ಈ ದೇವಿಯಲ್ಲಿ ಭಕ್ತಿಯಿಂದ ಬೇಡಿಕೊಂಡರೆ ನಿಮಿಷದಲ್ಲೇ ಕಷ್ಟ ಪರಿಹರಿಸುತ್ತಾಳೆ

ಈ ದೇವಿಯ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡರೆ ಸಾಕು ನಿಮಿಷಗಳಲ್ಲಿ ನಿಮ್ಮ ಕಷ್ಟಗಳು ಕಳೆಯುವುದು ಖಚಿತ. ಹಾಗಾಗಿ ಈ ದೇವಿಯನ್ನು ನಿಮಿಷಾಂಬ ದೇವಸ್ಥಾನ ಅಂತಾ ಕರೆಯುತ್ತಾರೆ. ಸಾಕ್ಷಾತ್ ಪಾರ್ವತಿ ದೇವಿ ನೆಲಸಿದ ಪುಣ್ಯ ಕ್ಷೇತ್ರ ಇದಾಗಿದೆ. ಈ ದೇವಿಗೆ ನೀವು ಸೀರೆ, ತುಪ್ಪದ ದೀಪ ಹಚ್ಚುತ್ತೇವೆ ಎಂದು ಹರಕೆ ಮಾಡಿಕೊಂಡರೆ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ.

ಈ ದೇವಿಯ ಮಹಿಮೆ ಎಂದರೆ ಒಮ್ಮೆ ಈಶ್ವರನ ಆಜ್ಞೆಯಂತೆ ಮುಕ್ತ ಋಷಿಮುನಿಗಳು ಹೋಮವನ್ನ ಮಾಡ್ತಾರೇ ಆಗ ಇಬ್ಬರು ರಾಕ್ಷಸರು ಹೋಮಕ್ಕೆ ಅಡ್ಡಿಸುತ್ತಾರೆ. ಋಷಿಗಳು ಪಾರ್ವತಿಯನ್ನು ಬೇಡಿಕೊಂಡಾಗ. ಹೋಮ ಕುಂಡದಿಂದ ಪಾರ್ವತಿ ದೇವಿ ಉದ್ಭವ ವಾಗಿ ನಿಮಿಷಗಳಲ್ಲೇ ರಾಕ್ಷಸರನ್ನು ಸಂಹರಿಸುತ್ತಾಳೆ. ಆಗ ಭಕ್ತರು ನಿಮಿಷಾಂಬ ದೇವಿ ಎಂದು ಕೊಗುತ್ತಾರೆ. ಅಂದಿನಿಂದ ಈ ದೇವಿಯನ್ನು ನಿಮಿಷಾಂಬ ದೇವಿ ಎಂದು ಕರೆಯುತ್ತಾರೆ.

ಈ ದೇವಿಯ ದೇವಸ್ಥಾನಕ್ಕೆ ಬಂದು ಯಾರು ಭಕ್ತಿಯಿಂದ ನಿಂಬೆ ಹಣ್ಣಿನ ಆರತಿ ಮಾಡ್ತಾರೋ ಅಥವಾ ಸೀರೆ ಬಳೆಗಳ ಹರಕೆ ತೀರಿಸ್ತಾರೋ ಅವರ ಸಕಲ ಸಂಕಷ್ಟ ಗಳು ಪರಿಹಾರ ಆಗೋದು ಖಚಿತ. ಎಷ್ಟೋ ಮಕ್ಕಳಾಗದವರಿಗೆ ಮಕ್ಕಳಾಗಿವೆ, ಮದುವೆಯಾಗದ ಹೆಣ್ಣು ಮಕ್ಕಳು ಸೀರೆ ಬಳೆ ಹರಕೆ ನೀಡಿದ ಬಳಿಕ ಕಂಕಣ ಭಾಗ್ಯ ಕೂಡಿ ಬರುತ್ತದೆ.

ಈ ದೇವಿಯನ್ನು ಭಕ್ತಿಯಿಂದ ಬೇಡಿ ಮಲಗಿದರೆ ದೇವಿಯು ಕನಸಿನಲ್ಲಿ ಬಂದು ಉತ್ತರವನ್ನು ನೀಡುತ್ತಾಳೆ ಈ ಕ್ಷೇತ್ರದ ಮತ್ತೊಂದು ಮಹಿಮೆ. ಈ ನಿಮಿಷಾಂಬ ಕ್ಷೇತ್ರ ಇರುವುದು ನಮ್ಮ ಕರ್ನಾಟಕದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಿಂದ 5 ಕಿ.ಮೀ ದೂರದಲ್ಲಿದೆ.

Leave a Comment