ಜುಲೈ 6 ನೇ ತಾರೀಕಿನ ಮಧ್ಯಾಹ್ನ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಸರಳವಾಸ್ತು ಗುರೂಜಿಯವರು ಕೊ’ಲೆಯಾಗಿರುವ ವಿಷಯ ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಸರಳವಾಸ್ತು ಗುರೂಜಿಯವರು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ಪಬ್ಲಿಕ್ ಫಿಗರ್. ಇಂತಹ ದೊಡ್ಡ ವ್ಯಕ್ತಿಗಳೇ ಈ ರೀತಿಯಾಗಿ ತೀರಿಕೊಂಡರೆ ಇನ್ನೂ ಸಾಮಾನ್ಯ ವ್ಯಕ್ತಿಗಳ ಪರಿಸ್ಥಿತಿಯೇನು ನಮಗೆಲ್ಲ ಸೇಫ್ಟಿ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ.
ಗುರೂಜಿಯವರನ್ನು ಹೋಟೆಲ್ನಲ್ಲಿ ಚಾಕುವಿನಿಂದ ಚುಚ್ಚಿ ಮುಗಿಸಿರುವ ವೀಡಿಯೊ ಕೂಡ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಲಭ್ಯವಿದೆ. ಪ್ರೆಸಿಡೆಂಟ್ ಹೋಟೆಲ್ ನ ಸೆಕ್ಯುರಿಟಿ ಮತ್ತು ಸಿಬ್ಬಂದಿಗಳ ಕಣ್ಮುಂದೆ ಮಹಂತೇಶ್ ಮತ್ತು ಮಂಜುನಾಥ್ ಎಂಬ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಗುರೂಜಿಯವರನ್ನು ಚುಚ್ಚಿ ಚುಚ್ಚಿ ಮುಗಿಸಿರುವ ದೃಶ್ಯಗಳು ವೀಡಿಯೊದಲ್ಲಿ ಕಂಡುಬಂದಿದೆ. ಹುಬ್ಬಳ್ಳಿಯಲ್ಲಿರುವ ಈ ಪ್ರೆಸಿಡೆಂಟ್ ಹೋಟೆಲ್ ತುಂಬಾ ಪ್ರಸಿದ್ಧಿ ಹೊಂದಿದೆ ಮತ್ತು ಈ ಹೋಟೆಲ್ ಗೆ ದೊಡ್ಡ ದೊಡ್ಡ ವ್ಯಕ್ತಿಗಳು ಆಗಾಗ ಬರ್ತಾ ಇರ್ತಾರೆ.
ಇದೀಗ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಈ ಘಟನೆ ನಡೆದ ಮೇಲೆ ಹೋಟೆಲ್ ಸಿಬ್ಬಂದಿ ಮತ್ತು ಮಾಲೀಕರಲ್ಲಿ ಭಯ ಶುರುವಾಗಿದೆ. ಗುರೂಜಿಯವರು ಮೊದಲೇ ವಸ್ತು ಸಂಖ್ಯಾಶಾಸ್ತ್ರ ಜ್ಯೋತಿಷ್ಯ ಶಾಸ್ತ್ರ ಚಿತ್ರಗಳಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿದ್ದರು. ಇಂತಹ ಆಧ್ಯಾತ್ಮಿಕ ವ್ಯಕ್ತಿ ಹೊಟೇಲ್ ನಲ್ಲಿ ಹೀನಾಯವಾಗಿ ಕೊನೆಯುಸಿರೆಳೆದಿರುವುದು ಹೊಟೇಲ್ ಸಿಬ್ಬಂದಿಗಳಲ್ಲಿ ಮತ್ತು ಹೊಟೇಲ್ ಸಂಸ್ಥಾಪಕರಲ್ಲಿ ಚಿಂತೆ ಮತ್ತು ಭಯವನ್ನು ಹುಟ್ಟು ಹಾಕಿದೆ. ಗುರೂಜಿಯವರದ್ದು ಅತೃಪ್ತಿ ಸಾ ವು.
