ಕುರುಕ್ಷೇತ್ರ ಯು ದ್ಧದ ನಂತರ ಪಾಂಡವರು ಏನಾದ್ರು ಗೊತ್ತೇ

ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಏನಾದರೂ, ಪಾಂಡವರ ಮ ರಣ ಹೇಗಾಯಿತು ಈ ಎಲ್ಲ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕುರುಕ್ಷೇತ್ರದಲ್ಲಿ ಗೆದ್ದಿದ್ದು ಪಾಂಡವರು ಆದರೂ ಅಲ್ಲಿ ಧರ್ಮ ಹಾಗೂ ಶ್ರೀ ಕೃಷ್ಣನ ಶಕ್ತಿ ಮತ್ತು ಯುಕ್ತಿಯಿತ್ತು. ಕುರುಕ್ಷೇತ್ರದ ನಂತರ ಪಾಂಡವರು ಧರ್ಮ ಮತ್ತು ನಿಷ್ಠೆಯಿಂದ 36 ವರ್ಷಗಳು ರಾಜ್ಯವನ್ನಾಳುತ್ತಾರೆ. ನಂತರ ಶ್ರೀ ಕೃಷ್ಣನ ಅಂತ್ಯವನ್ನು ನೋಡಿದ ಪಾಂಡವರು ಮನನೊಂದು ರಾಜ್ಯಭಾರ ಮಾಡುವುದನ್ನು ನಿಲ್ಲಿಸಿ ಸಂನ್ಯಾಸತ್ವ ಸ್ವೀಕರಿಸಲು ನಿರ್ಧಾರ ಮಾಡಿದರು. ಹಿಮಾಲಯದ ಸ್ಮೇಧು ಪರ್ವತಕ್ಕೆ ಪ್ರಯಾಣ ಬೆಳೆಸಿದರು. ಇವರ ಜೊತೆ ಶ್ವಾನವು ಇರುತ್ತದೆ. ಹೀಗೆ ನಡೆದು ಹೋಗುವಾಗ ಅಗ್ನಿದೇವ ಎದುರಾಗಿ ಅರ್ಜುನನಿಗೆ ಶಿವಧನಸ್ಸನ್ನು ಹಿಂದಿರುಗಿಸಲು ಹೇಳಿದಾಗ ಅರ್ಜುನ ಹಿಂದಿರುಗಿಸುತ್ತಾನೆ. ನಡೆದು ಹೋಗುತ್ತಿದ್ದಾಗ ಸಮುದ್ರದಲ್ಲಿ ದ್ವಾರಕೆ ಮುಳುಗುವುದನ್ನು ನೋಡಿ ಬೇಸರ ಪಡುತ್ತಾರೆ. ಮುಂದೆ ಸಾಗುತ್ತ ದ್ರೌಪದಿ ಮರಣ ಹೊಂದುತ್ತಾಳೆ.

