ನಮ್ಮ ಕನ್ನಡ ಚಿತ್ರರಂಗದ ಪವರಸ್ಟಾರ್ ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಾಯಕ ನಟರಾಗಿದ್ದರು. ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುವ ಪುನೀತ್ ಬಡವರ ಪಾಲಿಗೆ ಪರಮಾತ್ಮರಾಗಿದ್ದರು. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಹಿನ್ನಲೆ ಗಾಯಕರಾಗಿ ನಿರ್ಮಾಪಕರಾಗಿಯೂ ಪ್ರಸ್ತುತರಾಗಿದ್ದರು. ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
1975 ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಹಾಗೂ ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದ್ದು ಇವರ ಹಿರಿಯ ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕ ನಟರಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ರಾಜ್ ದಂಪತಿಗಳ ಕಿರಿಯ ಮಗುವಾಗಿದ್ದರಿಂದ ಬಹು ಅಕ್ಕರೆಯಲ್ಲಿ ಬೆಳೆದಿದ್ದು ಪುನೀತ್ ಮತ್ತು ಸಹೋದರಿ ಪೂರ್ಣಿಮಾರನ್ನು ರಾಜ್ ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್‌ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.
ಹೀಗೇ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಗಿದ್ದು ಪುನೀತ್ ಆರು ತಿಂಗಳು ಮಗುವಿದ್ದಾಗ 1976 ರಲ್ಲಿ ತೆರೆಕಂಡ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದು ತದನಂತರ ಬಂದ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದರು. ಭಾಗ್ಯವಂತ ಚಿತ್ರದ ಬಾನ ದಾರಿಯಲ್ಲಿ ಸೂರ್ಯ, ಚಲಿಸುವ ಮೋಡಗಳು ಚಿತ್ರದ ಕಾಣದಂತೆ ಮಾಯವಾದನೋ, ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಪ್ರಶಂಸೆ ಪಡೆದಿದ್ದು ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.
ಬಾಲ ಕಲಾವಿದನಾಗಿ ಪುನೀತ್ ರಾಜ್ ಕುಮಾರ್ ರವರ ಅಭಿನಯಿಸಿದ ಉತ್ಕೃಷ್ಟ ಚಿತ್ರ ಬೆಟ್ಟದ ಹೂ. 1984 ರಲ್ಲಿ ತೆರೆಕಂಡ ಎನ್ ಲಕ್ಷ್ಮಿ ನಾರಾಯಣ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಬಾಲಕ ರಾಮು ಆಗಿ ನಟಿಸಿದ್ದು ಶಾಲೆಗೆ ಹೋಗುವ ಬಡ ಬಾಲಕನೊಬ್ಬನ ತಳಮಳಗಳನ್ನು ಚಿತ್ರ ಚೆನ್ನಾಗಿ ಬಿಂಬಿಸಿತು. ಈ ಚಿತ್ರ ಇಂಗ್ಲೀಷ್ ಕಾದಂಬರಿ ವಾಟ್ ದೆನ್ ರಾಮನ್ ಆಧಾರಿತವಾಗಿದ್ದು ಈ ಚಿತ್ರದ ಅಭಿನಯಕ್ಕಾಗಿ ಪುನೀತ್‌ಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು. 2002 ರಲ್ಲಿ ತೆರೆಕಂಡ ಪುರಿ ಜಗನ್ನಾಥ ನಿರ್ದೇಶನದ ಅಪ್ಪು ಚಿತ್ರದಿಂದ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು ಈ ಚಿತ್ರ ಅದ್ಧೂರಿ ಯಶಸ್ಸು ಕಂಡಿತು. ತದನಂತರ ತೆರೆಗೆ ಬಂದ ಅಭಿ ವೀರ ಕನ್ನಡಿಗ ಮೌರ್ಯ ಆಕಾಶ್ ನಮ್ಮ ಬಸವ ಅಜಯ್ ಮುಂತಾದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಒಳ್ಳೆ ದಾಖಲೆ ಮಾಡಿ ಅದ್ದೂರಿ ಪ್ರದರ್ಶನ ಕಂಡವು.
