ಮನುಷ್ಯರಲ್ಲಿ ಜಾಗೃತ ಮನಸ್ಸು ಮತ್ತು ಅಜಾಗೃತ ಮನಸ್ಸು ಎಂದು ಇರತ್ತೆ. ನಮ್ಮಲ್ಲಿ ಅಜಾಗೃತ ಮನಸ್ಸಿನ ಶಕ್ತಿ ಜಾಗೃತ ಮನಸ್ಸಿನ ಶಕ್ತಿಗಿಂತ ಹೆಚ್ಚು ಇರತ್ತೆ. ನಮ್ಮ ಅಜಾಗೃತ ಮನಸ್ಸಿನ ಶಕ್ತಿ ಯಾವಾಗ ಅದರ ಕಾರ್ಯ ನಿರ್ವಹಿಸುತ್ತದೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನ ತಿಳಿಯೋಣ ಬನ್ನಿ.
ನಮ್ಮ ಈ ಅಜಾಗೃತ ಮನಸ್ಸು ನಾವು ರಾತ್ರಿ ಮಲಗುವ ವೇಳೆಯಲ್ಲಿ ಇದರ ಕಾರ್ಯ ನಿರ್ವಹಿಸುತ್ತದೆ ಅಂದರೆ ನಮ್ಮ ದಿನದ ಕೊನೆಯ ೫/೧೦ ನಿಮಿಷಗಳಲ್ಲಿ ಇದರ ಶಕ್ತಿ ಹೆಚ್ಚು ಇರತ್ತೆ. ಆ ಸಮಯದಲ್ಲಿ ನಾವು ನಮ್ಮ ಮನಸಲ್ಲಿ ಏನು ಯೋಚನೆ ಮಾಡ್ತಾ ಇರ್ತೀವಿ ಅದೇ ಯೋಚನೆ ಮಾರನೇ ದಿನ ನಮ್ಮ ತಲೆಯಲ್ಲಿರತ್ತೆ ಅಂದ್ರೆ ನಾವು ಮಲಗುವ ಮೊದಲು ನಮ್ಮ ಚಿಂತನೆ ಹೇಗೆ ಇರತ್ತೋ ಅದಕ್ಕೆ ತಕ್ಕಂತೆ ನಮ್ಮ ಅಜಾಗೃತ ಮನಸ್ಸು ಸ್ಪಂದಿಸುತ್ತದೆ. ನಮ್ಮ ಅಜಾಗೃತ ಮನಸ್ಸು ಸದಾಕಾಲ ಕಾರ್ಯ ನಿರ್ವಹಿಸುತ್ತಾ ಇದ್ದರು ರಾತ್ರಿ ಸಮಯ ಅದರ ಶಕ್ತಿ ಹೆಚ್ಚು ಇರತ್ತೆ.
ದಿನವಿಡೀ ನಮ್ಮ ಯೋಚನಾ ಶಕ್ತಿ ಹೇಗೆ ಇರತ್ತೊ ರಾತ್ರಿ ಕೂಡ ಈ ಅಜಾಗೃತ ಮನಸ್ಸು ಅದರ ಕುರಿತೇ ಚಿತಿಸುತ್ತಿರತ್ತೆ. ನಾವು ನಕಾರಾತ್ಮಕವಾಗಿ ಅಥವಾ ಸಕಾರಾತ್ಮಕವಾಗಿ ಹೇಗೆ ಯೋಚನೆ ಮಾಡಿದ್ರೆ ಹೇಗಿರತ್ತೆ ಅನ್ನೋದು ನಮಗೂ ಗೊತ್ತು. ರಾತ್ರಿ ಮಲಗುವಾಗ ನಾವು ಒಂದು ವಿಷಯದ ಕುರಿತು ನಕಾರಾತ್ಮಕ ಚಿಂತನೆ ನಡೆಸಿ ಮಲಗಿದರೆ ಮಾರನೇ ದಿನ ಕೂಡ ನಮ್ಮೆಲ್ಲ ಯೋಚನೆಗಳು ನಕಾರಾತ್ಮಕವಾಗಿ ಇರತ್ತೆ ಹಾಗಾಗಿ ನಾವು ರಾತ್ರಿ ಮಲಗುವ ಒಂದೈದು ನಿಮಿಷ ಮೊದಲು ಸಕಾರಾತ್ಮಕ ವಿಚಾರಗಳನ್ನು ನಮ್ಮ ತಲೆಯಲ್ಲಿ ಮನಸ್ಸಿನಲ್ಲಿ ತುಂಬಿಕೊಂಡು ಮಲಗಿದರೆ ಬೆಳಿಗ್ಗೆ ನಮ್ಮ ಮನಸ್ಸು ಕೂಡ ಹಗುರವಾಗಿ ಇರತ್ತೆ ಮತ್ತು ಎಲ್ಲಾ ಕೆಲಸಗಳಲ್ಲೂ ಚಟುವಟಿಕೆ ಇಂದ ಕೂಡಿರತ್ತೆ. ಆದ್ರೆ ದಿನವಿಡೀ ಸಕಾರಾತ್ಮಕ ವಿಚಾರಗಳನ್ನು ಮಾಡಿ ರಾತ್ರಿ ಮಲಗುವಾಗ ಮಾತ್ರ ನಕಾರಾತ್ಮಕ ವಿಚಾರ ಮಾಡಿದ್ರೆ ನಾವು ಹಗಲು ಮಾಡಿದ ಸಕಾರಾತ್ಮಕ ವಿಚಾರಗಳು ಯಾವುದೇ ಪ್ರಯೋಜನಕ್ಕೆ ಬಾರದೆ ಹೋಗುತ್ತದೆ. ನಾವು ಮಾಡೋ ಓದು ದೊಡ್ಡ ತಪ್ಪು ಏನು ಅಂದ್ರೆ ರಾತ್ರಿ ಮಲಗುವಾಗ ಚಿಂತೆಯನ್ನೆಲ್ಲ ನಮ್ಮ ತಲೆಯಲ್ಲಿ ಹಾಗೆ ಇಟ್ಟುಕೊಂಡು ಮಲಗೋದು ಅಯ್ಯೋ ಯಾರೋ ನಂಗೆ ಏನೋ ಹೇಳಿದ್ರು ನಂಗೆ ಇವತ್ತು ಈ ಕೆಲ್ಸ ಮಾಡೋಕೆ ಆಗಿಲ್ಲ ಹೀಗೆ ಈ ತರಹದ ಹತ್ತು ಹಲವಾರು ಸಮಸ್ಯೆಗಳನ್ನ ಇಟ್ಟುಕೊಂಡೇ ಇರ್ತೀವಿ ಇದರಿಂದ ನಿದ್ರಾಹೀನತೆ ಉಂಟಾಗುತ್ತದೆ.