ದ್ರೌಪದಿಯ ಸಾವು ನೋಡಿದ ಭೀಮ ಧರ್ಮರಾಯನಿಗೆ ದ್ರೌಪದಿ ಸಾಯಲು ಕಾರಣವೇನು ಎಂದು ಕೇಳುತ್ತಾನೆ. ಆಗ ಧರ್ಮರಾಯ ದ್ರೌಪದಿ ಪಾಂಡವರನ್ನು ಸಮಾನತೆಯಲ್ಲಿ ಪ್ರೀತಿಸುತ್ತೇನೆ ಎಂದು ಹೇಳಿ ಅರ್ಜುನನ್ನು ಅತಿಯಾಗಿ ಪ್ರೀತಿಸಿದಕ್ಕೆ ಕರ್ಮಾನುಸಾರ ಆಕೆಯು ಮರಣ ಹೊಂದಿದಳು ಎನ್ನುತ್ತಾನೆ. ಹಾಗೆ ನಡೆದುಕೊಂಡು ಹೋಗುವಾಗ ಸಹದೇವ ಮರಣ ಹೊಂದುತ್ತಾನೆ. ಸಹದೇವ ಏಕೆ ಮರಣ ಹೊಂದಿದನು ಎಂದು ಭೀಮ ಧರ್ಮರಾಯನಿಗೆ ಕೇಳಿದಾಗ ಸಹದೇವನಿಗೆ ತಾನೊಬ್ಬನೇ ಜ್ಞಾನಿ ಎಂಬ ಅಹಂಕಾರ ಇದೆ ಆದ್ದರಿಂದ ಕರ್ಮಾನುಸಾರ ಆತ ಮರಣ ಹೊಂದಿದನು ಎನ್ನುತ್ತಾನೆ. ನಂತರ ನಕುಲ ಮರಣ ಹೊಂದುತ್ತಾನೆ. ಆಗ ಭೀಮ ಧರ್ಮರಾಯನ ಬಳಿ ನಕುಲನ ಸಾವಿಗೆ ಕಾರಣವೇನು ಎಂದು ಕೇಳಿದಾಗ ನಕುಲನಿಗೆ ತಾನೊಬ್ಬನೇ ಸುಂದರವಾಗಿರುವನು ಎಂಬ ಅಹಂಕಾರವು ಆದ್ದರಿಂದ ಅವನು ಮರಣ ಹೊಂದಿದನು ಎಂದು ಧರ್ಮರಾಯ ಹೇಳುತ್ತಾನೆ. ನಂತರ ಅರ್ಜುನ ಕೂಡ ಮರಣ ಹೊಂದುತ್ತಾನೆ ಆಗ ಭೀಮ ಅರ್ಜುನನ ಸಾವಿಗೆ ಕಾರಣವೇನು ಎಂದು ಧರ್ಮರಾಯನ ಹತ್ತಿರ ಕೇಳುತ್ತಾನೆ ಆಗ ಧರ್ಮರಾಯನು ಅರ್ಜುನನು ಧನುರ್ವಿದ್ಯೆಯಲ್ಲಿ ತನಗಿಂತ ಅಪ್ರತಿಮ ಸಾಹಸಿಯನ್ನು ನೋಡಿದರೆ ಅಸೂಯೆ ಪಡುತ್ತಾನೆ ಅದಕ್ಕಾಗಿ ಕರ್ಮಾನುಸಾರ ಆತ ಮರಣ ಹೊಂದಿದನು ಎನ್ನುತ್ತಾನೆ.

ಮುಂದೆ ಸಾಗುವಾಗ ಭೀಮನು ಮರಣ ಹೊಂದುವ ಸಮಯದಲ್ಲಿ ಧರ್ಮರಾಯನ ಬಳಿ ನಾನೇಕೆ ಸಾಯುತ್ತಿದ್ದೇನೆ ಎಂದು ಕೇಳಿದಾಗ. ಧರ್ಮರಾಯ ನೀನು ಅತಿಯಾಗಿ ಆಹಾರ ಸೇವಿಸುತ್ತಿದ್ದೆ ಮತ್ತು ಬೇರೆಯವರ ಹಸಿವಿಗೆ ಬೆಲೆ ಕೊಡದ ಕಾರಣ ಕರ್ಮಾನುಸಾರ ಮರಣ ಹೊಂದುತ್ತಿರುವೆ ಎಂದನು. ನಂತರ ಧರ್ಮರಾಯ ಮತ್ತು ಶ್ವಾನ ನಡೆದು ಹೋಗುತ್ತಿದ್ದಾಗ ಇಂದ್ರ ಪ್ರತ್ಯಕ್ಷನಾಗುತ್ತಾನೆ ಧರ್ಮರಾಯನಿಗೆ ತನ್ನ ಜೊತೆ ಬಾ ಆದರೆ ಈ ಶ್ವಾನವನ್ನು ಬಿಟ್ಟು ಬಾ ನಿನ್ನನ್ನು ಸ್ವರ್ಗಕ್ಕೆ ಕರೆದೊಯ್ಯುವೆ ಎಂದು ಹೇಳಿದಾಗ ಧರ್ಮರಾಯ ಈ ಶ್ವಾನವನ್ನು ಬಿಟ್ಟು ಬರಲು ಆಗುವುದಿಲ್ಲ ಈ ಶ್ವಾನ ಎಷ್ಟೋ ವರ್ಷಗಳಿಂದ ನಿಯತ್ತಿನಿಂದ ನನ್ನಜೊತೆ ಇದೆ ಈಗ ನಾನು ಇದನ್ನು ಬಿಟ್ಟರೆ ಅದು ಅಧರ್ಮವಾಗುತ್ತದೆ ಎಂದು ಹೇಳುತ್ತಾನೆ ಆಗ ಶ್ವಾನದ ರೂಪದಲ್ಲಿದ್ದ ಯಮಧರ್ಮರಾಯ ಧರ್ಮರಾಯನಿಗೆ ನಿನ್ನ ಧರ್ಮವನ್ನು ಪರೀಕ್ಷಿಸಿದೆ ಎಂದು ಧರ್ಮರಾಯನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಧರ್ಮರಾಯನಿಗೆ ಅಧರ್ಮಿ ಕೌರವನನ್ನು ನೋಡಿ ಆಶ್ಚರ್ಯವಾಗುತ್ತದೆ. ಮತ್ತು ತನ್ನ ತಮ್ಮಂದಿರನ್ನು ಹುಡುಕಲು ಶುರು ಮಾಡುತ್ತಾನೆ ಇಲ್ಲದ ಕಾರಣ ಯಮರಾಜನಿಗೆ ಕೇಳಿದಾಗ ಯಮರಾಜನು ಕೌರವರು ಕುರುಕ್ಷೇತ್ರ ಯುದ್ಧದಲ್ಲಿ ಅವರ ಕರ್ಮ ಕಳೆದು ಹೋಗಿ ಸ್ವರ್ಗ ಪ್ರಾಪ್ತಿಯಾಗಿದೆ ಆದರೆ ನಿನ್ನ ತಮ್ಮಂದಿರು ಕರ್ಮವನ್ನು ಅನುಸರಿಸಬೇಕಿದೆ ಅವರು ಸ್ವರ್ಗದಲ್ಲಿಲ್ಲ ನರಕದಲ್ಲಿದ್ದಾರೆ ಎಂದು ಹೇಳಿ ನೀನು ನಿನ್ನ ತಮ್ಮಂದಿರು ಇರುವ ನರಕಕ್ಕೆ ಹೋಗುತ್ತೀಯಾ ಅಥವಾ ಸ್ವರ್ಗದಲ್ಲೇ ಇರಲು ಇಚ್ಛೆ ಪಡುತ್ತೀಯಾ ಎಂದು ಕೇಳಿದಾಗ ಧರ್ಮರಾಯ ನನ್ನವರು ಎಲ್ಲಿ ಇರುವವರೋ ಅದೇ ನನಗೆ ಸ್ವರ್ಗ. ನಾನಿರುವ ಜಾಗ ಸ್ವರ್ಗವಾದರು ನನಗೆ ನರಕದಂತೆ ಕಾಣುತ್ತಿದೆ ಎಂದಾಗ ಯಮಧರ್ಮರಾಯ ನೀವೆಲ್ಲರೂ ಸ್ವರ್ಗದಲ್ಲೇ ಇದ್ದೀರಿ ಕೌರವರು ನರಕದಲ್ಲಿದ್ದಾರೆ ಇದು ನಿನಗೆ ನಾನಿಟ್ಟ ಮತ್ತೊಂದು ಪರೀಕ್ಷೆ ಎನ್ನುತ್ತಾನೆ.

