ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್. ಪವಿತ್ರ-ನರೇಶ್ ಸ್ಟೋರಿಗೆ ಹೊಸ ಟ್ವಿಸ್ಟ್

ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ಮದುವೆ ವಿಚಾರ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗೆ ಇವರಿಬ್ಬರ ಸ್ಟೋರಿಯಲ್ಲಿ ದಿನಕ್ಕೊಮ್ಮೆ ಹೊಸದಾದ ಟ್ವಿಸ್ಟ್ ಬರುತ್ತಿವೆ. ನರೇಶ್ ಮತ್ತು ನಟಿ ಪವಿತ್ರಾ ಮದುವೆಯಾಗಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆಮೇಲೆ ಸ್ವತಃ ಪವಿತ್ರ ಲೋಕೇಶ್ ಅವರೇ ನಾವಿಬ್ಬರು ಸ್ನೇಹಿತರು ಮತ್ತು ಆತ್ಮೀಯರು ನಾವಿಬ್ಬರು ಒಟ್ಟಿಗೆ ಬದುಕುತ್ತಿದ್ದೇವೆ ಹೊರತು ಮದುವೆಯಾಗಿಲ್ಲ ಎಂದು ಹೇಳಿದ್ದರು. ಹಾಗೆ ನಟ ನರೇಶ್ ಅವರು ಕೂಡ ನಾವಿಬ್ಬರು ಗಂಡ ಹೆಂಡತಿ ಅಲ್ಲ ನಮ್ಮಿಬ್ಬರ ಮಧ್ಯೆ ಆ ರೀತಿಯ ರಿಲೇಶನ್ ಶಿಪ್ ಇಲ್ಲ ಎಂದು ಸಂದರ್ಶನದಲ್ಲಿ ನೇರವಾಗಿ ಉತ್ತರ ನೀಡಿದ್ದರು.

ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿಯವರು ನರೇಶ್ ಮತ್ತು ಪವಿತ್ರ ಅವರ ಸಂಬಂಧದ ಬಗ್ಗೆ ಸಂಶಯಪಟ್ಟಿದ್ದರು. ಏನಾದರೂ ಮಾಡಿ ಪವಿತ್ರ ಮತ್ತು ಅಂಬರೀಶ್ ಅವರ ಈ ಸಂಬಂಧವನ್ನು ಹೊರಗೆ ತರಲೇಬೇಕು ಎಂದು ರಮ್ಯಾ ಹರಸಾಹಸ ಪಡುತ್ತಿದ್ದರು. ನ್ಯೂಸ್ ಚಾನೆಲ್ ಗಳ ಸಹಾಯ ಪಡೆದು ರಮ್ಯಾ ರಘುಪತಿಯವರು ಇದೀಗ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರನ್ನು ಮೈಸೂರಿನ ಹೋಟೆಲ್ ಒಂದರಲ್ಲಿ ರೆಡ್ ಹ್ಯಾಂಡಾಗಿ ಸಿಲುಕಿಸಿದ್ದಾರೆ. ನರೇಶ್ ಪತ್ನಿ ರಮ್ಯಾ ರಘುಪತಿ ಮಾಸ್ಟರ್ ಪ್ಲಾನ್ ಮಾಡಿ ಪವಿತ್ರ ಮತ್ತು ನರೇಶ್ ಅವರನ್ನು ಸಿಲುಕಿಸಿದ್ದಾರೆ.

ನಟಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರೂ ಒಂದೇ ರೂಮಿನಲ್ಲಿ ಕುಳಿತುಕೊಂಡು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ನಮಗೆ ನ್ಯೂಸ್ ಚಾನಲ್ ಕಡೆಯಿಂದ ಮಾನಹಾನಿಯುಂಟಾಗಿದೆ. ನಮಗೆ ನ್ಯೂಸ್ ಚಾನೆಲ್ ಮತ್ತು ರಮ್ಯಾ ರಘುಪತಿ ಇಬ್ಬರೂ ಸೇರಿ ಅಟ್ಯಾಕ್ ಮಾಡುತ್ತಿದ್ದಾರೆ. ನಮ್ಮ ಜೀವನದ ನೆಮ್ಮದಿಯೇ ಹಾಳಾಗಿದೆ. ನ್ಯೂಸ್ ಚಾನೆಲ್ ಮತ್ತು ರಮ್ಯಾ ಮೇಲೆ ಪವಿತ್ರಾ ಮತ್ತು ನರೇಶ್ ಇಬ್ಬರು ಆರೋಪ ಮಾಡಿದ್ದರು. ಈ ಇಬ್ಬರೂ ಜೋಡಿ ವೀಡಿಯೋ ಮಾಡಿದ್ದು ಒಂದೇ ರೂಮಿನಿ೦ದ ಅಂತ ವೀಡಿಯೋ ನೋಡಿದ ಮೇಲೆ ರಮ್ಯಾ ರಘುಪತಿಗೆ ಅರಿವಾಗಿದೆ.

ತಕ್ಷಣ ರಮ್ಯಾ ರಘುಪತಿ ನ್ಯೂಸ್ ಚಾನೆಲ್ ಸಿಬ್ಬಂದಿ ಗಳನ್ನು ಕರೆದುಕೊಂಡು ನರೇಶ್ ಮತ್ತು ಪವಿತ್ರ ಅಡಗಿ ಕುಳಿತಿದ್ದ ಮೈಸೂರು ಹೋಟೆಲ್ ರೂಮ್ ಗೆ ಹೋಗಿದ್ದಾಳೆ ಮತ್ತು ಅವರ ರೂಮಿನ ಮುಂದೆ ನಿಂತುಕೊಂಡು ಬಾಗಿಲು ತೆಗೆಯುವಂತೆ ಪ್ರತಿಭಟಿಸಿದ್ದಾಳೆ. ರಮ್ಯಾ ರಘುಪತಿ ಎಷ್ಟೇ ಕಿರುಚಾಡಿ ಕೂಗಾಡಿದರು ನರೇಶ್ ಮತ್ತು ಪವಿತ್ರ ರೂಮಿನಿಂದ ಹೊರಗಡೆ ಬರಲಿಲ್ಲ. ನಂತರ ರಮ್ಯಾ ಪೊಲೀಸ್ ಸಿಬ್ಬಂದಿಗಳನ್ನು ಕರೆದುಕೊಂಡು ನರೇಶ್ ಮತ್ತು ಪವಿತ್ರ ವಾಸವಾಗಿದ್ದ ರೂಮಿನ ಬಾಗಿಲನ್ನು ತೆರೆಸಿದ್ದಾಳೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ವೈವಾಹಿಕ ಸಂಬಂಧ ಇಲ್ಲ ಎಂದು ಹೇಳಿದ್ದ ಪವಿತ್ರಾ ಮತ್ತು ನರೇಶ್ ಅವರು ಒಂದೇ ರೂಮಿನಲ್ಲಿ ಇದ್ದದ್ದು ಇದೀಗ ಕಥೆಗೆ ಹೊಸ ಟ್ವಿಸ್ಟ್ ಹುಟ್ಟಿದೆ.

Leave a Comment