ಕಿರಿಕ್ ಪಾರ್ಟಿ ಸಿನಿಮಾದಿಂದ ಫೇಮಸ್ ಆದ ನಟ ರಕ್ಷಿತ್ ಶೆಟ್ಟಿ ಅವರು ಅದೆ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ನಂತರ ಅದು ಮುರಿದು ಬಿದ್ದ ವಿಷಯ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಅದಾದ ನಂತರ ಅವರ ಮದುವೆಯ ಬಗ್ಗೆ ಹಲವು ವಿಷಯ ವೈರಲ್ ಆಗುತ್ತಿದೆ. ಇದೀಗ ರಮ್ಯ ಅವರೊಂದಿಗೆ ಗಾಸಿಪ್ ಎದ್ದಿದೆ. ಅದಕ್ಕೆ ರಕ್ಷಿತ್ ಅವು ಏನು ಉತ್ತರ ಹೇಳಿದ್ದಾರೆ ನೋಡೋಣ.
ಸೋಶಿಯಲ್ ಮೀಡಿಯಾಗಳಲ್ಲಿ ಗಾಸಿಪ್ ಸುದ್ದಿಗಳಿಗೆ ಏನು ಕಡಿಮೆ ಇಲ್ಲ. ಕೆಲವು ಸುದ್ದಿ ನಿಜವಾದರೆ ಇನ್ನು ಕೆಲವು ಸುದ್ದಿಗಳಂತೂ ಸತ್ಯಕ್ಕೆ ದೂರವಾಗಿರುತ್ತದೆ. ಸಿನಿಮಾ ನಟ-ನಟಿಯರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವು ಸುದ್ದಿಗಳು ಹರಿದಾಡುತ್ತಿರುತ್ತದೆ. ಕೆಲವು ಸುದ್ದಿಗಳು ಅವರೆ ಹೇಳಿಕೊಂಡಿರುತ್ತಾರೆ, ಇನ್ನು ಕೆಲವು ಸುದ್ದಿಯಂತೂ ಅಭಿಮಾನಿಗಳು ಪ್ರೀತಿಯಿಂದಲೊ ಅಥವಾ ಅತಿಯಾದ ಅಭಿಮಾನದಿಂದಲೊ ಸುದ್ದಿಗಳನ್ನು ಹರಡಿಸುತ್ತಾರೆ. ಅಂತಹ ಸುದ್ದಿಗಳಲ್ಲಿ ನಮ್ಮ ರಕ್ಷಿತ್ ಶೆಟ್ಟಿ ಅವರು ಒಮ್ಮೆ ನಟಿಯರಲ್ಲಿ ನಿಮಗೆ ಕ್ರಶ್ ಯಾರು ಎಂದು ಕೇಳಿದಾಗ. ಅವರು ರಮ್ಯ ಎಂದು ಹೇಳಿದ್ದರು.
ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ರಕ್ಷಿತ್ ಅವರು ರಮ್ಯ ಅವರು ಭೇಟಿಯಾಗಿದ್ದರು, ಅವರಿಬ್ಬರು ಮದುವೆಯಾಗುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಈ ವಿಷಯದ ಬಗ್ಗೆ ನಟ ರಕ್ಷಿತ್ ಅವರನ್ನು ಕೇಳಿದಾಗ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯನ್ನು ಹರಿದಾಡಿಸುತ್ತಾರೆ. ಹಾಗೇನು ಇಲ್ಲ, ನಾನು ರಮ್ಯ ಅವರನ್ನು ಭೇಟಿ ಮಾಡಿಲ್ಲ, ಈಗಲೂ ಯಾರಾದರೂ ಸಿನಿಮಾ ನಟಿಯರಲ್ಲಿ ಯಾರು ಕ್ರಶ್ ಎಂದು ಕೇಳಿದರೆ ನಾನು ರಮ್ಯ ಎಂದೆ ಹೇಳುತ್ತೇನೆ. ಅದು ಬಿಟ್ಟು ಬೇರೇನೂ ಇಲ್ಲ. ರಮ್ಯ ಅವರು ಯಾವಾಗಲೂ ನನ್ನ ಕೆಲಸವನ್ನು ಹೊಗಳುತ್ತಾರೆ, ಬೆಂಬಲಿಸುತ್ತಾರೆ. ರಮ್ಯ ಹಾಗೂ ರಕ್ಷಿತ್ ಶೆಟ್ಟಿ ಒಂದೆ ಸಿನಿಮಾದಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆಯೂ ಕೆಲವರಲ್ಲಿ ಮೂಡಿದೆ. ಇದಕ್ಕೆ ಉತ್ತರವಾಗಿ ರಕ್ಷಿತ್ ಅವರು ತಮ್ಮ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸಲು ರಮ್ಯ ಅವರಿಗೆ ಕೇಳಿದಾಗ ಅವರು ಕಥೆ ಕೇಳಿದ ಮೇಲೆ ಅರ್ಥ ಆಗಲಿಲ್ಲ ಎಂದರು. ಉಳಿದವರು ಕಂಡಂತೆ ಸಿನಿಮಾ ನೋಡಿದ ಕೆಲವರಿಗೆ ಅದರ ಕಥೆ ಅಷ್ಟು ಸರಿಯಾಗಿ ಅರ್ಥ ಆಗಲಿಲ್ಲ ಎಂಬ ಮಾತು ಕೇಳಿಬಂದಿತ್ತು.
ಸದ್ಯದಲ್ಲಿ ರಮ್ಯ ಹಾಗೂ ರಕ್ಷಿತ್ ಶೆಟ್ಟಿ ಅವರು ಒಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸೂಚನೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಅಂತಹ ಅವಕಾಶ ಬಂದರೆ ರಮ್ಯ ಅವರೊಂದಿಗೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ರಕ್ಷಿತ್ ಶೆಟ್ಟಿ ಅವರು ಹೇಳಿಕೊಂಡರು. ರಕ್ಷಿತ್ ಶೆಟ್ಟಿ ನಟಿಸಿದ 777 ಚಾರ್ಲಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಬಗ್ಗೆ ರಮ್ಯ ಅವರಿಗೂ ನಿರೀಕ್ಷೆ ಇದೆ. ಚಾರ್ಲಿ ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದು ಸಿನಿಮಾ ಬಿಡುಗಡೆಯ ಕೆಲಸಗಳಲ್ಲಿ ರಕ್ಷಿತ್ ಅವರು ತೊಡಗಿದ್ದಾರೆ. ಚಾರ್ಲಿ ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೊಡೋಣ. ರಕ್ಷಿತ್ ಅವರ ಹೊಸ ಸಿನಿಮಾ ತೆರೆ ಮೇಲೆ ಬರಲಿ, ಯಶಸ್ಸನ್ನು ತಂದುಕೊಡಲಿ ಎಂದು ಆಶಿಸೋಣ.