ಬರ್ತ್‌ಡೇ ದಿನವೇ ತಂದೆಯಾದ ಕನ್ನಡದ ಖ್ಯಾತ ನಿರ್ದೇಶಕ

ಬರ್ತ್‌ಡೇ ದಿನವೇ ತಂದೆಯಾದ ಗೂಗ್ಲಿ ಚಿತ್ರದ ನಿರ್ದೇಶಕ ಪವನ್‌ ಒಡೆಯರ್‌. ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ಅಪೇಕ್ಷಾ. ಆಗಸ್ಟ್ ತಿಂಗಳಿಂದ ಹೊಸ ಜೀವನಕ್ಕೆ ಕಾಲಿಟ್ಟ ಪವನ್ ಗೆ ಅಂದಿನಿಂದ ಎಲ್ಲವೂ ವಿಶೇಷ. ಇನ್ನಷ್ಟು ವಿಶೇಷ ಮಾಡಿದ್ದು 31ನೇ ಹುಟ್ಟು ಹಬ್ಬಕ್ಕೆ ಹೆಂಡತಿ ಕೊಟ್ಟ ಗಿಫ್ಟ್. ಹುಟ್ಟು ಹಬ್ಬ ಅಂದ ಮೇಲೆ ಶುಭಾಶಯಗಳ ಸುರಿಮಳೆ ಇರುತ್ತದೆ ಆದರೆ ಅದೆಲ್ಲಕ್ಕೂ ಮೀರಿದ್ದು ಹೆಂಡತಿಯ ಗಿಫ್ಟ್.

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಪವನ್‌ ಒಡೆಯರ್‌ ಅವರ ಪತ್ನಿ ಅಪೇಕ್ಷಾ ಪುರೋಹಿತ್‌ ಗುರುವಾರ ಡಿಸೆಂಬರ್ 10 ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋಶಿಯಲ್‌ ಮೀಡಿಯಾ ಮೂಲಕ ಪವನ್‌ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ತಂದೆಯಾದ ಗೂಗ್ಲಿ ನಿರ್ದೇಶಕನಿಗೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಗೂಗ್ಲಿ, ನಟಸಾರ್ವಭೌಮ ಮುಂತಾದ ಸಿನಿಮಾಗಳ ಮೂಲಕ ಮನೆಮಾತಾಗಿರುವ ನಿರ್ದೇಶಕ ಪವನ್‌ ಒಡೆಯರ್‌ ಅವರು ಗುರುವಾರ ಡಿಸೆಂಬರ್ 10 ಮುಂಜಾನೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಅವರ ಪತ್ನಿ, ನಟಿ ಅಪೇಕ್ಷಾ ಪುರೋಹಿತ್‌ ತಾಯಿ ಆಗಿದ್ದಾರೆ.

ಅಚ್ಚರಿ ಏನೆಂದರೆ, ಡಿಸೆಂಬರ್ 10 ಪವನ್‌ ಒಡೆಯರ್‌ ಅವರ ಜನ್ಮದಿನ. ಈ ವಿಶೇಷ ದಿನದಂದೇ ಅವರು ತಂದೆ ಆಗಿದ್ದಾರೆ. ಮಡದಿ ಅಪೇಕ್ಷಾ ಪುರೋಹಿತ್‌ ಜೊತೆ ಆಸ್ಪತ್ರೆಯಲ್ಲಿ ಇರುವ ಫೋಟೋವನ್ನು ಪವನ್‌ ಶೇರ್‌ ಮಾಡಿಕೊಂಡಿದ್ದಾರೆ. ಬರ್ತ್‌ಡೇ ದಿನವೇ ನನಗೆ ಅದ್ಭುತವಾದ ಉಡುಗೊರೆ ಸಿಕ್ಕಿದೆ. ಗಂಡು ಮಗು ಜನಿಸಿದೆ. ಜೈ ಚಾಮುಂಡೇಶ್ವರಿ ಎಂದು ಪವನ್‌ ಟ್ವೀಟ್‌ ಮಾಡಿದ್ದಾರೆ. 2017ರಲ್ಲಿ ಅಪೇಕ್ಷಾ ಮತ್ತು ಪವನ್ ಒಡೆಯರ್‌ ನಿಶ್ಚಿತಾರ್ಥ ನೆರವೇರಿತ್ತು. 2018ರ ಆಗಸ್ಟ್‌ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಪೇಕ್ಷಾ ಕೂಡ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಕಿರುತೆರೆಯ ತ್ರಿವೇಣಿ ಸಂಗಮ ಧಾರಾವಾಹಿಯಲ್ಲಿ ಅವರು ನಟಿಸಿದ್ದಾರೆ. ಟಿ.ಎನ್‌. ಸೀತಾರಾಮ್‌ ನಿರ್ದೇಶನದ ಕಾಫಿ ತೋಟ ಮುಂತಾದ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದಾರೆ.

ಚಿತ್ರ ರಂಗದ ತಾರೆಯರಾದ ಜಗ್ಗೇಶ್, ಸಂತೋಷ್ ಆನಂದ್ರಾಮ್, ತರುಣ್ ಸುದೀರ್ ಹಾಗು ಅನುಪಮ ಪರಮೇಶ್ವರೀ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವುದನ್ನು ನೋಡಬಹುದು. ಪವನ್ ಮದುವೆ ನಂತರ ಬಂದ ಮೊದಲ ಹುಟ್ಟುಹಬ್ಬಕ್ಕೆ ಹೆಂಡತಿ ದಿ ಬಾಸ್ ಟೀ ಶರ್ಟ್ ಕೊಟ್ಟಿದ್ದಾರೆ ಆದರೆ ಇದರಲ್ಲಿರುವ ಟ್ವಿಸ್ಟ್ ಏನೆಂದರೆ ಗಂಡನಿಗೆ ದಿ ಬಾಸ್ ಕೊಟ್ಟರೆ ಹೆಂಡತಿ ದಿ ರಿಯಲ್ ಬಾಸ್ ಎಂದು ಬರೆದಿದೆ. ಅಪೇಕ್ಷ ಪುರೋಹಿತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇವತ್ತು ಈ ಪ್ರಪಂಚಕ್ಕೆ ಪರಿಚಯವಾದ ದಿನ ನೀವು ವಂಡರ್‌ಫುಲ್ ಪರ್ಸನ್. ಸದಾ ಖುಷಿಯಾಗಿರಿ ಎಂದು ವಿಶ್ ಮಾಡಿದ್ದಾರೆ. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸುದ್ದಿಯನ್ನು ಕೆಲವೇ ದಿನಗಳ ಹಿಂದೆ ಈ ಜೋಡಿ ನೀಡಿತ್ತು. ಕಲರ್‌ಫುಲ್‌ ಆದಂತಹ ಫೋಟೋಶೂಟ್‌ ಮೂಲಕ ಅಭಿಮಾನಿಗಳಿಗೆ ಪವನ್‌ ಮತ್ತು ಅಪೇಕ್ಷಾ ಗುಡ್‌ ನ್ಯೂಸ್‌ ನೀಡಿದ್ದರು. ತುಂಬ ಅದ್ದೂರಿಯಾಗಿ ಅಪೇಕ್ಷಾ ಅವರ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ಅದರ ಫೋಟೋಗಳು ಕೂಡ ವೈರಲ್‌ ಆಗಿದ್ದವು. ಈಗ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ಆಗಿರುವುದರಿಂದ ಪವನ್‌-ಅಪೇಕ್ಷಾ ಸಖತ್‌ ಖುಷಿ ಆಗಿದ್ದಾರೆ.

Leave a Comment