ಇವರು ನಾಯಕನಾಗಿ ನಟಿಸಿದ ಮೊದಲ ಹತ್ತು ಚಿತ್ರಗಳು ಶತದಿನ ಪೂರೈಸಿದ್ದು ದಾಖಲೆ. ನಾಯಕನಾಗಿ ಎರಡು ರಾಜ್ಯ ಪ್ರಶಸ್ತಿ ನಾಲ್ಕು ಫಿಲ್ಮಫೇರ್ ಎರಡು ಸೈಮಾ ಹೀಗೆ ಹತ್ತು ಹಲವು ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ ಅವರ ಕೊನೆಯ ಚಿತ್ರ ಜೇಮ್ಸ್ ವರೆಗೂ ಕೂಡ ಅಪ್ಪು ದಾಖಲೆಯ ಸರದಾರನೇ ಆಗಿದ್ದರು. ಹೀಗೇ ಅಪ್ಪು ಸಿನಿಮಾ ದಿಕ್ಕು ಒಂದಿ ಕಡೆಯಾದರೆ ಅವರು ಮಾಡಿದ್ದ ಸಮಾಜಮುಖಿ ಕೆಲಸಗಳು ಇಡೀ ಪ್ರಪಂಚವೇ ಆಶ್ಚರ್ಯವಾಗುವಂತೆ ಮಾಡಿದೆ. ಹೀಗೆ ಅಭಿಮಾನಿಗಳ ಪರಮಾತ್ಮರಾಗಿದ್ದ ಅಪ್ಪು ಅವರನ್ನು ಕಳೆದು ಕೊಂಡು ಈಗಲೂ ಕೂಡ ಕರುನಾಡಲ್ಲಿ ಸೂತಕದ ಚಾಯೆ ಮೂಡಿದೆ.
ಇದರ ನಡುವೆ ಅಭಿಮಾನಿಗಳು ಅಪ್ಪು ಸದಾ ಜೀವಂತವಾಗಿರಲಿ ಎಂಬ ಕಾರಣಕ್ಕೆ ಒಂದು ಕೆಲಸ ಮಾಡಿದ್ದು ಇದನ್ನು ನೋಡಿ ಅಶ್ವಿನಿ ಮೇಡಂ ಬಹಳ ಭಾವುಕರಾಗಿದ್ದಾರೆ. ಅಷ್ಟಕ್ಕೂ ಅಪ್ಪು ಅಭಿಮಾನಿಗಳು ಮಾಡಿದ್ದೇನು ಗೊತ್ತಾ? ಅಭಿಮಾನಿಗಳ ದೇವರು ಆಗಿರುವ ಅಪ್ಪು ಅವರಿಗಾಗಿ ಅಭಿಮಾನಿಗಳಿ ಏನೆಲ್ಲಾ ಮಾಡಿದ್ದಾರೆ ಎಂಬುದನ್ನು ತಾವೆಲ್ಲರೂ ಪ್ರತಿನಿತ್ಯ ನೋಡಿರುತ್ತೀರಿ. ಸದ್ಯ ಇದೀಗ ಅಪ್ಪು ಜೀವಂತವಾಗಿರಲಿ ಎಂಬ ಕಾರಣಕ್ಕಾಗಿ ಸಾಕಷ್ಟು ಖರ್ಚು ಮಾಡಿ ಅಪ್ಪು ಅವರಂತೆ ಕಾಣುವ ವ್ಯಾಕ್ಸ್ ಒಂದನ್ನ ಮಾಡಿದ್ದು ನಿಜಕ್ಕೂ ಇದನ್ನು ನೋಡುತ್ತಿದ್ದರೆ ಅಪ್ಪು ಜೀವಂತವಾಗಿಯೇ ಕುಳಿತಿರುವ ಹಾಗೆ ಕಾಣುತ್ತದೆ. ಸದ್ಯ ಅಪ್ಪು ಅವರ ಮೇಣದ ಬೊಂಬೆಯನ್ನು ನೋಡಿದ ಅಶ್ವಿನಿ ಮೇಡಂ ಬಹಳಾನೇ ಭಾವುಕರಾಗಿದ್ದು ಕಣ್ಣಲ್ಲಿ ನೀರು ತುಂಬಿಕೊಂಡರು ಅದನ್ನು ತಡೆದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಒಂದೇ ಮಾತಿನಲ್ಲಿ ನಿಮ್ಮ ಪ್ರೀತಿಯಲ್ಲಿ ಅಪ್ಪು ಜೀವಂತ ಎಂದ ಅಶ್ವಿನಿ ಮೇಡಂ ಅಪ್ಪು ಬೊಂಬೆಗೆ ಮುತ್ತು ಕೊಟ್ಟು ಹೊರಟು ಹೋಗಿದ್ದಾರೆ. ನಿಜಕ್ಕೂ ಅಪ್ಪು ಅಜರಾಮರ ಅಲ್ಲವೇ.
