನು ಕಾನೂನು ಪ್ರಕಾರವೇ ಹೋಗುತ್ತೇನೆ ಎಂದು ರಮ್ಯಾ ರಘುಪತಿ ತಿಳಿಸಿದ್ದಾರೆ. ಹೋಟೆಲ್ ನಲ್ಲಿ ನರೇಶ್ ಬಾಬು ಹಾಗೂ ರಮ್ಯಾ ರಘುಪತಿ ಅವರ ದಾಂಪತ್ಯದಲ್ಲಿ ಹುಳಿ ಹಿಂಡುವ ಕೆಲಸವನ್ನು ಪವಿತ್ರ ಲೋಕೇಶ್ ಮಾಡುತ್ತಿದ್ದಾರೆ ಎನ್ನುವುದು ಹಲವರ ಪ್ರಶ್ನೆ.