ನಿತ್ಯಾ ಮೆನನ್ ಅವರು ಎಂದರೆ ಯಾರಿಗೆ ತಾನೆ ಗೊತ್ತಿಲ್ಲ. ದುಂಡುಮುಖದ ಸುಂದರಿ, ಮೈತುಂಬ ಸೌಂದರ್ಯವನ್ನು ತುಂಬಿಕೊಂಡಿರುವ ಚೆಲುವೆ ನಿತ್ಯಾ ಮೆನನ್. ಇವರು ದಕ್ಷಿಣ ಭಾರತದ ಬಹು ಪ್ರಸಿದ್ಧ ನಟಿ. ಬೆಂಗಳೂರಿನ ಮೂಲದ ನಿತ್ಯಾ ಮೆನನ್ ಅವರು ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಭಾಷೆಗಳನ್ನು ಅಭಿನಯ ಮಾಡಿದ್ದಾರೆ. ಮೂಲತಃ ಇವರು ಕನ್ನಡದವರೇ ಆದರೂ ಕನ್ನಡ ಭಾಷೆಗಿಂತ ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಹೆಚ್ಚಾಗಿ ನಟನೆ ಮಾಡಿದ್ದಾರೆ.
ಅಷ್ಟಕ್ಕೂ ನಿತ್ಯಾ ಮೆನನ್ ಅವರು ಕರ್ನಾಟಕದವರೇ ಅಂತ ನಮಗೆಲ್ಲಾ ತಿಳಿದಿದ್ದು, ಮೈನಾ ಚಿತ್ರದ ಮೂಲಕ ಅದಾದ ನಂತರ ನಿತ್ಯಾ ಮೆನನ್ ಅವರು ಮತ್ತೆ ಕನ್ನಡಿಗರ ಮುಂದೆ ಪ್ರತ್ಯಕ್ಷವಾಗಿದ್ದು ಕೋಟಿಗೊಬ್ಬ-೨ ಚಿತ್ರದಲ್ಲಿ. ಇವರ ಸೌಂದರ್ಯಕ್ಕೆ ತಕ್ಕ ಹಾಗೆ ಇವರ ನಟನೆ ಕೂಡ ಅದ್ಭುತ. ಇದೀಗ ನಿತ್ಯಾ ಮೆನನ್ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ನಡೆಯುತ್ತಿದೆ. ನಿತ್ಯಾ ಮೆನನ್ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದೂ ಕೂಡ ನಿತ್ಯಾ ಮೆನನ್ ಅವರು ಲವ್ ಮ್ಯಾರೇಜ್ ಆಗಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.
ನಿತ್ಯಾ ಮೆನನ್ ಅವರಿಗೆ ಇದೀಗ 34 ವರ್ಷ ವಯಸ್ಸು ಆಗಿದೆ . ಇದು ಸಾಮಾನ್ಯವಾಗಿ ಎಲ್ಲಾ ನಟಿಯರು ಮದುವೆ ಆಗುವಂತಹ ವಯಸ್ಸು. ಕೆಲವು ವರ್ಷಗಳ ಹಿಂದೆ ನಿತ್ಯಾ ಮೆನನ್ ಅವರು ಕೇರಳದ ಶ್ರೀಮಂತ ಬ್ಯುಸಿನೆಸ್ ಮ್ಯಾನ್ ಒಬ್ಬರನ್ನು ಮದುವೆಯಾಗುತ್ತಾರೆ ಎಂಬ ಸುದ್ದಿ ಹರಡಿತ್ತು ಆದರೆ ನಿತ್ಯಾ ಮೆನನ್ ಅವರು ಇದರ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಲಿಲ್ಲ ಇದೀಗ ನಿತ್ಯ ಮನೆಯವರು ಮದುವೆ ಆಗುತ್ತಿರುವ ಹುಡುಗ ಬಿಸಿನೆಸ್ ಮ್ಯಾನ್ ಅಲ್ಲ ಬದಲಾಗಿ ಈತ ಮಲಯಾಳಂ ಚಿತ್ರರಂಗದ ಸ್ಟಾರ್ ನಟ ನಂತೆ..
ಸಂದರ್ಶನ ಒಂದರಲ್ಲಿ ನಿತ್ಯ ಮೆನನ್ ಅವರು ಹೇಳುವ ಪ್ರಕಾರ ಅವರಿಗೆ ಅರೇಂಜ್ ಮ್ಯಾರೇಜ್ ಗಿಂತ ಲವ್ ಮ್ಯಾರೇಜ್ ಮೇಲೆ ತುಂಬಾ ಒಲವಿದೆಯಂತೆ. ತಾನು ಮದುವೆಯಾದರೆ ಪ್ರೀತಿಸಿ ಮದುವೆಯಾಗುತ್ತೇನೆಂದು ನಿತ್ಯಾ ಮೆನನ್ ಹೇಳಿದ್ದರು. ಈ ವರ್ಷ ನಿತ್ಯಾ ಮೆನನ್ ಅವರು ತಮ್ಮ ವೈವಾಹಿಕ ಜೀವನದ ಮಹತ್ತರ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಮಲಯಾಳಂ ಚಿತ್ರರಂಗದ ಯುವ ನಟಿ ನಿತ್ಯಾ ಮೆನನ್ ಮದುವೆಯಾಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ ಆದರೆ ಆ ನಟನ ಹೆಸರನ್ನು ಮಾತ್ರ ಎಲ್ಲಿಯೂ ಬಹಿರಂಗಪಡಿಸಿಲ್ಲ.
ಸದ್ಯಕ್ಕೆ ನಿತ್ಯಾ ಮೆನನ್ ಅವರು ಯಾವುದೇ ಸಿನಿಮಾಗಳಲ್ಲೂ ನಟಿಸುತ್ತಿಲ್ಲ. ಇದೀಗ ನಿತ್ಯಾ ಮೆನನ್ ಅವರು ತೆಲುಗು ಭಾಷೆಯ ಇಂಡಿಯನ್ ಐಡಲ್ ಎಂಬ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿತ್ಯಾ ಮೆನನ್ ಅವರು ಸೆಲೆಬ್ರಿಟಿಯಾಗಿ ಕೂಡ ತಮ್ಮ ವೈಯಕ್ತಿಕ ಬದುಕಿನ ಕೆಲ ವಿಷಯಗಳನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದಾರೆ ಹೊರತು ಎಲ್ಲಿಯೂ ಕೂಡ ತಮ್ಮ ಪ್ರೇಮದ ವಿಚಾರವಾಗಿ ತನ್ನ ಮದುವೆ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಇಲ್ಲಿಯವರೆಗೂ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ.ಆದರೆ ಇದೀಗ ಬಲ್ಲ ಮೂಲಗಳ ಪ್ರಕಾರ ನಿತ್ಯಾ ಮೆನನ್ ಅವರು ಯುವ ನಟನ ಕೈಹಿಡಿಯಲಿರೊದು ಪಕ್ಕಾ ಎಂಬುದು ಕೇಳಿಬರುತ್ತಿದೆ