ಸಮಯದ ಬೊಂಬೆಗಳು ನಾವು, ಅಂದು ಅಪ್ಪು ಮುಂದೆ ನಾವು ಬದುಕಿನ ಪಯಣ ಮುಗಿಸಿ ಹೊರಡಲೇ ಬೇಕು. ಆದರೆ ಪುನೀತ್ ಎಂಬ ಹೆಸರಿಟ್ಟರೂ ಆತುರಾತುರವಾಗಿ ಹೊರಟು ಹೋದ ಅಪ್ಪು ಸಾವು ಎಲ್ಲರಿಗೂ ನುಂಗಲಾರದ ನೋವೆಂಬುದು ಅಕ್ಷರಶಃ ಸತ್ಯದ ಮಾತು. ಇನ್ನು ಸಹ ಅಪ್ಪು ನಮ್ಮೊಂದಿಗೆ ಇಲ್ಲ ಎನ್ನುವುದನ್ನೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಜೊತೆ ಇದ್ದಾರೆ, ಕೋಟ್ಯಂತರ ಅಭಿಮಾನಗಳ ಮನಸ್ಸಿನಲ್ಲಿ ಅಪ್ಪು ಇದಾರೆ. ಎಲ್ಲಿವರೆಗೂ ಅಭಿಮಾನಿಗಳು ಇರುತ್ತಾರೆ. ಅಲ್ಲಿವರೆಗೂ ಅಪ್ಪು ಜೀವಂತ.
ಜೊತೆಗಿರದ ಜೀವ ಎಂದಿಗಿಂತ ಜೀವಂತ. ಅಪ್ಪು ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಮಾನಸಿಕವಾಗಿ ಎಲ್ಲರ ಜೊತೆ ಇದ್ದಾರೆ. ಬುದಕಿದ ಅಷ್ಟೂ ದಿನ ಅಪ್ಪು ಮಾದರಿಯಾಗುವಂತೆ ಜೀವನ ನಡೆಸಿದವರು, ಸಾಮಾಜಿಕ ಕೆಲಸಗಳು, ವ್ಯಕ್ತಿತ್ವ, ಸರಳತೆ ಎಲ್ಲವೂ ಇವರನ್ನು ನೋಡಿ ಕಲಿಯಬೇಕು. ಪುನೀತ್ ರಾಜ್‌ಕುಮಾರ್ ಅವರು ಕೂಡ ಅನೇಕ ಕನಸುಗಳನ್ನು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಆ ಕನಸುಗಳು ಪೂರ್ಣಗೊಳ್ಳುವ ಮುನ್ನವೇ ಅಪ್ಪು ಇಹಲೋಕ ತ್ಯಜಿಸಿದ್ದರು. ಈಗ ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಗಲು ಏರಿದೆ.