ಒಂದು ದಿನದ ಮಟ್ಟಿಗೆ ಟ್ರಿಪ್ ಹೋಗಲು ಶಿವಗಂಗೆ ಬೆಟ್ಟ ಒಳ್ಳೆಯ ಪ್ರವಾಸಿತಾಣ, ಇಲ್ಲಿ ಏನೆಲ್ಲಾ ವಿಶೇಷತೆ ಇದೆ ಗೊತ್ತೇ?

ಸಾಮಾನ್ಯವಾಗಿ ರಜೆ ದಿನಗಳು ಬಂದ್ರೆ ಸಾಕು ಒಂದು ದಿನದ ಮತ್ತೆಗೆ ಆದ್ರೂ ಟ್ರಿಪ್ ಹೋಗಿ ಬರಬೇಕು ಅನ್ನೋ ಅಸೆ ಇದ್ದೆ ಇರುತ್ತದೆ, ಕೆಲವರು ತಮ್ಮ ಫ್ರೆಂಡ್ಸ್ ಜೊತೆ ಹೋದ್ರೆ ಇನ್ನು ಕೆಲವರು ತಮ್ಮ ಫ್ಯಾಮಿಲಿ ಜೊತೆ ಹೋಗುವ ಅಸೆ ಇರುತ್ತದೆ ಒಂದು ದಿನದ ಮಟ್ಟಿಗೆ ಯಾವ ಸ್ಥಳಕ್ಕೆ ಹೋಗಿ ಬರಬಹುದು ಅನ್ನೋ ಗೊಂದಲ ಕೆಲವರಲ್ಲಿ ಇದ್ದೆ ಇರುತ್ತದೆ, ನೀವು ಬೆಂಗಳೂರು ಅಥವಾ ತುಮಕೂರಿನ ಅಸು ಪಾಸಿನಲ್ಲಿ ಇದ್ರೆ ನಿಮಗೆ ಈ ಸ್ಥಳ ಒಂದು ದಿನದ ಟ್ರಿಪ್ ಗೆ ಅನುಕೂಲವಾಗುತ್ತದೆ.

ಹೌದು ಸಾಮಾನ್ಯವಾಗಿ ಶಿವಗಂಗೆ ಬೆಟ್ಟ ಅಂದ್ರೆ ಕೆಲವರು ನೋಡಿರುತ್ತಾರೆ ಇನ್ನು ಕೆಲವರು ಈ ಸ್ಥಳದ ಬಗ್ಗೆ ಕೇಳಿರುತ್ತಾರೆ ಆದ್ರೆ ಈ ಸ್ಥಳ ಒಂದೊಳ್ಳೆ ಪ್ರವಾಸಿತಾಣವಾಗಿದೆ. ಇಲ್ಲಿ ರಜೆ ದಿನಗಳಲ್ಲಿ ನೂರಾರು ಪ್ರವಾಸಿಗರು ಬರುತ್ತಾರೆ. ಅಷ್ಟಕ್ಕೂ ಈ ಸ್ಥಳ ಎಲ್ಲಿದೆ ಹಾಗೂ ಇಲ್ಲಿ ಏನೆಲ್ಲಾ ವಿಶೇಷತೆ ಇದೆ ಅನ್ನೋದನ್ನ ನೋಡುವುದಾದರೆ, ಬೆಂಗಳೂರು ಹಾಗೂ ತುಮಕೂರು ನಡುವೆ ಬರುತವಂತ ಶಿವಗಂಗೆ ಬೆಟ್ಟ ತುಮಕೂರಿನ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ.

ಈ ಪ್ರವಾಸಿತಾಣಕ್ಕೆ ಬೆಂಗಳೂರಿನಿಂದ 50 ಕಿಮಿ ಹಾಗೂ ತುಮಕೂರಿನಿಂದ 20 ಕಿಮಿ ದೂರದಲ್ಲಿದೆ, ಈ ಶಿವ ಗಂಗೆ ಬೆಟ್ಟವು ಗಂಗಾಧಾರೇಶ್ವರ ಮತ್ತು ಸ್ವರ್ಣಂಭರಿಗೆ ಮೀಸಲಾಗಿರುವ ದೇವಸ್ಥಾನಗಳನ್ನ ಹೊಂದಿದೆ ಇವು ಇಲ್ಲಿ ಹೆಚ್ಚು ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲದೆ ಮಹಾಶಿವರಾತ್ರಿ ಸಮಯದಲ್ಲಿ ಉತ್ಸವಗಳು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಇನ್ನು ಇಲ್ಲಿ ಪ್ರವಾಸಿಗರು ವರದ ಕೊನೆ ದಿನಗಳು ಅಂದರೆ ಶನಿವಾರ ಭಾನುವಾರ ಹೆಚ್ಚಿನ ಪ್ರವಾಸಿಗರು ಬರುತ್ತಾರೆ.

ಈ ಶಿವಗಂಗೆ ಬೆಟ್ಟದಲ್ಲಿ ದೇವಾಲಯಗಳಿದ್ದು ಇಲ್ಲಿನ ಬೆಟ್ಟವನ್ನು ಹತ್ತಿ ಪ್ರಕೃತಿಯ ಸೊಬಗನ್ನು ಸವಿಯಬಹುದು ಅಷ್ಟೇ ಅಲ್ಲದೆ ತುಮಕೂರು ಸುತ್ತಮುತ್ತಲು ಇನ್ನು ಅನೇಕ ಪ್ರವಾಸಿ ತಾಣಗಳಿವೆ ಅವುಗಳನ್ನು ಸಹ ಒಂದು ದಿನದಲ್ಲಿ ನೋಡಬಹುದು. ಕುಟುಂಬ ಸಮೇತರಾಗಿ ಹೆಚ್ಚಿನ ಜನರು ಈ ಸ್ಥಳಕ್ಕೆ ಆಗಮಿಸುತ್ತಾರೆ.

Leave a Comment