ಸೂರ್ಯೋದಯಕ್ಕೆ ಮುಂಚೆ ಎದ್ದರೆ ಎಷ್ಟೆಲ್ಲ ಲಾಭವಿದೆ ಗೊತ್ತೇ

ಎಲ್ಲರ ಮನೆಯಲ್ಲೂ ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಎದ್ದು ಮನೆ ಮುಂದೆ ರಂಗೋಲಿ ಹಾಕುವ ಸಂಪ್ರದಾಯ ರೂಢಿಯಲ್ಲಿ ಇತ್ತು ಕಾಲ ಕ್ರಮೇಣ ಆ ಸಂಪ್ರದಾಯಗಳೆಲ್ಲ ಕಡಿಮೆ ಆಗುತ್ತಾ ಬಂದಿವೆ. ಇಂದಿಗೂ ಕೆಲವೊಂದಿಷ್ಟು ಮನೆಗಳಲ್ಲಿ ಸೂರ್ಯೋದಯಕ್ಕೆ ಮೊದಲು ಏಳುವ ಅಭ್ಯಾಸ ಇರುವ ಜನರನ್ನು ನಾವು ಕಾಣುತ್ತೇವೆ. ನಮ್ಮ ಹಿರಿಯರು ಯಾಕೆ ನಾವು ಸೂರ್ಯೋದಯಕ್ಕೆ ಮೊದಲು ಏಳಬೇಕು ಅಂತ ಹೇಳ್ತಾ ಇದ್ರು ಅನ್ನುವುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ..

ನಮ್ಮ ಹಿರಿಯರು ಹಾಗೇ ಹೇಳೋದಿಕ್ಕೆ ಕಾರಣ ಇದರಲ್ಲಿ ದೈಹಿಕ, ಮಾನಸಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ. ಅದನ್ನ ಒಂದೊಂದೇ ಆಗಿ ತಿಳಿಯೋಣ. ನಮ್ಮ ದೇಹದಲ್ಲಿ ಒಟ್ಟು ೮ ಚಕ್ರಗಳು ಇರುತ್ತವೆ ಇವು ನಮ್ಮ ದೈನಂದಿನ ಜೀವನದಲ್ಲಿ ತುಂಬಾ ಸಹಾಯಕಾರಿ. ಬೇಗ ಮಲಗಿ ಬೇಗ ಏಳುವುದರಿಂದ ದೈಹಿಕ ಚಕ್ರ ಸರಿಯಾಗಿ ಇರುತ್ತದೆ ಇದರಿಂದ ದೇಹಕ್ಕೆ ಬೇಕಾದ ನಿದ್ದೆ ಸರಿಯಾಗಿ ಆಗಿ ನಿದ್ರಾ ಹೀನತೆ ಆಗುವುದಿಲ್ಲ.

ಶಿಲಾಯುಗ ಕಾಲದಿಂದಲೂ ಮನುಷ್ಯರು ಕತ್ತಲಾಗುತ್ತಿದ್ದಂತೆ ಬೇಗ ಮಲಗಿ ಸೂರ್ಯೋದಯಕ್ಕೆ ಮೊದಲು ಎಳುತ್ತಿದ್ದರಂತೆ ಅದರಂತೆಯೇ ಮುಂದಿನ ಪೀಳಿಗೆಯವರು ಜೀನ್ಸ್ ಹೊಂದಿಕೊಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ ಅಂದ್ರೆ ತಡವಾಗಿ ಮಲಗಿ ತಡವಾಗಿ ಏಳುವುದರಿಂದ ದೇಹಕ್ಕೆ ಅದನ್ನು ನಿಭಾಯಿಸಲು ಕಷ್ಟ. ಹೀಗೆ ಲೇಟಾಗಿ ಮಲಗಿ ಲೇಟಾಗಿ ಏಳುವವರಿಗೆ ಅಜೀರ್ಣ, ಮಲಬದ್ಧತೆಯಂತಹ ಹಲವಾರು ಸಮಸ್ಯೆಗಳು ಕಾಡುತ್ತವೆ.

ಬ್ರಾಹ್ಮೀ ಮುಹೂರ್ತ ಅಂದ್ರೆ, ಸೂರ್ಯ ಉದಯ ಆಗುವ ಒಂದೂವರೆ ಗಂಟೆ ಮೊದಲು, e ಸಮಯದಲ್ಲಿ ತಣ್ಣನೆಯ ಗಾಳಿ ಬೀಸುತ್ತಾ ಇರುತ್ತದೆ. ಸೂರ್ಯೋದಯದ ಕಾಲ ಬಂದಾಗ ನಮ್ಮ ಶರೀರ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು, ಇನ್ನೊಂದು ದಿನವನ್ನು ಸಮರ್ಥವಾಗಿ ನಿಭಾಯಿಸಲು ನಮ್ಮನ್ನು ಎಚ್ಚರಿಸಲು ಪ್ರಾರಂಭಿಸುತ್ತದೆ. ನಮ್ಮ ಶರೀರ ಕಾರ್ಯ ನಿರ್ವಹಿಸಲು “ಕಾರ್ಟಿಸೋಲ್” ಎಂಬ ರಾಸಾಯನಿಕ ಕಾರಣ. ರಕ್ತದಲ್ಲಿ ಈ ಕಾರ್ಟಿಸೋಲ್ ನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ನಮ್ಮ ದೇಹದಲ್ಲಿ ರಕ್ತ ಸಂಚಾರ ಪ್ರಾರಭ ಆಗತ್ತೆ. ರಕ್ತದ ಒತ್ತಡ ಹೆಚ್ಚಿ ಗ್ಲೈಕೋಜನ್ ಗ್ಲುಕೋಜ್ ಆಗಿ ಪರಿವರ್ತನೆ ಆಗುತ್ತದೆ. ನಮ್ಮ ಮನಸ್ಸು, ಮೆದುಳು ಎರಡೂ ಜಾಗೃತಗೊಂಡು ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಸಹಾಯ ಆಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ಹಿರಿಯರು ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಏಳಬೇಕು ಎಂದು ಹೇಳುತ್ತಾರೆ.

Leave a Comment