ಧರ್ಮರಾಯ ಯಮರಾಜನಿಗೆ ಏಕೆ ನನಗೆ ಈ ರೀತಿಯ ಪರೀಕ್ಷೆಗಳನ್ನು ಮಾಡುತ್ತಿದ್ದೀರಿ ಎಂದು ಕೇಳಿದಾಗ ಕುರುಕ್ಷೇತ್ರ ಯುದ್ಧದಲ್ಲಿ 12 ನೇ ದಿನ ದ್ರೋಣಾಚಾರ್ಯರ ಅಸ್ತ್ರದಿಂದ ಪಾಂಡವರ ಸಂಹರಿಸಲು ಮುಂದಾದಾಗ ಕೃಷ್ಣ ಅಶ್ವತ್ಥಾಮ ಎನ್ನುವ ಆನೆಯನ್ನು ಸಾಯಿಸಿ ಅಶ್ವತ್ಥಾಮ ಸತ್ತುಹೋದ ಎಂದು ಹೇಳಲು ಹೇಳಿದಾಗ ನೀನು ಜೋರಾಗಿ ಹೇಳಿದೆ. ದ್ರೋಣರ ಮಗ ಅಶ್ವತ್ಥಾಮ ಚಿರಂಜೀವಿ. ದ್ರೋಣರು ನನ್ನ ಮಗ ಸತ್ತಿದ್ದಾನಾ ಎಂದು ಕೇಳಿದಾಗ ನೀನು ಅಶ್ವತ್ಥಾಮ ಸತ್ತಿದ್ದಾನೆ ಆದರೆ ಅದು ಆನೆಯೋ ಅಥವಾ ಮನುಷ್ಯನಾ ಗೊತ್ತಿಲ್ಲ ಎಂದು ಹೇಳಿದೆ ಆ ಒಂದು ಸುಳ್ಳಿಗೆ ಈ ಪರೀಕ್ಷೆ ನಿನಗೆ ಎದುರಾಗಿದ್ದು ಎಂದು ಯಮರಾಜ ಹೇಳುತ್ತಾನೆ.

Leave a Comment