ಶರೀರದ ಉಷ್ಣತೆಯನ್ನು ಶೀಘ್ರವಾಗಿ ಕಡಿಮೆ ಮಾಡಿಕೊಳ್ಳಲು ಅದ್ಭುತವಾದ ರಾಗಿ ಬಟರ್ ಮಿಲ್ಕ್ ಹೇಗೆ ಮಾಡೋದು ಅಂತ ನೋಡೋಣ. ಇದು ನಮ್ಮ ದೇಹವನ್ನು ತಂಪಾಗಿ ಇಡುವುದರ ಜೊತೆಗೆ ಕೆಟ್ಟ ಕೊಬ್ಬಿನ ಅಂಶವನ್ನು ತೆಗೆಯುವ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬ್ಲಡ್ ಶುಗರ್ ಲೆವೆಲ್ ಕೂಡ ಕಡಿಮೆ ಮಾಡುತ್ತದೆ. ಆ ಮೂಲಕ ಮಧುಮೇಹಿಗಳಿಗೆ ಕೂಡ ತುಂಬಾ ಒಳ್ಳೆಯದು. ಈಗ ಬೇಸಿಗೆಯಲ್ಲಿ ಪ್ರತಿದಿನ ಇದನ್ನ ಮಾಡಿಕೊಂಡು ಕುಡಿದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಹಾಗಿದ್ರೆ ಮತ್ತೆ ತಡ ಯಾಕೆ? ಈ ರಾಗಿ ಬಟರ್ ಮಿಲ್ಕ್ ಹೇಗೆ ಮಾಡೋದು ಅಂತ ನೋಡೋಣ ಬನ್ನಿ. ಮೊದಲು ಒಂದು ಪಾತ್ರೆಗೆ 2 ಚಮಚ ರಾಗಿ ಹಿಟ್ಟು ಹಾಕಿಕೊಂಡು ಅದಕ್ಕೆ 3 ಲೋಟ ನೀರು ಹಾಕಿ ಗಂಟು ಆಗದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಅದನ್ನು ಸ್ಟೋವ್ ಮೇಲೆ ಇಟ್ಟು ಸ್ವಲ್ಪ ಗಟ್ಟಿ ಆಗುವವರೆಗೂ ಕೈ ಆಡಿಸುತ್ತಾ ಕುದಿಸಬೇಕು. ನಂತರ ಸ್ಟೋವ್ ಬಂದ್ ಮಾಡಿ ತಣ್ಣಗಾಗಲು ಬಿಟ್ಟು , ಇನ್ನೊಂದು ಬೌಲ್ ನಲ್ಲಿ ಎರಡು ಚಮಚ ಮೊಸರು ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ಗಂಟು ಇಲ್ಲದಂತೆ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಅದನ್ನು ರಾಗಿಯ ಜೊತೆ ಸೇರಿಸಿ ಮತ್ತೆ ಮಿಕ್ಸ್ ಮಾಡಿ. (ಇದಕೆ ಮಜ್ಜಿಗೆ ಹಾಕದೆ ಬೆಲ್ಲ ಮತ್ತು ಹಾಲು ಕೂಡ ಸೇರಿಸಿ ಸ್ವೀಟ್ ರಾಗಿ ಮಾಲ್ಟ್ ಕೂಡ ಮಾಡಿಕೊಳ್ಳಬಹುದು. ) ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ರುಚಿಯಾದ ಹಾಗೂ ಆರೋಗ್ಯಕ್ಕೂ ಒಲ್ಲೆಯದಾದ ರಾಗಿ ಬಟರ್ ಮಿಲ್ಕ್ ರೆಡಿ.
ರಾಗಿಯಲ್ಲಿ ಪ್ರೊಟೀನ್ ಫೈಬರ್ ಎಲ್ಲ ಇರೋದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಐರನ್ ಅಂಶದಿಂದ ಹಿಮೋಗ್ಲೋಬಿನ್ ಕಡಿಮೆ ಇರುವವರಿಗೆ ತುಂಬಾ ಒಳ್ಳೆಯದು ಹಾಗೆ ಇದರಿಂದ ನಮ್ಮ ಜೀರ್ಣ ಕ್ರಿಯೆಗೆ ಸಹ ಸಹಾಯ ಆಗತ್ತೆ. ಇದನ್ನ ಮಕ್ಕಳಿಗೆ ಕೂಡ ಕೊಡಬಹುದು. ಆರೋಗ್ಯಕ್ಕೂ ತುಂಬಾ ಒಳ್ಳೆಯದು.