ನಾವು ಮಾಡುವ ಅನೇಕ ಖಾದ್ಯಗಳಲ್ಲಿ ಈರುಳ್ಳಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಮಾಂಸಾಹಾರಿ ಅಡುಗೆಗಳಲ್ಲಿ ಈರುಳ್ಳಿ ಅತ್ಯಗತ್ಯ. ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ. ಹಾಗೆಯೇ ಇದರಲ್ಲಿ ಕ್ಯಾಲ್ಸಿಯಂ, ಐರನ್ ,ವಿಟಮಿನ್ ಸಿ ಅತ್ಯಧಿಕವಾಗಿರುತ್ತದೆ. ಶರೀರದ ರಕ್ತ ಸಂಚಾರ ಸರಾಗವಾಗಿ ಅಗಬೇಕೆಂದರೆ ಈರುಳ್ಳಿ ಸೇವನೆ ಉತ್ತಮ. ಅನೇಕರು ಈರುಳ್ಳಿಯನ್ನು ನಿರಾಕರಿಸುತ್ತಾರೆ ಆದರೆ ಇದರ ಪ್ರಯೋಜನ ತಿಳಿದರೆ ಎಲ್ಲರೂ ಖಂಡಿತ ಸೇವಿಸದೆ ಇರಲಾರರು.
ಈರುಳ್ಳಿಯಿಂದ ಆಗುವ ಪ್ರಯೋಜನಗಳು
ಕೀಲುನೋವು ಮಾಯ: ಇಂದಿನ ದಿನಗಳಲ್ಲಿ ಕೀಲುನೋವು ಸಾಮಾನ್ಯವಾಗಿ ಬಾಧಿಸುವ ಸಮಸ್ಯೆ.ಇದರ ನಿವಾರಣೆಗೆ ಈರುಳ್ಳಿ ರಾಮಬಾಣದಂತೆ ಕೆಲಸಮಾಡುತ್ತದೆ. ಈರುಳ್ಳಿರಸವನ್ನು ಕೀಲುನೋವು ಭಾಗಗಳಿಗೆ ಲೇಪಿಸಿ ಮಸಾಜ್ ಮಾಡಿದರೆ ನೋವು ಕಡಿಮೆಮಾಗುತ್ತದೆ.
ಕೂದಲು ಉದುರುವಿಕೆ ತಡೆಗಟ್ಟುತ್ತದೆ: ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಕೂದಲು ಉದುರುವಿಕೆ ಒಂದು ದೊಡ್ಡ ಸಮಸ್ಯೆಮಾಗಿ ಕಾಡುತ್ತಿದೆ. ಕೂದಲು ಉದುರುವುದರಿಂದ ಅನೇಕ ಮಂದಿ ತಮ್ಮ ಆತ್ಮ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ತೆಂಗಿನ ಎಣ್ಣೆಯೊಂದಿಗೆ ಈರುಳ್ಳಿ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿಕೊಂಡರೆ ಹೊಟ್ಟಿನ ಸಮಸ್ಯೆ, ಕೂದಲು ಉದುರುವುದು ಕಡಿಮೆ ಆಗುತ್ತದೆ.ಅಲ್ಲದೆ ಈರುಳ್ಳಿ ನಮ್ಮ ಕೂದಲಿಗೆ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ.
ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆ: ಅನೇಕರಲ್ಲಿ ಕಿಡ್ನಿಯಲ್ಲಿ ಕಲ್ಲಾಗುವುದು ಸಾಮಾನ್ಯ ಸಮಸ್ಯೆ ಆಗಿದೆ. ಕಿಡ್ನಿಯಲ್ಲಿನ ಕಲ್ಲು ಕರಿಗಿಸಲು ನಾನಾ ಚಿಕಿತ್ಸೆಗಳ ಮೋರೆ ಹೋದರು ತಕ್ಕ ಮಟ್ಟಿಗೆ ಪರಿಹಾರ ದೊರೆಯುತ್ತಿದೆ ಅಷ್ಟೇ. ಆದ್ದರಿಂದ ಪ್ರತಿದಿನ ಖಾಲಿಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಸೇವಿಸಿದರೆ ಕಿಡ್ನಿಯಲ್ಲಿನ ಕಲ್ಲುಗಳು ಕ್ರಮೇಣವಾಗಿ ಕರಗಿ ಸಮಸ್ಯೆಗಳು ನಿವಾರಣೆ ಯಾಗುತ್ತದೆ.
ಕೋಲೆಸ್ಟ್ರಾಲ್ ಕಡಿಮೆ ಮಾಡುತ್ತದೆ: ನಮ್ಮ ದೇಹದಲ್ಲಿನ ಕೋಲೆಸ್ಟ್ರಾಲ್ ಅನ್ನು ಈರುಳ್ಳಿ ರಸವನ್ನು ಪ್ರತಿದಿನ ಸೇವಿಸುವುದರಿಂದ ಶಮನಗೊಳಿಸಬಹುದು. ಅಲ್ಲದೆ ರೋಗ ನಿರೋಧಕ ಶಕ್ತಿಯಾಗಿ ಈರುಳ್ಳಿಯು ಉಪಯುಕ್ತವಾಗಿದೆ.ಆರೋಗ್ಯದ ದೃಷ್ಟಿಯಿಂದ ಈರುಳ್ಳಿ ಸೇವನೆ ಒಳ್ಳೆಯದು.