ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಇಲ್ಲಿದೆ ನೋಡಿ ಸುಲಭ ಅವಕಾಶ. ಸಂಬಳ ಹಾಗೂ ಹೇಗೆ ಅರ್ಜಿ ಸಲ್ಲಿಸುವುದು ಎಲ್ಲ ಡೀಟೇಲ್ಸ್ ಇಲ್ಲಿದೆ ನೋಡಿ.

ರೈಲ್ವೆ ಇಲಾಖೆ ರೈಲ್ವೆ ಟಿಕೆಟ್ ಕಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಆಹ್ವಾನವನ್ನು ನೀಡಲಾಗಿದೆ. ಇಲ್ಲಿ 2,450 ಹುದ್ದೆಗಳು ಖಾಲಿ ಇದ್ದು ಕರ್ನಾಟಕದ ಯಾವುದೇ ವಿದ್ಯಾರ್ಥಿಗಳು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ರೈಲ್ವೆ ಇಲಾಖೆಯಲ್ಲಿ ಪ್ರಸ್ತುತ ಇರುವಂತಹ ಹುದ್ದೆಗಳು ಟಿಕೆಟ್ ಕಲೆಕ್ಟರ್, ಗೂಡ್ಸ್ ಗಾರ್ಡ್ ಹಾಗೂ ಜೂನಿಯರ್ ಕ್ಲರ್ಕ್ ಹಾಗೂ ಟೈಪಿಸ್ಟ್ ಹುದ್ದೆಗಳು. ಅರ್ಜಿಯನ್ನು ಆನ್ಲೈನ್ ನಲ್ಲಿಯೇ ಸಲ್ಲಿಸಬಹುದು ಹಾಗೂ ಹುಡುಗ ಹುಡುಗಿ ಯಾರು ಬೇಕಾದರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. rrbcdg.gov.in ವೆಬ್ಸೈಟ್ನಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ಈ ಕೆಲಸಗಳ ಸಂಬಳದ ಕುರಿತಂತೆ ಮಾತನಾಡುವುದಾದರೆ ಪ್ರತಿ ತಿಂಗಳಿಗೆ 21700 ಗಳಿಂದ ಪ್ರಾರಂಭವಾಗಿ 81,000 ವರೆಗೆ ಕೂಡ ವೇತನ ಇರುತ್ತದೆ ಹಾಗೂ ಪ್ರತಿ ತಿಂಗಳು ಹೆಚ್ಚಾಗುತ್ತದೆ. ಅರ್ಜಿ ಶುಲ್ಕದ ಬಗ್ಗೆ ಮಾತನಾಡುವುದಾದರೆ ಸಾಮಾನ್ಯ ಹಾಗೂ ಓಬಿಸಿ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ ಇರುತ್ತದೆ. ಎಸ್ಸಿ ಎಸ್ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ.250 ಗಳು ಅರ್ಜಿ ಶುಲ್ಕ ಇರುತ್ತದೆ.

ವಯಸ್ಸಿನ ಮಿತಿಯನ್ನು ನೋಡುವುದಾದರೆ 18 ವರ್ಷದಿಂದ 35 ವರ್ಷದ ಅಭ್ಯರ್ಥಿಗಳು ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಎಸ್ಸಿ ಎಸ್ಟಿ ಅಭ್ಯರ್ಥಿಗಳು 18 ರಿಂದ 40 ವರ್ಷ ವಯಸ್ಸಿನ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಹಾಕಬಹುದಾಗಿದೆ. ಇದಕ್ಕೆ ಫೋಟೋ ಹಾಗೂ ಸಹಿಯ ಜೊತೆಗೆ ಹತ್ತನೇ ತರಗತಿಯ ದೃಢೀಕರಣ ಪತ್ರ ಬೇಕಾಗುತ್ತದೆ. ನಿವಾಸ ಹಾಗೂ ಜಾತಿ ಪ್ರಮಾಣ ಪತ್ರ ಕೊಡಬೇಕಾಗುತ್ತದೆ. ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗಳನ್ನು ಕೂಡ ನೀಡಬೇಕಾಗುತ್ತದೆ.

ಆಯ್ಕೆ ಮಾಡುವಾಗ ಮೊದಲಿಗೆ ಆನ್ಲೈನ್ ಹಾಗೂ ನಂತರ ದೈಹಿಕ ಪರೀಕ್ಷೆ ಅದಾದ ನಂತರ ನೀವು ನೀಡಿರುವ ಡಾಕ್ಯುಮೆಂಟ್ಗಳ ಪರಿಶೀಲನೆ ಮಾಡಲಾಗುತ್ತದೆ. ಮೆರಿಟ್ ಆಧಾರದ ಮೇಲೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. 10 ಹಾಗೂ 12ನೇ ತರಗತಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಕೂಡ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಸೆಪ್ಟೆಂಬರ್ 2ನೇ ವಾರದಲ್ಲಿ ಅರ್ಜಿ ಸಲ್ಲಿಕೆ ಮಾಡಲು ದಿನಗಳು ಪ್ರಾರಂಭವಾಗುತ್ತವೆ ಹಾಗೂ ಅರ್ಜಿ ಸಲ್ಲಿಕೆಯನ್ನು ಮಾಡಲು ಕೊನೆಯ ದಿನಾಂಕ ಅಕ್ಟೋಬರ್ ತಿಂಗಳಾಗಿದೆ. ಹೀಗಾಗಿ ಈಗಲೇ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶಕ್ಕಾಗಿ ಸಂಪೂರ್ಣ ತಯಾರಿ ನಡೆಸಿ ಈ ಸರ್ಕಾರಿ ಕೆಲಸದಲ್ಲಿ ನೀವು ಕೂಡ ಭಾಗಿಯಾಗಿ.

Leave a Comment