ಮನೆಯಲ್ಲಿ ತಾಯಿಯ ಸಾ ವು. ಮಂಟಪದಲ್ಲಿ ಹುಡುಗಿಯ ಜೊತೆ ಮದುವೆಯಾದ ಮಗ! ಆದರೂ ಈ ಮಗ ಗ್ರೇಟ್ ಕಣ್ರೀ

ಸಾಮಾನ್ಯವಾಗಿ ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದರೆ ಆ ಮನೆಯಲ್ಲಿ ಹನ್ನೊಂದು ದಿನಗಳ ಕಾಲ ಯಾವ ಶುಭ ಕಾರ್ಯಗಳು ನಡೆಯುವುದಿಲ್ಲ. ಒಂದು ವೇಳೆ ಶುಭಕಾರ್ಯಗಳು ಮುಂಚಿತವಾಗಿಯೇ ನಿಶ್ಚಯವಾಗಿದ್ದರೂ ಸಹ ಅದನ್ನು ಮುಂದೂಡಲಾಗುತ್ತದೆ. ಆದರೆ ಬಿಹಾರದಲ್ಲೊಂದು ವಿಚಿತ್ರ ಘಟನೆ ನಡೆದಿದೆ ಮನೆಯಲ್ಲಿ ತನ್ನ ಸ್ವಂತ ತಾಯಿಯೇ ಮೃತ ಪಟ್ಟಿದ್ದರೂ ಸಹ ಮಗ ಅದೇ ದಿನ ಮದುವೆ ಮಂಟಪದಲ್ಲಿ ತನ್ನ ಹುಡುಗಿಯ ಜೊತೆ ಮದುವೆಯಾಗಿರುವ ಘಟನೆ ನಡೆದಿರುವುದು ಎಲ್ಲರಲ್ಲಿ ಆಶ್ಚರ್ಯವನ್ನು ಮೂಡಿಸಿದೆ.

ಮಗ ಈ ಕೆಲಸವನ್ನು ಮಾಡಿದರು ಸಹ ಪ್ರತಿಯೊಬ್ಬರೂ ಈತನನ್ನು ಹೊಗಳುತ್ತಿದ್ದಾರೆ. ತಾಯಿ ಮೃತಪಟ್ಟಿದ್ದರು ಕೂಡ ಮಗ ಮದುವೆಯಾಗಿದ್ದಕ್ಕೆ ಜನರು ಏಕೆ ಹೊಗಳುತ್ತಿದ್ದಾರೆ ಎಂದು ನಿಮಗೆಲ್ಲ ಆಶ್ಚರ್ಯವಾಗಬಹುದು ಆದರೆ ಕಂಪ್ಲೀಟ್ ಸ್ಟೋರಿ ಒಮ್ಮೆ ಓದಿ ನಿಮಗೆ ತಿಳಿಯುತ್ತೆ.  ಬಿಹಾರದ ಕೇಂದು ಆಡೀಹ್ ಠಾಣೆ ವ್ಯಾಪ್ತಿಯ ನ್ಯೂ ಮೆರಿನ್ ಗೋಪಾಲೀಚಕ್ ಪ್ರದೇಶದಲ್ಲಿ ಈ ಒಂದು ಘಟನೆ ನಡೆದಿದೆ. ತಾಯಿಯ ಶವವನ್ನು ಮನೆಯಲ್ಲಿಟ್ಟು ಮದುವೆಯಾದ ಯುವಕನ ಹೆಸರು ಓಂ ಕುಮಾರ್ .

ಓಂ ಕುಮಾರ್ ಮತ್ತು ಸರೋಜ್ ಎಂಬ ಹುಡುಗಿಯ ಮದುವೆ ಜುಲೈ 10 ರಂದು ನಿಗದಿಯಾಗಿತ್ತು. ಓಂ ಕುಮಾರ್ ನ ತಾಯಿಗೆ ತನ್ನ ಮಗನ ಮದುವೆ ವಿಜೃಂಭಣೆಯಿಂದ ನಡೆಯಬೇಕು ಎಂಬ ಆಸೆಯಿತ್ತು. ತನ್ನ ಮಗನ ಮದುವೆಯ ದಿನಕ್ಕೂ ಒಂದು ವಾರದ ಹಿಂದೆ ತಾಯಿಗೆ ತೀವ್ರವಾದ ಅನಾರೋಗ್ಯ ಕಂಡು ಬಂದಿತು. ಮದುವೆಗೆ ಇನ್ನೇನು 2 ದಿನ ಇರುವಾಗ ಮಗನ ಬಳಿ ತಾಯಿ ಹೇಳುತ್ತಾಳೆ. ಮಗನೇ ನಾನು ಇನ್ನೂ 2 ದಿನ ಬದುಕುವುದು ಅಸಾಧ್ಯ. ತನ್ನ ಆರೋಗ್ಯ ತೀವ್ರ ಹದಗೆಟ್ಟಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ನಾನು ಉಸಿರು ಬಿಡುತ್ತೇನೆ. ಆದ್ದರಿಂದ ನನ್ನ ಕೊನೆಯ ಆಸೆಯನ್ನು ನೀನು ಪೂರೈಸು ಎಂದು ಹೇಳುತ್ತಾಳೆ.

