ನೆಗಡಿ ನಿವಾರಣೆಗೆ ಕಿತ್ತಳೆಯ ರಸ ಉಪಯೋಗಕಾರಿ

ದೇಹಕ್ಕೆ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ನೀಡುವಂತ ಕೆತ್ತಳೆಹಣ್ಣು ವಿಟಮಿನ್ ಸಿ ಅಂಶವನ್ನು ಹೊಂದಿರುತ್ತದೆ ಇದರಲ್ಲಿ ರೋಗ ನಿರೋಧಕ ಅಂಶವನ್ನು ಪಡೆಯಬಹುದು. ಇನ್ನು ಈ ಹಣ್ಣು ಸೇವನೆ ಮಾಡುವುದರಿಂದ ಹತ್ತಾರು ಸಾಮಾನ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಬಹದು. ಈ ಕಿತ್ತಳೆಹಣ್ಣು ಯಾವೆಲ್ಲ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ ಅನ್ನೋದನ್ನ ಈ ಮೂಲಕ ತಿಳಿಯೋಣ.

ಕಿತ್ತಳೆಯ ರಸವನ್ನು ಬೆಚ್ಚನೆಯ ನೀರಿನಲ್ಲಿ ಬೆರಸಿ ಕುಡಿದರೆ ನೆಗಡಿ ಬಾದೆ ನಿವಾರಣೆಯಾಗುತ್ತದೆ, ಅಷ್ಟೇ ಅಲ್ದೆ ಕಿತ್ತಳೆಯ ರಸವನ್ನು ಆಗ್ಗಾಗೆ ಸೇವಿಸುವುದರಿಂದ ಜ್ವರದ ತಾಪ ಹಾಗೂ ದಣಿವು ಸುಸ್ತು ನಿವಾರಣೆಯಾಗುತ್ತದೆ.

ದೇಹದ ಸುಸ್ತು ನಿವಾರಣೆ ಕಿತ್ತಳೆ ರಸಕ್ಕೆ ಸಕ್ಕರೆ ಮತ್ತು ಚಿಟಿಕೆ ಉಪ್ಪನ್ನು ಬೆರಸಿ ಜ್ಯುಸ್ ಮಾಡಿ ಸೇವಿಸಿದರೆ ಸುಸ್ತು ನಿವಾರಣೆಯಾಗುತ್ತದೆ. ಇನ್ನು ಈ ಹಣ್ಣಿನ ರಸವನ್ನು ಮುಖಕ್ಕೆ ಲೇಪಿಸಿ ಮೃದುವಾಗಿ ಮಾಲೀಶು ಮಾಡಿ ಅರ್ಧ ಗಂಟೆಯ ನಂತರ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ ಹಾಗೂ ಕಲೆಗಳು ನಿವಾರಣೆಯಾಗುತ್ತದೆ.

ಕಿತ್ತಳೆಯ ಹೂವುಗಳನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಸೇವಿಸುವುದರಿಂದ ಹೊಟ್ಟೆನೋವು ಗುಣವಾಗುತ್ತದೆ. ಇದು ನಿದ್ರಾಕಾರವು ಹೌದು ಅನ್ನೋದನ್ನ ಆಯುರ್ವೇದ ತಜ್ಞರು ಹೇಳುತ್ತಾರೆ. ಒಣಗಿದ ಕಿತ್ತಳೆಯ ಎಲೆಗಳು ಹಾಗೂ ಹೂವುಗಳ ಕಷಾಯವು ಅಜೀರ್ಣ ಹೊಟ್ಟೆ ಉರಿ, ಹೊಟ್ಟೆ ಉಬ್ಬರ ವಾಂತಿಗಳಿಗೆ ಉತ್ತಮ ಔಷದಿ.

ಇನ್ನು ಮೂತ್ರ ಉರಿ ಸಮಸ್ಯೆ ಕಾಡುತ್ತಿದ್ದರೆ ಕಿತ್ತಳೆ ಹಣ್ಣಿನ ರಸವನ್ನು ಎಳನೀರಿನೊಂದಿಗೆ ಸೇವಿಸಿದರೆ ಮೂತ್ರ ಉರಿ ನಿವಾರಣೆಯಾಗುತ್ತದೆ. ಹೀಗೆ ಹತ್ತಾರು ಆರೋಗ್ಯಕಾರಿ ಗುಣಗಳನ್ನು ಕಿತ್ತಳೆಹಣ್ಣು ಹೊಂದಿದೆ, ಪ್ರತಿದಿನ ಜಂಕ್ ಫುಡ್ ಸೇವನೆ ಮಾಡಿ ಅನಗತ್ಯ ಬೊಜ್ಜು ಬೆಳೆಸಿಕೊಳ್ಳುವುದಕ್ಕಿಂತ ಇಂತಹ ಹಣ್ಣು ತರಕಾರಿಗಳನ್ನು ಸೇವನೆ ಮಾಡುವುದು ತುಂಬಾನೇ ಒಳ್ಳೆಯದು.

Leave a Comment