ಇದನ್ನ ತಪ್ಪಿಸೋಕೆ ಒಂದು ಸರಳ ಉಪಾಯ ಏನು ಅಂದ್ರೆ ನಾವು ರಾತ್ರಿ ಮಲಗುವ ಐದು ನಿಮಿಷ ಮೊದಲು ನಮ್ಮೆಲ್ಲ ನಕಾರಾತ್ಮಕ ಯೋಚನೆಗಳನ್ನು ಆದಷ್ಟು ತಲೆಯಿಂದ ತೆಗೆದು ಓಡಿಸಿ ಬರಿ ಸಕಾರಾತ್ಮಕ ವಿಚಾರಗಳನ್ನು ಮಾತ್ರ ಇಟ್ಟುಕೊಳ್ಳೋಣ ಇದಕ್ಕೆ ಏನು ಮಾಡೋದು ಅಂದ್ರೆ ಧ್ಯಾನ, ಮಲಗುವ ಮೊದಲು ಒಂದೆರಡು ನಿಮಿಷ ಕಣ್ಣು ಮುಚ್ಚಿ ಕುಳಿತು ನಿಮ್ಮ ಇಷ್ಟ ದೇವರನ್ನು ಮನಸಲ್ಲೇ ನೆನೆದು ಧ್ಯಾನ ಮಾಡಿ ಆಗ ನಮ್ಮ ಮನಸ್ಸು ಮತ್ತು ಮೆದುಳು ಎರಡು ಶಾಂತವಾಗಿ ಇರತ್ತೆ.
ನಮ್ಮ ಅಜಾಗೃತ ಮನಸ್ಸು ಒಂದು ದೋಷವನ್ನು ಹೊಂದಿದೆ ಏನು ಅಂದ್ರೆ ನಾವು ಮನಸಲ್ಲಿ ಏನು ಯೋಚನೆ ಮಾಡ್ತೀವಿ ಅದು ಅದನ್ನೇ ಯೋಚಿಸುತ್ತಾ ಇರತ್ತೆ ಅದಕ್ಕೆ ಯಾವುದು ಸಾರಿ ಯಾವುದು ತಪ್ಪು ಅಥವಾ ಯಾವುದು ನಿಜ ಯಾವುದು ಸುಳ್ಳು ಎಂಬ ವಿಷಯ ತಿಳಿಯಲ್ಲ ಹಾಗಾಗಿ ಅದು ನಾವು ಯಾವುದರ ಬಗ್ಗೆ ಯೋಚನೆ ಮಾಡ್ತೀವಿ ಅದನ್ನೇ ಅದು ಸಲಹೆಯಾಗಿ ತೆಗೆದುಕೊಳ್ಳತ್ತೆ
ಹಾಗಾಗಿ ನಮ್ಮ ಯೋಚನೆಗಳು ಎನಿವೇ ನಾವು ಯಾವುದನ್ನು ತಗೋಬೇಕು ಯಾವುದನ್ನು ಬಿಡಬೇಕು ಅನ್ನೋದು ನಮಗೆ ಬಿಟ್ಟ ವಿಷಯ. ಆದಷ್ಟು ಸಕಾರಾತ್ಮಕ ವಿಷಯಗಳನ್ನು ನಮ್ಮಲ್ಲಿ ತುಂಬಿಕೊಳ್ಳೋಣ. ಇದರಿಂದಾಗಿ ನಮ್ಮ ದಿನವೆಲ್ಲಾ ಸಂತೋಷವಾಗಿ ಇರತ್ತೆ ಇದರಿಂದ ನಮ್ಮ ಜೀವನ ಕೂಡ ನೆಮ್ಮದಿಯಿಂದ ಇರತ್ತೆ.