ಆಗ ಓಂಕುಮಾರ್ ತನ್ನ ತಾಯಿಯ ಕೊನೆಯ ಆಸೆ ಏನು ಎಂದು ಕೇಳುತ್ತಾನೆ ಆಗ ತಾಯಿ ಹೇಳುತ್ತಾಳೆ ಒಂದು ವೇಳೆ ನಾನು ತೀರಿಕೊಂಡರು ಸಹ ನಿನ್ನ ಮದುವೆ ಮಾತ್ರ ನಿಲ್ಲಿಸಬಾರದು. ನಿನ್ನ ಮದುವೆ ಗ್ರಾಮಸ್ಥರೆಲ್ಲರ ಸಮ್ಮುಖದಲ್ಲಿ ವಿಜೃಂಭಣೆಯಿಂದಲೇ ನಡೆಯಬೇಕು ಎನ್ನುವುದು ನನ್ನ ಕೊನೆಯಾಸೆ ಎಂದು ಹೇಳುತ್ತಾಳೆ. ಜುಲೈ 8 ರಂದು ಓಂಕುಮಾರ್ ನ ತಾಯಿ ಅನಾರೋಗ್ಯದ ಕಾರಣ ಕೊನೆಯುಸಿರನ್ನು ಎಳಿಯುತ್ತಾಳೆ. ತನ್ನ ತಾಯಿ ತೀರಿಕೊಂಡಿರುವ ವಿಷಯ ತಿಳಿದ ಕೂಡಲೇ ಓಂ ಕುಮಾರ್ ತನ್ನ ತಾಯಿಯ ಕೊನೆ ಆಸೆಯನ್ನು ಅದೇ ದಿನ ಪೂರೈಸಲು ಇಚ್ಛೆಪಡುತ್ತಾನೆ.

ತಂದೆ ತಾಯಿ ತೀರಿಕೊಂಡ ದಿನವೇ ಓಂಕಾರ್ ಮದುವೆಯಾಗಲು ರೆಡಿಯಾದ. ಜುಲೈ 10 ರಂದು ನಡೆಯಬೇಕಿದ್ದ ಮದುವೆ ಜುಲೈ 8 ಕ್ಕೆ ನಡೆಯುತ್ತೆ. ತನ್ನ ತಾಯಿ ಮೃತಪಟ್ಟಿದ್ದ ದಿನವೇ ಓಂಕಾರ್ ಮದುವೆಯಾಗೋಕೆ ಸಿದ್ಧನಾಗಿದ್ದು ಏಕೆಂದರೆ.. ಇನ್ನೂ ಎರಡು ದಿನ ತಡಮಾಡಿ ಮದುವೆಯಾದರೆ ತಾಯಿಯ ಆಶೀರ್ವಾದವನ್ನು ಪಡೆಯೋಕೆ ಆಗಲ್ಲ. ಆದ್ದರಿಂದ ಅದೇ ದಿನ ತಾಯಿ ಮೃತಪಟ್ಟಿದ್ದ ದಿನವೇ ಮದುವೆಯಾಗಿ ಓಂಕಾರ ತನ್ನ ಹೆಂಡತಿ ಒಟ್ಟಿಗೆ ತಾಯಿಯ ಮೃತದೇಹಕ್ಕೆ ನಮಸ್ಕರಿಸಿ ತಾಯಿಯ ಸಮ್ಮುಖದಲ್ಲೇ ಮದುವೆಯಾಗಿದ್ದಾರೆ. ತಾಯಿಯ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದಿದ್ದಾನೆ. ತಾಯಿಯ ಪಾರ್ಥಿವ ಶರೀರದ ಪಾದಗಳನ್ನು ಎತ್ತಿ ತಲೆಯ ಮೇಲೆ ಇಟ್ಟು ಆಶೀರ್ವಾದ ಪಡೆದಿದ್ದಾರೆ ಓಂಕಾರ್ ದಂಪತಿ. ಈ ಮೂಲಕ ತಾಯಿಯ ಶರೀರವನ್ನು ಚಿತೆಗೆ ಏರಿಸುವ ಮುನ್ನ ಮದುವೆಯಾಗಿದ್ದಾನೆ ಮಗ. ಈ ಮದುವೆಗೆ ಗ್ರಾಮಸ್ಥರೆಲ್ಲರೂ ಸೇರಿದ್ದರಿಂದ ಮದುವೆ ಬಹಳ ವಿಜೃಂಭಣೆಯಿಂದ ನೆರವೇರಿಸಲಾಗಿದೆ.

Leave a Comment