ಒಂದು ವೇಳೆ ಗುರೂಜಿ ಅವರ ಆತ್ಮಕ್ಕೆ ಶಾಂತಿ ಸಿಗದೆ ಅವರ ಆತ್ಮ ಈ ಹೋಟೆಲ್ ನಲ್ಲಿ ವಾಸ ಮಾಡಿದರೆ ಇದರಿಂದ ನಕಾರಾತ್ಮಕ ಶಕ್ತಿಗಳು ಹೊಟೆಲ್ ನಲ್ಲಿ ವಾಸ ಮಾಡುವ ಸಾಧ್ಯತೆ ಇದೆ ಎಂಬ ಭಯ ಹೋಟೆಲ್ ನ ಸಂಸ್ಥಾಪಕರಲ್ಲಿ ಮೂಡಿದೆ. ಹಾಗೆ ಯಾವುದೇ ಕೆಟ್ಟ ದೃಷ್ಟಿ ಈ ಹೋಟೆಲ್ ಮೇಲೆ ಬೀಳದಿರಲಿ ಎಂಬ ಕಾರಣಕ್ಕೆ ಹೋಟೆಲ್ ನವರು ದೇವರ ಮೊರೆ ಹೋಗಿದ್ದಾರೆ. ಇದಕ್ಕೆ ಪರಿಹಾರ ಎಂಬಂತೆ ಹೋಟೆಲ್ ನ ಸಿಬ್ಬಂದಿಗಳು ಮತ್ತು ಮಾಲೀಕರು ಎಲ್ಲರೂ ಸೇರಿ ಇದೀಗ ಹೋಮ ಮತ್ತು ಪೂಜೆ ಗಳನ್ನು ಮಾಡಿಸಿದ್ದಾರೆ. ಪುರೋಹಿತರನ್ನು ಕರೆಸಿ ಹೋಮ ಹವನಗಳನ್ನು ನೆರವೇರಿಸಿದರು.
ಹೋಮ ಮತ್ತು ಹವನಗಳು ಪೂಜೆ ಮುಗಿದ ನಂತರ ಪುರೋಹಿತರು ಹೋಟೆಲ್ ಸಿಬ್ಬಂದಿಗಳ ಸಮ್ಮುಖದಲ್ಲಿ ದೇವರ ಬಳಿ ಈ ರೀತಿಯಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ “ಇನ್ಮೇಲೆ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು ಒಳ್ಳೆಯ ಘಟನೆಗಳೇ ಇನ್ಮೇಲೆ ನಡೆಯಲಿ. ಈ ಹೋಟೆಲ್ ನಲ್ಲಿ ಇನ್ಮೇಲೆ ನಕಾರಾತ್ಮಕ ಶಕ್ತಿಗಳು ಹುಟ್ಟಿಕೊಳ್ಳದೇ ಇರಲಿ. ಪೂರ್ವದಲ್ಲಿ ಅಂದರೆ ಈ ಘಟನೆ ನಡೆಯುವುದಕ್ಕೂ ಮುನ್ನ ಪ್ರೆಸಿಡೆಂಟ್ ಹೋಟೆಲ್ ಇಷ್ಟು ಪ್ರಸಿದ್ಧಿಯನ್ನು ಹೊಂದಿತ್ತು ಇನ್ಮೇಲೆ ಅದೇ ರೀತಿಯ ಪ್ರಸಿದ್ಧಿ ಹೊಂದಲಿ. ಆ ದೇವರು ಮತ್ತು ಕುಲದೇವರ ಅನುಗ್ರಹದಿಂದ ಎಲ್ಲವೂ ಒಳ್ಳೆಯದಾಗಲಿ “ಎಂದು ಪುರೋಹಿತರು ಕೈಮುಗಿದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.